ಗಂಡನ ಮನೆಯಲ್ಲಿ ಆಸ್ತಿ ಜಗಳದಿಂದ ಮನನೊಂದು ಗೃಹಿಣಿಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಳಿ ಕಟ್ಟಿದ್ದ ಗಂಡ ಕೂಡ ಕುಡಿದು ಬಂದು ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದರಿಂದ ಕಿರುಕುಳ ತಾಳಲಾರದೆ ಮೃತ ಭಾಗ್ಯಳ ತಂದೆ ಶಿವಮಾದೇಗೌಡ ಹಲವಾರು ಬಾರಿ ಮನೆಗೆ ಕರೆದುಕೊಂಡು ಹೋಗಿದ್ದರು. ಇದೀಗ ಪುತ್ರಿಯನ್ನು ಕಳೆದುಕೊಂಡ ತಂದೆ ನನ್ನ ಮಗಳಿಗೆ ನ್ಯಾಯ ಕೊಡಿಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡಿ ಎಂದು ಡಿವೈಎಸ್ಪಿ ನವೀನ್ ಕುಮಾರ್ ಕಾಲಿಗೆ ಬಿದ್ದು ಮನವಿ ಮಾಡಿಕೊಂಡ ದೃಶ್ಯ ಮನಕಲುವಂತಿತ್ತು.
ಚಾಮರಾಜನಗರ(ಡಿ.18): ಗಂಡನ ಮನೆಯವರ ಹಿಂಸೆ ತಾಳಲಾರದೆ ಗೃಹಿಣಿಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಯಳಂದೂರು ತಾಲೂಕಿನ ಮರಪಾಳ್ಯಗ್ರಾಮದಲ್ಲಿ ನಡೆದಿದೆ. ಮರಪಾಳ್ಯ ಗ್ರಾಮದ ಕುರುಬ ಸಮುದಾಯ ನಿವಾಸಿ ಪುಟ್ಟಸ್ವಾಮಿ ಎಂಬುವರ ಪತ್ನಿ ಭಾಗ್ಯ(38) ಎಂಬುವರೆ ಮೃತಪಟ್ಟಮಹಿಳೆ.
ಘಟನೆ ವಿವರ:
ಮೃತಳ ಗಂಡ ಪುಟ್ಟಸ್ವಾಮಿ ಸೇರಿದಂತೆ ಅತ್ತೆ ಚಂದ್ರಮ್ಮ, ಮೈದಾ ಬಸವರಾಜು, ವಾರಗಿತ್ತಿ ಕವಿತಾ ಮಗಳಿಗೆ ಕಿರುಕುಳ ನೀಡುತ್ತಿದ್ದರಿಂದ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಶಿವಮಾದೇಗೌಡ ಯಳಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣ ಸೇರಿದಂತೆ ಕೊಳ್ಳೇಗಾಲ ಡಿವೈಎಸ್ಪಿ ನವೀನ್‌ಕುಮಾರ್, ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಘಟನೆ ಬಗ್ಗೆ ಮೃತಳ ಮಗ ಮನೋಜ್ ಕುಮಾರ್ (14)ನಿಂದ ಘಟನೆ ಬಗ್ಗೆ ಮಾಹಿತಿ ಪಡೆದರು.
ಮಂಗಳೂರು: 5 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ
ಪೊಲೀಸರಿಗೆ ಕೈಮುಗಿದು ಕಾಲಿಗೆ ಬಿದ್ದ ತಂದೆ:
ಚಾಮರಾಜನಗರ ತಾಲೂಕಿನ ಉತ್ತುವಳಿ ಗ್ರಾಮದ ನಿವಾಸಿ ಶಿವಮಾದೇಗೌಡ ಎಂಬುವರ ತಮ್ಮ ಮಗಳು ಭಾಗ್ಯ ಎಂಬುವರನ್ನು 16 ವರ್ಷದ ಹಿಂದೆ ಮರಪಾಳ್ಯನಿವಾಸಿ ಪುಟ್ಟಸ್ವಾಮಿ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಕಾಲಕ್ರಮೇಣ ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಅತ್ತೆ ಚಂದ್ರಮ್ಮ, ಮೈದ ಬಸವರಾಜು, ವಾರಗಿತ್ತಿ ಕವಿತಾ ನಡುವೆ ಪದೇ ಪದೇ ಗಲಾಟೆ ನಡೆಸುತ್ತಿದ್ದರು. ಈ ನಡುವೆ ತಾಳಿ ಕಟ್ಟಿದ್ದ ಗಂಡ ಕೂಡ ಕುಡಿದು ಬಂದು ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದರಿಂದ ಕಿರುಕುಳ ತಾಳಲಾರದೆ ಮೃತ ಭಾಗ್ಯಳ ತಂದೆ ಶಿವಮಾದೇಗೌಡ ಹಲವಾರು ಬಾರಿ ಮನೆಗೆ ಕರೆದುಕೊಂಡು ಹೋಗಿದ್ದರು.
ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ:
ನಂತರ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಕಳುಹಿಸಿಕೊಡಲಾಗಿತ್ತು. ನನ್ನ ಮಗಳಿಗೆ ನ್ಯಾಯ ಕೊಡಿಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡಿ ಎಂದು ಡಿವೈಎಸ್ಪಿ ನವೀನ್ ಕುಮಾರ್ ಕಾಲಿಗೆ ಬಿದ್ದು ಮನವಿ ಮಾಡಿಕೊಂಡ ದೃಶ್ಯ ಮನಕಲುವಂತಿತ್ತು.
ದೂರು ನೀಡಲು ಏಕೆ ವಿಳಂಬ:
ಮೃತ ಭಾಗ್ಯನ ಮಗ ಮನೋಜ್ ಕುಮಾರ್ ಹೆಸರಿಗೆ ಆಸ್ತಿ ಬರೆಸಿಕೂಡಬೇಕೆಂದು ಸ್ಥಳೀಯವಾಗಿ ಗ್ರಾಮದ ಮುಖಂಡರ ನಡುವೆ ನ್ಯಾಯಾ ಪಂಚಾಯಿತಿ ಮಾಡಲಾಯಿತು. ಅದಕ್ಕೆ ಗಂಡ ಪುಟ್ಟಸ್ವಾಮಿ ಒಪ್ಪಿಗೆ ನೀಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿ ಬರೆಸಿಕೂಡುವ ನಿಟ್ಟಿನಲ್ಲಿ ಮಾತುಕತೆ ನಡೆದಿತ್ತು. ಇದರ ನಡುವೆ ಮೃತಳ ಶವಸಂಸ್ಕಾರಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದರು. ಆದರೆ ಪುಟ್ಟಸ್ವಾಮಿ ತಮ್ಮ ಬಸವರಾಜು ಯಾವುದೇ ಕಾರಣಕ್ಕೊ ಆಸ್ತಿ ಬರೆದು ಕೊಡುವುದಿಲ್ಲ. ಎಲ್ಲ ಆಸ್ತಿ ನನಗೆ ಸೇರಬೇಕೆಂದು ತಕರಾರು ಮಾಡಿದ್ದರಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಆರೋಪಿಗಳು ಪೊಲೀಸ್ ವಶದಲ್ಲಿ:
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಗಂಡ ಪುಟ್ಟಸ್ವಾಮಿ, ವಾರಗಿತ್ತಿ ಕವಿತಾ, ಮೈದ ಬಸವರಾಜು ಅವರನ್ನು ಮೊದಲೇ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಅತ್ತೆ ಚಂದ್ರಮ್ಮ ತಲೆಮರಸಿಕೊಂಡಿದ್ದರಿಂದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪಿಎಸ್‌ಐ ರವಿಕುಮಾರ್ ತಿಳಿಸಿದ್ದಾರೆ.
ಹುದ್ದೆ ಕೊಡಿಸ್ತೀನಿ ಎಂದು 31 ಲಕ್ಷ ರೂಪಾಯಿಗೂ ಹೆಚ್ಚು ವಂಚನೆ...
[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]