ವಿಜಯಪುರ: ಸಿಂದಗಿ ತಹಶಿಲ್ದಾರ್ ಕಚೇರಿ ಎದುರು ವಿಷದ ಬಾಟಲ್ ಹಿಡಿದು ಮಹಿಳೆ ಪ್ರತಿಭಟನೆ

By Girish Goudar  |  First Published Jul 20, 2024, 6:05 PM IST

ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ತಮ್ಮ ಜಮೀನಿನಲ್ಲಿ ಬೇರೆ ರೈತರಿಗೆ ದಾರಿ ನೀಡಬೇಕೆಂದು ಒತ್ತಾಯ ಸಹಿ ಮಾಡಿಸಿಕೊಂಡಿದ್ದಾರೆಂದು ಶಾಮಲಾಬಾಯಿ ಆರೋಪಿಸಿದ್ದಾರೆ. ಚಾಂದಕವಟೆ ಗ್ರಾಮದ ಗ್ರಾಮ ಲೆಕ್ಕಿಗ ಪಿ.ಕೆ. ಹುಡೇದ್ ಎಂಬುವವರು ಸಹಿ ಮಾಡಿಸಿಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
 


ವಿಜಯಪುರ(ಜು.20): ವಿಷದ ಬಾಟಲ್ ಹಿಡಿದು ಮಹಿಳೆಯೊಬ್ಬರು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಸಿಂದಗಿ ತಹಶಿಲ್ದಾರ್ ಕಚೇರಿ ಎದುರು ಇಂದು(ಶನಿವಾರ) ನಡೆದಿದೆ. ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಶಾಮಲಾಬಾಯಿ ಸುಳ್ಳೊಳ್ಳಿ ಎಂಬುವರೇ ಪ್ರತಿಭಟನೆ ನಡೆಸಿದ ಮಹಿಳೆ. 

ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ತಮ್ಮ ಜಮೀನಿನಲ್ಲಿ ಬೇರೆ ರೈತರಿಗೆ ದಾರಿ ನೀಡಬೇಕೆಂದು ಒತ್ತಾಯ ಸಹಿ ಮಾಡಿಸಿಕೊಂಡಿದ್ದಾರೆಂದು ಶಾಮಲಾಬಾಯಿ ಆರೋಪಿಸಿದ್ದಾರೆ. ಚಾಂದಕವಟೆ ಗ್ರಾಮದ ಗ್ರಾಮ ಲೆಕ್ಕಿಗ ಪಿ.ಕೆ. ಹುಡೇದ್ ಎಂಬುವವರು ಸಹಿ ಮಾಡಿಸಿಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

Latest Videos

undefined

ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದ್ದು ನಿಜ, ಆದರೆ ಮುಡಾದಲ್ಲಿ ನಡೆದಿಲ್ಲ: ಎಂಬಿ ಪಾಟೀಲ್

ಪಕ್ಕದ ಜಮೀನಿನವರಿಗೆ ದಾರಿ ಇದ್ದರೂ ನಮ್ಮದೇ ಜಮೀನಿನಲ್ಲಿ ಹಾಯ್ದು ಹೋಗುಲು ಗ್ರಾಮ ಲೆಕ್ಕಿಗ ಅನುವು ಮಾಡಿಕೊಟ್ಟಿದ್ದಾರೆ. ಈ ವಿಚಾರದಲ್ಲಿ ನನ್ನ ಹಾಗೂ ನನ್ನ ಮಗನಿಂದ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಹಶೀಲ್ದಾರ್ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಮಹಿಳೆ ಪಟ್ಟು ಹಿಡಿದಿದ್ದರು. ವಿಷದ ಬಾಟಲ್ ಕಸಿದು ತಹಶೀಲ್ದಾರ್ ಪ್ರದೀಪ್ ಹಿರೇಮಠ ಮುಂದೆ ಕರೆದುಕೊಂಡು ಹೋಗಿದ್ದಾರೆ ಸ್ಥಳೀಯರು. ತಹಶೀಲ್ದಾರ್‌ ಕಚೇರಿಯಲ್ಲಿ ನೆಲದ ಮೇಲೆ ಮಹಿಳೆ ಕೂಡಿಸಿ ತಹಶೀಲ್ದಾರ್ ಹಿರೇಮಠ ವಿಚಾರಿಸಿದ್ದಾರೆ. 

ದಮ್ಮಿದ್ದರೆ ಸಿಎಂ ವಾಲ್ಮೀಕಿ ಪ್ರಕರಣ ಸಿಬಿಐಗೆ ನೀಡಲಿ : ಸಂಸದ ರಮೇಶ ಜಿಗಜಿಣಗಿ ಸವಾಲು

ದಲಿತ ಸಮಾಜದ ಮಹಿಳೆಯೆಂದು ಆಕೆಯನ್ನು ಆಕೆಯ ಮಗ ಬಸವರಾಜನನ್ನು ನೆಲದ ಮೇಲೆ ತಹಶೀಲ್ದಾರ್ ಕೂಡಿಸಿದ್ದಾರೆ. ತಹಶೀಲ್ದಾರ್ ಬಸವರಾಜ ಹಿರೇಮಠ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತ ಸಮಾಜದ ಮಹಿಳೆಯೆಂದು ಈ ರೀತಿ ನಡೆಸಿಕೊಂಡಿದ್ದು ತಪ್ಪು. ವಿಚಾರಣೆ ನೆಪದಲ್ಲಿ ಮಹಿಳೆಯನ್ನು ನೆಲದ ಮೇಲೆ ಕೂಡಿಸಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜಮೀನಿನಲ್ಲಿ ಬೇರೆಯವರಿಗೆ ದಾರಿ ನೀಡಿದ್ದಾಗಿ ಒತ್ತಾಯ ಪೂರ್ವಕವಾಗಿ ಸಹಿ ಪಡೆದದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆ ಶಾಮಲಾಬಾಯಿ ಒತ್ತಾಯಿಸಿದ್ದಾರೆ. ಗ್ರಾಮ ಲೆಕ್ಕಿಗ ಪಿ.ಕೆ. ಹುಡೇದ್ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. 

click me!