ಬಸ್ಸನ್ನು ಠಾಣೆ ಮುಂದೆ ನಿಲ್ಲಿಸಿ ಪೊಲೀಸರನ್ನು ಕರೆದು ನಿರ್ವಾಹಕ ಘಟನೆ ವಿವರಿಸಿದ್ದಾರೆ. ನಾರಿಯರ ಜಗಳ ಬಗೆಹರಿಸಲಾಗದೆ ಹೈರಾಣಾದ ಪೊಲೀಸರು ಕೊನೆಗೆ ಬೇಸತ್ತು ಅವರಿಬ್ಬರನ್ನೂ ಕೆಳಗಿಳಿಸಿ ಬಸ್ ಕಳುಹಿಸಿದ್ದಾರೆ.
ಸಾಗರ(ಜೂ.02): ಸಾಗರ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸೀಟಿಗಾಗಿ ನಾರಿಯರಿಬ್ಬರ ನಡುವೆ ಜಗಳ ನಡೆದಿದ್ದು, ಜಗಳ ಬಿಡಿಸಲಾಗದೇ ನಿರ್ವಾಹಕ ಬಸ್ಸನ್ನು ನೇರವಾಗಿ ಸಾಗರಪೇಟೆ ಪೊಲೀಸ್ ಠಾಣೆಗೆ ಕೊಂಡೊಯ್ದ ಘಟನೆ ನಡೆದಿದೆ.
ಬಸ್ಸನ್ನು ಠಾಣೆ ಮುಂದೆ ನಿಲ್ಲಿಸಿ ಪೊಲೀಸರನ್ನು ಕರೆದು ನಿರ್ವಾಹಕ ಘಟನೆ ವಿವರಿಸಿದ್ದಾರೆ. ನಾರಿಯರ ಜಗಳ ಬಗೆಹರಿಸಲಾಗದೆ ಹೈರಾಣಾದ ಪೊಲೀಸರು ಕೊನೆಗೆ ಬೇಸತ್ತು ಅವರಿಬ್ಬರನ್ನೂ ಕೆಳಗಿಳಿಸಿ ಬಸ್ ಕಳುಹಿಸಿದ್ದಾರೆ.
undefined
ಡೀಸೆಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತ KSRTC ಬಸ್; ಹಿಡಿಶಾಪ ಹಾಕಿದ ಪ್ರಯಾಣಿಕರು!
ಚಿಲ್ಲರೆಗಾಗಿ ಜಗಳ: ಬಸ್ ನಿರ್ವಾಹಕ, ಚಾಲಕನ ಮೇಲೆ ಹಲ್ಲೆ:
ಚಿಲ್ಲರೆ ವಿಚಾರವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ನಿರ್ವಾಹಕ ಹಾಗೂ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣದ ವೇಳೆ 6 ರು. ಚಿಲ್ಲರೆಗಾಗಿ ನಿರ್ವಾಹಕ ಪ್ರಕಾಶ, ಪ್ರಯಾಣಿಕ ಶಿವರಾಜ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಜಗಳ ಬಿಡಿಸಲು ಬಂದ ಚಾಲಕನ ಮೇಲೂ ಪ್ರಯಾಣಿಕ ಹಲ್ಲೆ ಮಾಡಿದ್ದಾನೆ.