ಅಕ್ಕನ ಮಗಳನ್ನು ತನ್ನ ಮಕ್ಕಳೊಂದಿಗೆ ಪ್ರೀತಿಯಿಂದ ಸಾಕಲಾರದೇ ಅವಳನ್ನು ಸೀರೆಯಿಂದ ಕೊರಳಿಗೆ ಉರುಳುಹಾಕಿ ಕೊಂದ ಅಮಾನವೀಯ ಘಟನೆ ತಾಲೂಕಿನ ತೇರಗಾಂವದಲ್ಲಿ ನಡೆದಿದೆ.
ಉತ್ತರ ಕನ್ನಡ(ಏ.09): ಅಕ್ಕನ ಮಗಳನ್ನು ತನ್ನ ಮಕ್ಕಳೊಂದಿಗೆ ಪ್ರೀತಿಯಿಂದ ಸಾಕಲಾರದೇ ಅವಳನ್ನು ಸೀರೆಯಿಂದ ಕೊರಳಿಗೆ ಉರುಳುಹಾಕಿ ಕೊಂದ ಅಮಾನವೀಯ ಘಟನೆ ತಾಲೂಕಿನ ತೇರಗಾಂವದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಿಂಗ ನೆಲ್ಲುಡಿಯ ಪತ್ನಿ 4 ವರ್ಷಗಳ ಹಿಂದೆ ಮೃತಳಾಗಿದ್ದರಿಂದ ಆಕೆಯ 5 ವರ್ಷದ ಶ್ರೀದೇವಿಯೆಂಬ ಮಗುವನ್ನು ಸೋಮನಿಂಗನ ಹೆಂಡತಿಯ ತಂಗಿ ಸಾವಿತ್ರಿ ಉದಯಕುಮಾರ ಮುನವಳ್ಳಿ ಎಂಬವಳು ತನ್ನೊಂದಿಗೆ ತೇರಗಾಂವದ ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು.
ಭೂಕುಸಿತದಲ್ಲಿ ಪತ್ನಿ ಮಕ್ಕಳನ್ನು ಕಳೆದುಕೊಂಡ ವ್ಯಕ್ತಿ, ವಿಧವೆ ಮರುವಿವಾಹ
ಈಕೆಗೆ 5 ವರ್ಷದ ಹಾಗೂ 3 ವರ್ಷದ ಗಂಡುಮಕ್ಕಳಿದ್ದು ಅವರೊಂದಿಗೆ ಈ ಹುಡುಗಿಯನ್ನೂ ಸಾಕುವುದು ತನಗೆ ಕಿರಿಕಿರಿಯಾಗಿತ್ತು. ಹೀಗಾಗಿ ಶ್ರೀದೇವಿಯನ್ನು ಸೀರೆಯಿಂದ ಕೊರಳಿಗೆ ಉರುಳುಹಾಕಿ ಕೊಲೆಮಾಡುವ ದುಷ್ಕೃತ್ಯವೆಸಗಿದ್ದಾಳೆ. ಸಾವಿತ್ರಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆದಿದೆ.