ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಮಹಿಳೆ ಬಚಾವ್ !

By Suvarna News  |  First Published Feb 7, 2020, 4:40 PM IST

ಆಕಸ್ಮಿಕವಾಗಿ ಕಾಲು ಜಾರಿ ಆಳದ ಬಾವಿಗೆ ಬಿದ್ದ ಮಹಿಳೆಯನ್ನು ಸಾರ್ವಜನಿಕರು ಸೇರಿ ಕಾಪಾಡಿದ್ದು ಅಗ್ನಿ ಶಾಮಕ ಸಿಬ್ಬಂದಿ ಬಚಾವ್ ಮಾಡಿದ್ದಾರೆ. 


ಶಿವಮೊಗ್ಗ [ಫೆ.07] : ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯನ್ನು  ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ಘಟನೆ ಹೊಸನಗರದಲ್ಲಿ ನಡೆದಿದೆ. 

ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ನೀರು ತರಲೆಂದು ತೆರಳಿದ್ದ ಮಹಿಳೆ ಜ್ಯೋತಿ [45] ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಈ ವೇಳೆ ತಕ್ಷಣ ಸ್ಥಳಕ್ಕಾಗಮಿಸಿದ ಅಕ್ಕ ಪಕ್ಕದ ನಿವಾಸಿಗಳು ಅವರನ್ನು ಮುಳುಗದಂತೆ ಹಗ್ಗ ಇಳಿಸಿ ಕಾಪಾಡಿದ್ದಾರೆ. 

Tap to resize

Latest Videos

ಸಂಪೂರ್ಣ ಅಂಧತ್ವ ಹೊಂದಿದ ಯುವತಿ ಕೈ ಹಿಡಿದು ಆದರ್ಶ ಮೆರೆದ ಲೆಕ್ಕ ಪರಿಶೋಧಕ...

ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಮಹಿಳೆಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ. 

ನೀರಿಗೆ ಬಿದ್ದು ಅಸ್ವಸ್ಥವಾಗಿದ್ದ ಮಹಿಳೆಯನ್ನು ತಕ್ಷಣವೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. 

click me!