ಗೃಹಿಣಿ ದಿವ್ಯಾ ಸ್ಪಂದನ ಆತ್ಮಹತ್ಯೆ: ಪೊಲೀಸರಿಂದ ತನಿಖೆ

Published : Dec 07, 2018, 03:11 PM ISTUpdated : Dec 07, 2018, 03:14 PM IST
ಗೃಹಿಣಿ ದಿವ್ಯಾ ಸ್ಪಂದನ ಆತ್ಮಹತ್ಯೆ: ಪೊಲೀಸರಿಂದ ತನಿಖೆ

ಸಾರಾಂಶ

ಮೈಸೂರಿನ ನಂಜನಗೂಡಿನಲ್ಲಿ ದಿವ್ಯಾ ಸ್ಪಂದನ ಎಂಬ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೈಸೂರು[ಡಿ.07]: ಮೈಸೂರಿನ ನಂಜನಗೂಡಿನಲ್ಲಿ ದಿವ್ಯಾ ಸ್ಪಂದನ (24) ವರ್ಷದ ವಿವಾಹಿತ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನಂಜನಗೂಡು ಪಟ್ಟಣದ ದೇವಿರಮ್ಮನ ಹಳ್ಳಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆ ಶಿಕ್ಷಣ ಇಲಾಖೆಯ ಅಧಿಕಾರಿ ನಂಜುಂಡಾರಾಧ್ಯ ಅವರ ಪತ್ನಿಯಾಗಿದ್ದಾರೆ. ಮೃತ ಮಹಿಳೆಗೆ ಸುಮಾರು ಆರು ವರ್ಷದ ಹೆಣ್ಣು ಮಗುವಿದೆ.

ನಂಜುಂಡಾರಾಧ್ಯ ಎಂಬುವರು ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಈಗ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಡಯಟ್ ಶಿಕ್ಷಣ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಮಾಡುತ್ತಿದ್ದಾರೆ. 

ದಿವ್ಯಾ ಸ್ಪಂದನರನ್ನು ಪೋಷಕರಿಂದ ಕೊಲೆ ಆರೋಪ ಕೇಳಿ ಬಂದಿದ್ದು, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಆನಂದ್ ಮತ್ತು ವೃತ್ತ ನಿರೀಕ್ಷಕ ಶೇಖರ್ ಮೃತ ಮಹಿಳೆಯ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!