2016ರ ಡಿಸೆಂಬರ್‌ನಲ್ಲಿ ರುಬಿಯಾ ಯಾನೇ ಫಾತಿಮಾ ಎಂಬಾಕೆ ಮಂಗಳೂರಿಗೆ ಭಿಕ್ಷಾಟನೆಗೆಂದು ಬಂದಿದ್ದಳು. ಕಂಕನಾಡಿಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಮಗುವನ್ನು ಹೊಂದಿದ್ದ ತಾಯಿಯೊಂದಿಗೆ ಸಲುಗೆಯಿಂದ ಇದ್ದಳು. 2017ರ ಜನವರಿ 12ರಂದು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ತಾಯಿ ತನ್ನ 7 ತಿಂಗಳ ಹಸುಗೂಸನ್ನು ಮಲಗಿಸಿ, ಭಿಕ್ಷಾಟನೆಗಾಗಿ ಹೋಗಿದ್ದಾಗ ಫಾತಿಮಾ ಮಗುವನ್ನು ಅಪಹರಿಸಿದ್ದಳು. ಬಳಿಕ ವಾಪಸ್ ಬಂದು ಸಂತ್ರಸ್ತೆಯೊಂದಿಗೆ ಮಗು ಹುಡುಕುವ ನಾಟಕವಾಡಿದ್ದಳು.
ಮಂಗಳೂರು(ಫೆ.05): ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಪ್ರದೇಶದಿಂದ 7 ತಿಂಗಳ ಮಗು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರುಬಿಯಾ ಯಾನೇ ಫಾತಿಮಾ (44) ಎಂಬಾಕೆಗೆ 4 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ.
2016ರ ಡಿಸೆಂಬರ್‌ನಲ್ಲಿ ರುಬಿಯಾ ಯಾನೇ ಫಾತಿಮಾ ಎಂಬಾಕೆ ಮಂಗಳೂರಿಗೆ ಭಿಕ್ಷಾಟನೆಗೆಂದು ಬಂದಿದ್ದಳು. ಕಂಕನಾಡಿಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಮಗುವನ್ನು ಹೊಂದಿದ್ದ ತಾಯಿಯೊಂದಿಗೆ ಸಲುಗೆಯಿಂದ ಇದ್ದಳು. 2017ರ ಜನವರಿ 12ರಂದು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ತಾಯಿ ತನ್ನ 7 ತಿಂಗಳ ಹಸುಗೂಸನ್ನು ಮಲಗಿಸಿ, ಭಿಕ್ಷಾಟನೆಗಾಗಿ ಹೋಗಿದ್ದಾಗ ಫಾತಿಮಾ ಮಗುವನ್ನು ಅಪಹರಿಸಿದ್ದಳು. ಬಳಿಕ ವಾಪಸ್ ಬಂದು ಸಂತ್ರಸ್ತೆಯೊಂದಿಗೆ ಮಗು ಹುಡುಕುವ ನಾಟಕವಾಡಿದ್ದಳು. ಬಳಿಕ ಮಗುವಿನೊಂದಿಗೆ ಪರಾರಿಯಾದ ಫಾತಿಮಾ, ಊರೂರು ತಿರುಗಾಡಿ ಮಗುವನ್ನು ತೋರಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಳು.
ಇಂಥದ್ದೇ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !
2020ರ ಜ.22ರಂದು ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಸೀದಿ ಎದುರು ಮಗುವನ್ನು ಕುಳ್ಳಿರಿಸಿಕೊಂಡು ತಾನು ಭಿಕ್ಷಾಟನೆ ಮಾಡುವ ಜತೆಗೆ, ಮಗುವಿನಿಂದಲೂ ಭಿಕ್ಷಾಟನೆಯನ್ನು ಮಾಡಿಸಿಕೊಂಡು ಶೋಷಣೆಗೆ ಒಳಪಡಿಸುತ್ತಿದ್ದುದು ಸಂತ್ರಸ್ತೆ ತಾಯಿಯ ಗಮನಕ್ಕೆ ಬಂದಿದೆ.
ಪ್ರಕರಣವನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಅಂದಿನ ನಿರೀಕ್ಷಕ ರಾಮಕೃಷ್ಣ ಕೆ.ಕೆ. ಹಾಗೂ ಅಂದಿನ ಉಪನಿರೀಕ್ಷಕ ಪ್ರದೀಪ್ ಟಿ.ಆರ್. ಸಮಗ್ರ ತನಿಖೆ ನಡೆಸಿ, ಒಟ್ಟು 20 ಸಾಕ್ಷಿದಾರರನ್ನು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆಯಂತೆ ಡಿ.ಎನ್.ಎ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ದೂರುದಾರ ಮಹಿಳೆಯೇ ಮಗುವಿನ ಜೈವಿಕ ತಾಯಿ ಎಂದು ವರದಿ ಬಂದಿದೆ.
ಅಪರಾಧಿ ಫಾತಿಮಾ ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಅನುಭವಿಸಲು ತೀರ್ಪಿನಲ್ಲಿ ತಿಳಿಸಲಾಗಿದೆ. ಅಭಿಯೋಜನೆ ಪರ ಜ್ಯೋತಿ ಪ್ರಮೋದ ನಾಯಕ ವಾದ ಮಂಡನೆ ಮಾಡಿದ್ದಾರೆ.