ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಕೊರಟಗೆರೆ ಕ್ಷೇತ್ರದಲ್ಲಿ ಕಳೆದ 4 ವರ್ಷದಿಂದ ಜನಸೇವೆ ಮಾಡಿದ್ದಾರೆ. ಕೆ.ಎಂ.ಮುನಿಯಪ್ಪ ಪರವಾಗಿ ನನ್ನ ಬೆಂಬಲ ಇದ್ದೇ ಇರುತ್ತದೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತಳಮಟ್ಟದಿಂದ ಸಂಘಟನೆಗೆ ಮುಂದಾಗಿ ಕೊರಟಗೆರೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ ಮನವಿ ಮಾಡಿದರು.
ಕೊರಟಗೆರೆ (ಡಿ.17): ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಕೊರಟಗೆರೆ ಕ್ಷೇತ್ರದಲ್ಲಿ ಕಳೆದ 4 ವರ್ಷದಿಂದ ಜನಸೇವೆ ಮಾಡಿದ್ದಾರೆ. ಕೆ.ಎಂ.ಮುನಿಯಪ್ಪ ಪರವಾಗಿ ನನ್ನ ಬೆಂಬಲ ಇದ್ದೇ ಇರುತ್ತದೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತಳಮಟ್ಟದಿಂದ ಸಂಘಟನೆಗೆ ಮುಂದಾಗಿ ಕೊರಟಗೆರೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ ಮನವಿ ಮಾಡಿದರು.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ (BJP) ಮುಖಂಡ ಕೆ.ಎಂ.ಮುನಿಯಪ್ಪ ಮತ್ತು ಟಿ.ಡಿ.ತಿಮ್ಮಜ್ಜ ನೇತೃತ್ವದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೊರಟಗೆರೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ (Candidate) ಕೆ.ಎಂ.ಮುನಿಯಪ್ಪ ಮಾತನಾಡಿ, ನಾನು ಕಳೆದ 4 ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಆಶೀರ್ವಾದ ನನ್ನ ಮೇಲಿದೆ. ಬಿಜೆಪಿ ಪಕ್ಷದ ಹಿರಿಯರ ತೀರ್ಮಾನಕ್ಕೆ ನಾನು ಬದ್ದನಿದ್ದೇನೆ. ಬಿಜೆಪಿ ಪಕ್ಷದ ಸಂಘಟನೆಯೇ ಕಾರ್ಯಕರ್ತರ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೆ.ಎಂ.ಮುನಿಯಪ್ಪ ಶಕ್ತಿ ಪ್ರದರ್ಶನ:
ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸಿದ್ದರು. ಸಭಾಂಗಣ ಮತ್ತು ಹೊರಾಂಗಣ ಸ್ಥಳದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ತುಂಬಿದ್ದರು. ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಪರವಾಗಿ ಜೈಕಾರ ಮತ್ತು ಟಿಕೆಟ್ ನೀಡುವಂತೆ ಜಿ.ಮರಿಸ್ವಾಮಿಗೆ ಸಾವಿರಾರು ಕಾರ್ಯಕರ್ತರು ಒತ್ತಾಯ ಮಾಡಿದರು.
20 ಕಾರ್ಯಕರ್ತರ ರಾಜೀನಾಮೆ:
20 ಬಿಜೆಪಿ ಕಾರ್ಯಕರ್ತರ ರಾಜೀನಾಮೆಯು ಪಕ್ಷದ ಹಿನ್ನಡೆಗೆ ಪ್ರಮುಖ ಕಾರಣ. ಕೋಟ್ಯಂತರ ಕಾರ್ಯಕರ್ತರು ಇರುವ ಬಿಜೆಪಿ ರಾಷ್ಟ್ರೀಯ ಶಿಸ್ತಿನ ಪಕ್ಷವಾಗಿದೆ. ಕುಟುಂಬದಲ್ಲಿ ಒಡಕು ಮೂಡುವುದು ಸರ್ವೇ ಸಾಮಾನ್ಯ. ತಿಮ್ಮಜ್ಜ, ಪ್ರಸನ್ನ ಮತ್ತು ಹನುಮಂತರಾಜು ರಾಜೀನಾಮೆ ಬಗ್ಗೆ ಗೊಂಬಲ ಬೇಡ ಮತ್ತೇ ಮೂವರನ್ನು ಪಾರ್ಟಿಗೆ ಸೇರಿಸುವ ಪ್ರಯತ್ನ ಮಾಡೇ ಮಾಡ್ತೀನಿ ಎಂದು ಬಿಜೆಪಿ ಮುಖಂಡ ಜಿ.ಮರಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಚೇತನ್, ಟಿ.ಎಸ್.ಕೃಷ್ಣಮೂರ್ತಿ, ತಿಮ್ಮಜ್ಜ, ಹನುಮಂತರಾಯಪ್ಪ, ಪ್ರಸನ್ನಕುಮಾರ್, ಪ್ರಕಾಶ್‌ಬಾಬು, ಚಂದ್ರಣ್ಣ, ದೊಡ್ಡಕಾಯಪ್ಪ, ಮೀಸೆ ಮಂಜುನಾಥ, ನಟರಾಜು, ಉಮೇಶ್‌ಚಂದ್ರ, ಗೋವಿಂದರೆಡ್ಡಿ, ಸುರೇಶ್, ಬಾಲರಾಜು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.
ತುಮಕೂರು ನಗರ, ತಿಪಟೂರು, ತುರುವೇಕೆರೆ, ಚಿಕ್ಕನಾಯನಹಳ್ಳಿ, ಶಿರಾ ಕ್ಷೇತ್ರವು ಬಿಜೆಪಿ ತೆಕ್ಕೆಯಲ್ಲಿದೆ. 2023ಕ್ಕೆ ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಗುಬ್ಬಿ ಮತ್ತು ಕುಣಿಗಲ್ ಕ್ಷೇತ್ರದಲ್ಲಿಯೂ ಬಿಜೆಪಿ ಪಕ್ಷವು ಗೆಲುವು ಸಾಧಿಸಲಿದೆ. ಬಿಜೆಪಿ ಗೆಲುವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳೇ ಸಹಕಾರಿ ಆಗಲಿದೆ.
ಜಿ.ಮರಿಸ್ವಾಮಿ ಜಿಪಂ ಮಾಜಿ ಜಿಲ್ಲಾಧ್ಯಕ್ಷ, ಬೆಂಗಳೂರು ಗ್ರಾಮಾಂತರ
ಹಲವು ಮುಖಂಡರು ಬಿಜೆಪಿಗೆ
ಚಿಕ್ಕಬಳ್ಳಾಪುರ (ಡಿ. 16): ಬರುವ ದಿನಗಳಲ್ಲಿ ಕಾಂಗ್ರೆಸ್ ನಿಂದ ಕೆಲ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಬರುವ ಶಾಸಕರ ಸಂಖ್ಯೆ ಈಗಲೇ ಹೇಳುವುದಿಲ್ಲ. ಆದರೆ ಬಿಜೆಪಿ ಸೇರಲಿರುವ ಶಾಸಕರನ್ನು ನೀವೇ ಮುಂದಿನ ದಿನಗಳಲ್ಲಿ ನೋಡಲಿದ್ದೀರಿ ಎಲ್ಲವನ್ನು ಮುಂಚೇಯೆ ಹೇಳುವುದಿಲ್ಲ ಎಂದು ಸುಧಾಕರ್ ಕುತೂಹಲಕಾರಿ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ಬರುವುದಿಲ್ಲ. ಮೇ ಮೂರರವರೆಗೂ ನಮಗೆ ಅವಕಾಶ ಇದೆ. ಮೇ ಎರಡನೇ ವಾರದಲ್ಲಿ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ನಾನು ಮಾಡಿದ್ದೇನೆ. ಚುನಾವಣೆ ಯಾವಾಗ ಬೇಕಾದರೂ ನಡೆಸಲಿ ನಮ್ಮ ಪಕ್ಷ ಚುನಾವಣೆ ಎದುರಿಸಲು ಸನ್ನದ್ದವಾಗಿದೆಯೆಂದರು. 2023ರಲ್ಲಿ ಸ್ಪಷ್ಟಬಹುಮತದೊಂದಿಗೆ ಮತ್ತೆ ನಾವೇ ಅಧಿಕಾರಕ್ಕೆ ರಾಜ್ಯದಲ್ಲಿ ಬರಲಿದ್ದೇವೆಂದರು. ಚುನಾವಣೆಗೆ ಕಾಂಗ್ರೆಸ್ ನೇಮಿಸಿರುವ 32 ಮಂದಿ ತಂಡ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ನಾನು ಅವರ ಬಗ್ಗೆ ಎಷ್ಟುಕಡಿಮೆ ಮಾತನಾಡುತ್ತೇನೆ ಅಷ್ಟುಒಳ್ಳೆಯದು ಅವರಿಗೆ ಎಂದರು.