ಹೂವಿನ ವ್ಯಾಪಾರಿ ಪತ್ನಿಗೆ 5 ಕೆಜಿ ತೂಕದ ಮಗು ಜನನ

Published : Dec 08, 2018, 01:13 PM ISTUpdated : Dec 08, 2018, 02:13 PM IST
ಹೂವಿನ ವ್ಯಾಪಾರಿ ಪತ್ನಿಗೆ 5 ಕೆಜಿ ತೂಕದ ಮಗು ಜನನ

ಸಾರಾಂಶ

ಮೈಸೂರಿನಲ್ಲಿ ತಾಯಿಯೊಬ್ಬಳು ಬರೋಬ್ಬರಿ 5 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ.

ಮೈಸೂರು[ಡಿ.08]: ತಾಯಿಯೊಬ್ಬಳು ಬರೋಬ್ಬರಿ 5 ಕೆ.ಜಿ ಅಪರೂಪದ ಮಗುವಿಗೆ ಜನ್ಮ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೂವಿನ ವ್ಯಾಪಾರಿ ತಿಲಕ್ ನಗರದ ನಿವಾಸಿ ಸಿದ್ದರಾಜು ಅವರ ಪತ್ನಿರಾಜೇಶ್ವರಿ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾರಿ ತೂಕದ ಮಗುವಿಗೆ ಜನ್ಮ‌ ನೀಡಿದ್ದಾರೆ. ಸಾಮಾನ್ಯ ಹೆರಿಗೆಯಾಗದ ಕಾರಣ ವೈದ್ಯಾಧಿಕಾರಿಗಳು ಸೀಸರಿನ್ ಮೂಲಕ ಮಗುವನ್ನು ಹೊರತೆಗೆದಿದ್ದಾರೆ.

ಭಾರತೀಯ ನವಜಾತ ಶಿಶುಗಳ ತೂಕ ಸರಾಸರಿ 2.50 ರಿಂದ 3.50 ಕೆ.ಜಿ. ಇರುತ್ತದೆ. ಹೀಗಾಗಿ 5 ಕೆ.ಜಿ. ಮಗು ಕಂಡು ಅಚ್ಚರಿಗೊಂಡ ಪೋಷಕರು ಹಾಗೂ ವೈದ್ಯರು ಅಚ್ಚರಿಗೊಳಗಾಗಿದ್ದಾರೆ.

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!