Karnataka Politics : 5 ವರ್ಷದಿಂದ ಜನರ ಒಡನಾಡಿಯಾಗಿ ಕೆಲಸ ಮಾಡಿರುವೆ

By Kannadaprabha News  |  First Published Feb 11, 2023, 5:25 AM IST

ಕರ್ನಾಟಕದ ಡಿಸಿಎಂ ಮತ್ತು ಕೊರಟಗೆರೆಯ ಶಾಸಕನಾಗಿ 5 ವರ್ಷ ಜನರ ಒಡನಾಡಿಯಾಗಿ ಪ್ರತಿ ಹಳ್ಳಿಯಲ್ಲೂ ಅಭಿವೃದ್ಧಿಯ ಕೆಲಸ ಮಾಡಿದ್ದೇನೆ. ಆದರೇ ನಾನು ಜನರ ಕೈಗೆ ಸೀಗೋದೇ ಇಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ನಾಯಕರು ಆರೋಪ ಮಾಡ್ತಾರೇ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಆಕ್ರೋಶ ವ್ಯಕ್ತಪಡಿಸಿದರು.


 ಕೊರಟಗೆರೆ :  ಕರ್ನಾಟಕದ ಡಿಸಿಎಂ ಮತ್ತು ಕೊರಟಗೆರೆಯ ಶಾಸಕನಾಗಿ 5 ವರ್ಷ ಜನರ ಒಡನಾಡಿಯಾಗಿ ಪ್ರತಿ ಹಳ್ಳಿಯಲ್ಲೂ ಅಭಿವೃದ್ಧಿಯ ಕೆಲಸ ಮಾಡಿದ್ದೇನೆ. ಆದರೇ ನಾನು ಜನರ ಕೈಗೆ ಸೀಗೋದೇ ಇಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ನಾಯಕರು ಆರೋಪ ಮಾಡ್ತಾರೇ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಆಕ್ರೋಶ ವ್ಯಕ್ತಪಡಿಸಿದರು.

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಯಾದವ ಸಮುದಾಯದ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಕೊರಟಗೆರೆ ಕ್ಷೇತ್ರದ ಜನತೆಯ ಆರ್ಶೀವಾದದಿಂದ ನನಗೇ ಕೆಪಿಸಿಸಿ ಅಧ್ಯಕ್ಷ, ಹೃಹ ಸಚಿವ, ಡಿಸಿಎಂ ಹುದ್ದೆ ದೊರೆತಿದೆ. ಭಾರತದ ಯಾವುದೇ ರಾಜ್ಯಕ್ಕೆ ಹೋದ್ರು ಅಲ್ಲಿ ಕೊರಟಗೆರೆ ಅಂದ್ರೇ ಡಾ.ಜಿ.ಪರಮೇಶ್ವರ್‌ ಅಂತಾರೇ. ಕೊರಟಗೆರೆ ಕ್ಷೇತ್ರಕ್ಕೆ ಕಳೆದ 5 ವರ್ಷದಲ್ಲಿ 2500 ಕೋಟಿ ಅನುದಾನ ತಂದು ಮತದಾರರ ಋುಣ ತೀರಿಸುವ ಕೆಲಸ ಮಾಡಿದ್ದೇನೆ. ಅಂಕಿ ಅಂಶದ ದಾಖಲೆಯ ಪುಸ್ತಕ ನೀಡಿ 2023ರ ಚುನಾವಣೆಗೆ ಹೋಗ್ತಿದ್ದೇನೆ ಎಂದು ತಿಳಿಸಿದರು.

ತುಮಕೂರು ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಣ್ಣಮುದ್ದಯ್ಯ ಮಾತನಾಡಿ, 2023ಕ್ಕೆ ಕೊರಟಗೆರೆ ಕ್ಷೇತ್ರದಿಂದ ಡಾ.ಜಿ.ಪರಮೇಶ್ವರ್‌ ಮತ್ತೇ ಶಾಸಕರಾದ್ರೇ ಕರ್ನಾಟಕ ರಾಜ್ಯದ ಸಿಎಂ ಆಗ್ತಾರೇ ಎಂದರು.

Assembly election: ಕಾಂಗ್ರೆಸ್‌ ಗೆದ್ದರೆ ಇಂಡಿ ಪ್ರತ್ಯೇಕ ಜಿಲ್ಲೆ ಖಚಿತ: ಯಶವಂತರಾಯಗೌಡರ ಮತಬೇಟೆಗೆ ಹೊಸ ಅಸ್ತ್ರ

ತುಮಕೂರು ಡಿಸಿಸಿ ಬ್ಯಾಂಕು ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಡಾ.ಜಿ.ಪರಮೇಶ್ವರ್‌ ಜೊತೆ ಗೊಲ್ಲ ಸಮುದಾಯ 30 ವರ್ಷದಿಂದ ಇದ್ದೀವಿ. 2023ಕ್ಕೆ ಪರಮೇಶ್ವರ್‌ ಕಡೆಯ ಚುನಾವಣೆ ಆಗಲಿದೆ. ಜೇಬುಗಳ್ಳರ ಬಗ್ಗೆ ಎಚ್ಚರ ಅಗತ್ಯ. ಯಾರು ಒತ್ತಡಕ್ಕೆ ಒಳಗಾಗದೇ ಒಂದಾಗಿ. ನಾವೆಲ್ಲರೂ ಮತ್ತೆ ಪರಮೇಶ್ವರ್‌ಗೆ ಆರ್ಶೀವಾದ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವೇಣುಗೋಪಾಲ್‌, ಓಬಿಸಿ ಜಿಲ್ಲಾಧ್ಯಕ್ಷ ಪುಟ್ಟರಾಜು, ಕೊರಟಗೆರೆ ಅಧ್ಯಕ್ಷ ಆನಂದ್‌, ತಾಪಂ ಮಾಜಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಸದಸ್ಯ ವೀರಣ್ಣ, ಗ್ರಾಪಂ ಅಧ್ಯಕ್ಷರಾದ ರಾಮಕೃಷ್ಣಯ್ಯ, ಪಾವರ್ತಮ್ಮ, ಶಿವರಾಮಯ್ಯ, ಯಾದವ ಮುಖಂಡರಾದ ರಂಗನಾಥ, ಪುಟ್ಟಣ್ಣ, ವೆಂಕಟೇಶ್‌, ಕೃಷ್ಣಯ್ಯ, ಚಂದ್ರು, ಲಕ್ಷ್ಮೇನರಸಪ್ಪ ನರೇಂದ್ರ, ಮುತ್ತುರಾಜು, ಶಿವರಾಮು, ಬಸವರಾಜು, ಕಾಂತರಾಜು, ನರಸಿಂಹರಾಜು, ನಾಗರಾಜು ಸೇರಿದಂತೆ ಇತರರು ಇದ್ದರು.

ಅಭಿಮಾನಕ್ಕೆ ಕಣ್ಣೀರಿಟ್ಟಮಾಜಿ ಡಿಸಿಎಂ:

ಡಾ.ಜಿ.ಪರಮೇಶ್ವರ್‌ ಸಿಎಂ ಆಗಲೆಂದು ಮಧುಗಿರಿ ತಾಲೂಕು ಹುಣಸೇಮರದಟ್ಟಿಯ ಗೌಡಮುದ್ದಯ್ಯ ಕಳೆದ 25 ವರ್ಷದಿಂದ ಗಡ್ಡ ಬಿಟ್ಟಿದ್ದಾರೆ. ನಾನು ಆತನಿಗೆ ಏನೂ ಸಹಾಯ ಮಾಡಿಲ್ಲ. ಅವರ ಅಭಿಮಾನಕ್ಕೆ ನಾನು ಏನು ಕೊಡಲು ಸಾಧ್ಯವಿಲ್ಲ. ಯಾದವ ಸಮಾಜದ ಗೌಡಮುದ್ದಯ್ಯನ ಅಭಿಮಾನಕ್ಕೆ ನಾನೆಂದು ಚಿರಋುಣಿ ಆಗಿದ್ದೇನೆ. ನಾನು ಸಿಎಂ ಆಗೇ ಆಗ್ತೀನಿ ಅನ್ನುವ ವಿಶ್ವಾಸ ನನಗಿಂತ ಹೆಚ್ಚು ಆತನಿಗಿದೆ. ಯಾದವ ಸಮುದಾಯ ನನ್ನನ್ನು ಸಾಕಿ ಬೆಳೆಸಿದೆ ಎಂಬುದಕ್ಕೆ ಈತನೇ ಪ್ರಮುಖ ಸಾಕ್ಷಿ ಎಂದು ಯಾದವ ಸಮುದಾಯದ ವೇದಿಕೆಯಲ್ಲೇ ಪರಂ ಕಣ್ಣೀರಿಟ್ಟಘಟನೆ ನಡೆದಿದೆ.

ಕೊರಟಗೆರೆ ಕ್ಷೇತ್ರ ಸೇರಿ ರಾಜ್ಯದ 160 ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಲಿದೆ. ಡಾ.ಜಿ.ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಡಿಸಿಎಂ ಆಗಿದ್ದಾರೆ. ಸಿಎಂ ಸೀಟಿಗೆ ಇನ್ನೊಂದೇ ಮೆಟ್ಟಿಲು ಬಾಕಿಯಿದೆ. ಕೊರಟಗೆರೆಯಲ್ಲಿ ಮಾಜಿ ಶಾಸಕ ಮತ್ತೆ ಮಾಜಿನೇ ಆಗ್ತಾರೇ. ಬಿಜೆಪಿ ಪಕ್ಷದ ಅಭ್ಯರ್ಥಿ ಪರಮೇಶ್ವರ್‌ಗೆ ಯಾವತ್ತು ಸಮವಿಲ್ಲ. ಪರಮೇಶ್ವರ್‌ ಅವರೇ ನಮ್ಮ ಮುಂದಿನ ಸಿಎಂ.

ಚಂದ್ರಶೇಖರಗೌಡ ಜಿಲ್ಲಾಧ್ಯಕ್ಷ, ತುಮಕೂರು

click me!