ಧಾರ್ಮಿಕ ಕೇಂದ್ರಗಳಿಗೆ ಲಗ್ಗೆಯಿಟ್ಟಮಹಿಳಾ ಭಕ್ತರು

By Kannadaprabha News  |  First Published Jul 3, 2023, 7:30 AM IST

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿ ಮೂರನೇ ವಾರವೂ ಕೂಡ ಮಹಿಳೆಯರ ಭರ್ಜರಿ ಧಾರ್ಮಿಕ ಯಾತ್ರೆ ಮುಂದುವರೆದಿದೆ.


 ತುಮಕೂರು :  ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿ ಮೂರನೇ ವಾರವೂ ಕೂಡ ಮಹಿಳೆಯರ ಭರ್ಜರಿ ಧಾರ್ಮಿಕ ಯಾತ್ರೆ ಮುಂದುವರೆದಿದೆ.

ಕೊರಟಗೆರೆ- ಗೊರವನಹಳ್ಳಿ ಮಾರ್ಗದ ಬಸ್ಸುಗಳು ಸಿಕ್ಕಾಪಟ್ಟೆರಶ್ಶಾಗಿದ್ದು ಮಹಿಳಾ ಪ್ರಯಾಣಿಕರಿಂದ ತುಮಕೂರು ಬಸ್‌ ನಿಲ್ದಾಣ ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.

Tap to resize

Latest Videos

ಗೊರವನಹಳ್ಳಿ ಮಹಾಲಕ್ಷ್ಮೇ ದೇವಸ್ಥಾನ, ಸಿದ್ದರಬೆಟ್ಟಕ್ಕೆ ಮಹಿಳಾ ಭಕ್ತಾದಿಗಳ ದಂಡೇ ಆಗಮಿಸುತ್ತಿದ್ದು ತಂಡೋಪತಂಡವಾಗಿ ಧಾರ್ಮಿಕ ಸ್ಥಳಕ್ಕೆ ಭೇಟಿ ಕೊಡುತ್ತಿರುವ ಮಹಿಳೆಯರು. ಕೆಎಸ್‌ಆರ್‌ಟಿಸಿ ಡಿಪೋದವರು ಹೆಚ್ಚುವರಿಯಾಗಿ ನಾಲ್ಕು ಬಸ್‌ಗಳನ್ನು ಹಾಕಿದ್ದಾರೆ.

ಉಚಿತ ಪ್ರಯಾಣ ವಾಪಸಗ ಪಡೆಯಲು ಆಗ್ರಹ

ಚಿಕ್ಕಮಗಳೂರು (ಜೂ.28): ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿಯಾದ 'ಶಕ್ತಿ ಯೋಜನೆ'ಯಿಂದ (ಮಹಿಳೆಯರಿಗೆ ಉಚಿತ ಪ್ರಯಾಣ) ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಸಂಚಾರ ಮಾಡಲು ತೀವ್ರ ಸಮಸ್ಯೆಯಾಗಿದ್ದು, ಈ ಯೋಜನೆ ರದ್ದುಗೊಳಿಸಿ ಅಥವಾ ಹೆಚ್ಚುವರಿ ಬಸ್‌ಗಳನ್ನು ಬಿಡಿ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಸರಿಯಾದ ಸಮಯಕ್ಕೆ ಶಾಲಾ ಕಾಲೇಜ್ ಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಉಚಿತ ಬಸ್ ಸೇವೆಯಿಂದಾಗಿ ಗ್ರಾಮಾಂತರ ಬಸ್ ಗಳು ಪುಲ್ ರಶ್‌ ಆಗುತ್ತಿದೆ. ಬಸ್ಸುಗಳಿಗೆ ಹತ್ತಲಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳು ಆರಂಭವಾಗುವ ಮತ್ತು ಬಿಡುವ ವೇಳೆಗೆ ಬೆಳಗ್ಗೆ-ಸಂಜೆ ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿದರು.

ದೈಹಿಕ ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

ಶಾಲೆಗೆ ಹೋಗಲು ವಿದ್ಯಾರ್ಥಿಗಳು ಪರದಾಟ :  ಜಿಲ್ಲೆಯಲ್ಲಿ ಒಟ್ಟು 1,062 ಗ್ರಾಮಗಳಿದ್ದು, 660 ಗ್ರಾಮಗಳಿಗೆ ಸರ್ಕಾರಿ ಬಸ್ ಸಂಚರಿಸುತ್ತಿದ್ದಾವೆ. ಒಟ್ಟು 423 ಹಳ್ಳಿಗಳಿಗೆ ಈವರೆಗೂ ಯಾವುದೇ ಸರ್ಕಾರಿ (ಕೆಎಸ್‌ಆರ್‌ಟಿಸಿ) ಬಸ್ ಸಂಚರಿಸದೆ ಇರುವುದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಗ್ರಾಮೀಣ ಪ್ರದೇಶಗಳಲ್ಲಿ ಹಲವು ಮೈಲಿ ನಡೆದುಕೊಂಡು ಬರುತ್ತಿದ್ದಾರೆ. ಆದರೆ, ಈಗ ಹೆಚ್ಚು ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದರಿಂದ ವಿದ್ಯಾರ್ಥಿಗಳು ಬಸ್‌ನಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲವೆಂದು ಆರೋಪಿಸಿದ್ದಾರೆ.

ಸಮಸ್ಯೆ ನಿವಾರಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಪ್ರತಿಭಟನಾಕಾರರನ್ನುದ್ದೇಶಿಸಿ ಎಬಿವಿಪಿ ನಗರಕಾರ್ಯದರ್ಶಿ ರಾಕೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಚುನಾವಣೆ ಮೊದಲು ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಮೊದಲನೇ ಗ್ಯಾರಂಟಿಯಾಗಿ ಶಕ್ತಿಯೋಜನೆ ಜಾರಿಗೊಳಿಸಿದೆ. ಈ ಯೋಜನೆವಿರುದ್ಧ ನಮ್ಮ ಹೋರಾಟವಲ್ಲ, ಆದರೆ ಹೆಚ್ಚು ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಆರಂಭಿಸಿದ್ದಾರೆ ಎಂದರು. ಈಗಾಗಲೇ ಜೂನ್ ತಿಂಗಳಿನಿಂದ ಶಾಲಾ, ಕಾಲೇಜುಗಳು ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿರುವುದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರಲು ತುಂಬಾ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಬಸ್‌ಗಳನ್ನು ಓಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಗೆ ನ್ಯಾಯ ಸಿಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹಿಳೆಯರಂತೆ ಉಚಿತ ಪ್ರಯಾಣ ಬೇಡ, ಬಸ್‌ನಲ್ಲಿ ಮದ್ಯದ ಬಾಟಲಿ ಸಾಗಾಟಕ್ಕೆ ಅವಕಾಶ ಕೊಡಿ

ಮಾದಕ ವಸ್ತು ಮಾರಾಟ ತಡೆಗೆ ಒತ್ತಾಯ :  ಶಾಲಾ, ಕಾಲೇಜುಗಳ ಸಮೀಪ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. ಶಿಕ್ಷಣಸಂಸ್ಥೆಯ ಇಂತಿಷ್ಟು ಮೀಟರ್‌ಒಳಗೆ ಯಾವುದೇ ಬೀಡಿ, ಸಿಗರೇಟು, ಗುಟ್ಕಾಗಳ ಮಾರಾಟ ನಿಷೇಧಿಸಿದ್ದರೂ ಅವರುಗಳನ್ನು ಅವ್ಯಹತವಾಗಿ ಮಾರಾಟ ಮಾಡುತ್ತಿದ್ದು, ರಕ್ಷಣ ಇಲಾಖೆ ಅಧಿಕಾರಿಗಳು ಇವುಗಳ ಮಾರಾಟಕ್ಕೆ ತಡೆಯೊಡ್ಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯೆ ನಿಹಾರಿಕ ಮತ್ತು ವಿದ್ಯಾರ್ಥಿ ಪ್ರಮುಖ್ ರಾಕೇಶ್ ಮಾತನಾಡಿದರು. ತಾಲೂಕು ಸಂಚಾಲಕ ನಂದನ್, ಪ್ರೇಕ್ಷಿತ್, ಸೂರ್ಯ, ಪವಿತ್ರ, ಯಶ್ವಂತ್, ಧನುಷ್, ನಿರುಪಮ್ ಇದ್ದರು.

click me!