ಇಂದಿನ ಗೃಹಿಣಿಯರು ಅಡುಗೆಗೆ ಹಾಗೂ ತಮ್ಮ ಪತಿ ಹಾಗೂ ಮಕ್ಕಳನ್ನ ಅಂಕಿಯಲ್ಲಿಡಲು ಬಳಸುವ ಚಪಾತಿ ಉಜ್ಜುವ ಲಟ್ಟಣಿಗೆಗೂ ವಿಶೇಷವಾದ ಸ್ಥಾನ ನೀಡಿ ಅದೂ ಒಂದು ರೀತಿ ಆಯುಧ ಎಂಬಂತೆ ಪೂಜೆ ಮಾಡಿ, ಲಟ್ಟಣಿಗೆಗೆ ವಿಶೇಷ ಸ್ಥಾನ ನೀಡಿ ಪೂಜೆಗೈದಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.24): ಮನೆಯಲ್ಲಿ ಗಂಡ-ಮಕ್ಕಳನ್ನ ಹತೋಟಿಯಲ್ಲಿ ಇಡಲು ಮಹಿಳೆಯರು ಬಳಸುವ ಚಪಾತಿ ಉಜ್ಜುವ ಲಟ್ಟಣಿಗೆಗೂ ಮಹಿಳೆಯೊಬ್ಬರು ಆಯುಧ ಪೂಜೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಲಟ್ಟಣಿಗೆಗೆ ಪೂಜೆ ಮಾಡಿರುವುದನ್ನ ನೋಡಿ ಜನ ನಸುನಕ್ಕಿದ್ದಾರೆ.
undefined
ಸಾಮಾನ್ಯವಾಗಿ ಆಯುಧ ಪೂಜೆಯಲ್ಲಿ ಹೊಲಗದ್ದೆ-ತೋಟಗಳಲ್ಲಿ ಕೆಲಸಕ್ಕೆ ಬಳಸುವ ಕಬ್ಬಿಣದ ಆಯುಧಗಳು, ವಾಹನಗಳಿಗೆ ಪೂಜೆ ಸಲ್ಲಿಸೋದು ವಾಡಿಕೆ. ಆದರೆ, ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಚಪಾತಿ ತಟ್ಟುವ ಮರದ ಲಟ್ಟಣಿಗೆಗೂ ಪೂಜೆ ಮಾಡಿರೋದು ವಿಶೇಷವಾಗಿದೆ.
ಸಿಂಹವಾಹನಾಲಂಕಾರದಲ್ಲಿ ಶೃಂಗೇರಿ ಶಾರದೆ: ಸಿಂಹಾರೂಢಾ ಸಿದ್ದದಾತ್ರೀ ಅಲಂಕಾರದಲ್ಲಿ ಹೊರನಾಡಿನ
ಈ ಫೋಟೋವನ್ನ ನೋಡಿದವರು ಇವರ ಮನೆಯಲ್ಲಿ ಇದೂ ಆಯುಧ ಇರಬಹುದು ಅನ್ಸತ್ತೆ ಎಂದಿದ್ದಾರೆ. ನವರಾತ್ರಿಯ ಒಂಭತ್ತು ದಿನಗಳ ಕಾಲ ದೇವಿಯನ್ನು ಒಂಭತ್ತು ವಿವಿಧ ರೂಪದಲ್ಲಿ ಪೂಜಿಸುವುದು ವಾಡಿಕೆ. ಒಂಭತ್ತನೇ ದಿನ ದೇವಿ ತಾನು ಯುದ್ಧ ಮಾಡಿದ ಆಯುಧಗಳಿಗೆ ವಿಶ್ರಾಂತಿ ನೀಡಿ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆ ಆಚರಣೆ ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ.
ಆದರೆ, ಇಂದಿನ ಗೃಹಿಣಿಯರು ಅಡುಗೆಗೆ ಹಾಗೂ ತಮ್ಮ ಪತಿ ಹಾಗೂ ಮಕ್ಕಳನ್ನ ಅಂಕಿಯಲ್ಲಿಡಲು ಬಳಸುವ ಚಪಾತಿ ಉಜ್ಜುವ ಲಟ್ಟಣಿಗೆಗೂ ವಿಶೇಷವಾದ ಸ್ಥಾನ ನೀಡಿ ಅದೂ ಒಂದು ರೀತಿ ಆಯುಧ ಎಂಬಂತೆ ಪೂಜೆ ಮಾಡಿ, ಲಟ್ಟಣಿಗೆಗೆ ವಿಶೇಷ ಸ್ಥಾನ ನೀಡಿ ಪೂಜೆಗೈದಿದ್ದಾರೆ. ಶತಮಾನಗಳ ಬಳಿಕ ಆಯುಧ ಪೂಜೆಯಲ್ಲಿ ಮರದ ಲಟ್ಟಣಿಗೆಗೂ ಪೂಜೆ ಮಾಡಿದ ಮಹಿಳೆ ಆಯುಧ ಪೂಜೆಯ ಮೆರಗು ಹೆಚ್ಚಿಸಿದ್ದಾರೆ.