ಫೇಸ್‌ಬುಕ್‌ನಲ್ಲಿ ಮಹಿಳೆ ಪರಿಚಯ: ಬಣ್ಣದ ಮಾತು ನಂಬಿ ಲಕ್ಷ ಲಕ್ಷ ಕಳೆದುಕೊಂಡ ಪ್ರಾಚಾರ್ಯ!

By Kannadaprabha NewsFirst Published Feb 27, 2020, 7:36 AM IST
Highlights

ಫೇಸ್‌ಬುಕ್‌ನಲ್ಲಿ ಮಹಿಳೆ ಮಾತು ನಂಬಿ ಮೋಸ ಹೋದ ಪ್ರಾಚಾರ್ಯ|ಕಾಲೇಜಿನ ಬ್ಯಾಂಕ್‌ ಖಾತೆಯಿಂದ 34ಲಕ್ಷ ವರ್ಗಾವಣೆ|ಔಷಧದ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚನೆ| ಹುಬ್ಬಳ್ಳಿಯಲ್ಲಿ ನಡೆದ ಘಟನೆ| 

ಹುಬ್ಬಳ್ಳಿ(ಫೆ.27): ಇಲ್ಲಿನ ಹುಬ್ಬಳ್ಳಿ ಕೇಶ್ವಾಪುರ ಫಾತೀಮಾ ಡಿಗ್ರಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಡಾ. ಬ್ರೋ ಹೆನ್ರಿ ಅಂಥೋನಿ ಸೆಕ್ವೇರಿಯಾ ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತ ಮಹಿಳೆ ಜತೆ ಹಣಕಾಸಿನ ವ್ಯವಹಾರಕ್ಕೆ ಮುಂದಾಗಿ ಕಾಲೇಜಿನ ಬ್ಯಾಂಕ್‌ ಅಕೌಂಟ್‌ನಿಂದ ಬರೋಬ್ಬರಿ 34 ಲಕ್ಷ ವರ್ಗಾವಣೆ ಮಾಡಿ ಮೋಸ ಹೋಗಿರುವ ಘಟನೆ ಎರಡು ವರ್ಷದ ಬಳಿಕ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಬಳಿಕ ಡಾ. ಹೆನ್ರಿ ಅವರನ್ನು ಅಮಾನತು ಮಾಡಲಾಗಿದ್ದು, ಅವರು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ. ಹೆನ್ರಿ 2018ರಲ್ಲಿ ಕೇಶ್ವಾಪುರ ಫಾತೀಮಾ ಡಿಗ್ರಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾಗ ಫೇಸ್‌ಬುಕ್‌ನಲ್ಲಿ ಎನ್ಬೆಲ್ಲೆ ಮಾರ್ಕ್ ಎಂಬಾಕೆ ಪರಿಚಯವಾಗಿದ್ದರು. ತಾನು ಯುನೈಟೆಡ್‌ ಕಿಂಗಡಮ್‌ನ ಲೀವರ್‌ಪೂಲ್‌ನಲ್ಲಿರುವ  Philip j.o Chemistry Health Company ಯಲ್ಲಿ ಖರೀದಿ ಮತ್ತು ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದು, ಕಂಪನಿಗೆ ಡಾ. ರೇಮಂಡ್‌ ಬೆನ್ಸನ್‌ ಎನ್ನುವವರು ನಿರ್ದೇಶಕರು ಎಂದು ತಿಳಿಸಿದ್ದರು.

ತಮ್ಮ ಕಂಪನಿಗೆ ಭಾರತದ ಮುಂಬೈನಲ್ಲಿರುವ ಟ್ರೀಟ್‌ ಆ್ಯಂಡ್‌ ಕ್ಯೂರ್‌ ಇಂಡಿಯಾ ಎಂಬ ಕಂಪನಿಯಲ್ಲಿ ಲಕ್ಷ್ಮೀ ತಿವಾರಿ ಎಂಬುವವರು akeb4 ಎಂಬ ಕ್ಯಾನ್ಸರ್‌, ಡಯಾಬಿಟಿಕ್‌ ಮೆಂಟಲ್‌ ಡೀಸ್‌ ಆರ್ಡರ್‌ ಔಷಧಿಯನ್ನು ಪೂರೈಕೆ ಮಾಡುತ್ತಿದ್ದಾರೆ. ಅವರಿಂದ ಔಷಧ ಖರೀದಿ ಮಾಡಿ ತಮ್ಮ ಕಂಪನಿಗೆ ಪೂರೈಸಿದರೆ ಲಾಭ ಗಳಿಸಿಬಹುದು ಎಂದು ಆಸೆ ಹುಟ್ಟಿಸಿದ್ದಾರೆ. ಇದನ್ನು ನಂಬಿದ ಡಾ. ಬ್ರೋ ಹೆನ್ರಿ ಸೆಕ್ವೇರಿಯಾ ಲಕ್ಷ್ಮೀ ತಿವಾರಿ ಎನ್ನುವವರನ್ನು ಸಂಪರ್ಕಿಸಿದ್ದಾರೆ. ಆಕೆ 1 ಲೀಟರ್‌ ಬಾಟಲ್‌ ಔಷಧಿಗೆ 1.50 ಲಕ್ಷ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ಡಾ. ಹೆನ್ರಿ ತಾವು ಪ್ರಾಚಾರ್ಯರಾಗಿದ್ದ ಫಾತೀಮಾ ಕಾಲೇಜಿನ ಹುಬ್ಬಳ್ಳಿ ಕೇಶ್ವಾಪುರ ವಿಜಯ ಬ್ಯಾಂಕ್‌ನಲ್ಲಿಯ ಖಾತೆಯಿಂದ 3 ಲಕ್ಷ ಹಣವನ್ನು ಲಕ್ಷ್ಮೀ ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆಗ ಲಕ್ಷ್ಮೀ  ತಿವಾರಿ ಕೋರಿಯರ್‌ ಮೂಲಕ 2 ಔಷಧದ ಬಾಟಲ್‌ಗಳನ್ನು ಕಳಿಸಿದ್ದಾರೆ. ಇದನ್ನು ದೆಹಲಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿದಾಗ ಇವು ಗುಣಮಟ್ಟದಿಂದ ಕೂಡಿರುವುದು ತಿಳಿದುಬಂದಿದೆ. ಬಳಿಕ ಇಂತಹ 48 ಬಾಟಲ್‌ಗಳನ್ನು ಖರೀದಿಸಿ ಪೂರೈಸುವಂತೆ ಎನ್ಬೆಲ್ಲೆ ಮಾರ್ಕ್ ತಿಳಿಸಿದ್ದಾಳೆ. ಈ ಸಂಬಂಧ ಲಕ್ಷ್ಮೀ  ತಿವಾರಿಗೆ ಡಾ. ಹೆನ್ರಿ ಸಂಪರ್ಕಿಸಿದ್ದು, ಒಟ್ಟಾರೆ ಮೊತ್ತ 75 ಲಕ್ಷ ಆಗುತ್ತದೆ. ಮುಂಗಡವಾಗಿ 37,50,000 ಭರಿಸಬೇಕೆಂದು ತಿಳಿಸಿದ್ದಾಳೆ.

ಆಗ ಪುನಃ ಕಾಲೇಜಿನ ಖಾತೆಯಿಂದ ಆರೋಪಿ ಲಕ್ಷ್ಮೀ ತಿವಾರಿ ಹೇಳಿದ ಬ್ಯಾಂಕ್‌ ಖಾತೆಗಳಿಗೆ ಒಟ್ಟು 31 ಲಕ್ಷ ವರ್ಗಾವಣೆ ಮಾಡಿದ್ದು, ಲಕ್ಷ್ಮೀ ತಿವಾರಿ ಔಷಧ ಬಾಟಲ್‌ಗಳನ್ನು ವನಿತಾ ಎಂಬುವವರ ಮೂಲಕ ಕಳಿಸಿದ್ದಾರೆ. ಆದರೆ, ಪ್ರಾಚಾರ್ಯ ಡಾ. ಹೆನ್ರಿ ಔಷಧ ಪೂರೈಸಲು ಎನ್ಬೆಲ್ಲೆ ಮಾರ್ಕ್ಗೆ ಕರೆ ಮಾಡಿದಾಗ ಆಕೆ ಹಾಗೂ ಕಂಪನಿ ಸಿಬ್ಬಂದಿ, ಅಲ್ಲದೆ ಔಷಧ ಪೂರೈಸುತ್ತಿದ್ದ ಲಕ್ಷ್ಮೀ ತಿವಾರಿ ಕೂಡ ಸಂಪರ್ಕದಿಂದ ದೂರವಾಗಿದ್ದಾರೆ. ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸರಿಗೆ ಡಾ. ಬ್ರೋ ಹೆನ್ರಿ ದೂರು ನೀಡಿದ್ದಾರೆ.

ಇದನ್ನೂ ನೋಡಿ | ಇಂದಿನ ಚಿನ್ನ-ಬೆಳ್ಳಿ ದರ, ಪೆಟ್ರೋಲ್-ಡೀಸೆಲ್ ಬೆಲೆ:

"

click me!