ರಕ್ಷಣಾ ಕಾರ್ಯ ಮುಗಿಸಿ ಮರಳುವ ಯೋಧರಿಗೆ ರಾಖಿ ಕಟ್ಟಿದ ಮಹಿಳೆಯರು

By Web Desk  |  First Published Aug 13, 2019, 3:56 PM IST

ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಈ ಸಂದರ್ಭದಲ್ಲಿ ಭಾರತೀಯ ಸೇನಾ ಪಡೆ ಯೋಧರು ಪ್ರಾಣದ ಹಂಗು ತೊರೆದು ಸಾವಿರಾರು ಜನರ ಜೀವ ಕಾಪಾಡಿದ್ದಾರೆ. ಇಂತಹ ಯೊಧರಿಗೆ ಜಿಲ್ಲಾಡಳಿತದ ಮಹಿಳಾ ನೌಕರರು ರಾಖಿ ಕಟ್ಟಿ ಬಾಂಧವ್ಯ ಬೆಸೆದಿದ್ದಾರೆ.


ಬಾಗಲಕೋಟೆ [ಆ.13] : ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, 17 ಜಿಲ್ಲೆಗಳು ತತ್ತರಿಸಿವೆ. ನೆರೆಯಲ್ಲಿ ಸಿಲುಕಿದ ಲಕ್ಷಾಂತರ ಮಂದಿ ಎಲ್ಲವನ್ನೂ ಕಳೆದುಕೊಂಡು ನರಳುವಂತಾಗಿದೆ. 

ಆದರೆ ಇಂತಹ ಪ್ರವಾಹದ ಸ್ಥಿತಿಯಲ್ಲಿ  ಲಕ್ಷಾಂತರ ಜನರ ಜೀವ ಉಳಿಸುವಲ್ಲಿ NDRF, SDRF, ಸೇನಾ ಯೋಧರ ಪಾತ್ರ ಮಹತ್ವದ್ದಾಗಿದ್ದು, ಯೋಧರಿಗೆ ಬಾಗಲಕೋಟೆ ಜಿಲ್ಲಾಡಳಿತದಿಂದ ಗೌರವ ಸಲ್ಲಿಸಲಾಗಿದೆ. 

Tap to resize

Latest Videos

ಬಾಗಲಕೋಟೆ ಜಿಲ್ಲಾಡಳಿತದ ಮಹಿಳಾ ನೌಕರರು ಯೋಧರಿಗೆ ರಾಖಿ ಕಟ್ಟಿ ಬಾಂಧವ್ಯ ಬೆಸೆದಿದ್ದಾರೆ. ಭಾರತೀಯ ಸೇನೆಯ ಪಯೋನಿಯರ್ಸ್ ಘಟಕದ ಯೋಧರಿಗೆ ರಾಖಿ ಕಟ್ಟಿ ಗೌರವ ಸಲ್ಲಿಸಿದ್ದಾರೆ. 

ಜಿಲ್ಲೆಯಲ್ಲಿ 8 ದಿನಗಳ ಕಾಲ ಪ್ರವಾಹದ ಸಂದರ್ಭದಲ್ಲಿ ಸಿಲುಕಿದ್ದ ಸುಮಾರು ಸಾವಿರಾರು ಜನರನ್ನು ಯೋಧರು ರಕ್ಷಣೆ ಮಾಡಿದ್ದು,  ಸೇನಾಪಡೆಯ ಕರ್ನಲ್ ಸಚಿನ್ ಮತ್ತು ಲೆ. ಕರ್ನಲ್ ಮಯಾಂಕ್ ಸೇರಿದಂತೆ ಹಲವರಿಗೆ ಮಹಿಳಾ ನೌಕರರು ರಾಖಿ ಕಟ್ಟಿದರು. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯೋಧರು ಕೂಡ ಜಿಲ್ಲೆಯ ರಕ್ಷಣಾ ಕಾರ್ಯ ಮುಗಿಸಿ ತೆರೆಳುವ ಮುನ್ನ ರಾಖಿ ಕಟ್ಟಿಸಿಕೊಂಡು ಸಿಹಿ ಹಂಚಿ ಸಹೋದರತ್ವ ಮೆರೆದರು.  

"

click me!