* ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸೇಬಿನಕಟ್ಟಿ ಗ್ರಾಮದಲ್ಲಿ ನಡೆದ ಘಟನೆ
* ಕಚ್ಚಿದ ಹಾವನ್ನು ಹುಡುಕಿ ಕೊಂದಿದ್ದ ಕುಟುಂಬ ಸದಸ್ಯರು
* ಅದೇ ಮನೆಯ ಇಬ್ಬರಿಗೆ ಕಚ್ಚಿದ ಹಾವಿನ ಮರಿಗಳು
ಹನುಮಸಾಗರ(ಮೇ.13): ಹಾವು ಕಚ್ಚಿ ಮಹಿಳೆ ಮೃತಪಟ್ಟ ಘಟನೆ ಸಮೀಪದ ಸೇಬಿನಕಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಅಚ್ಚರಿ ಎಂಬಂತೆ ಅದೇ ಕುಟುಂಬದ ಇನ್ನಿಬ್ಬರಿಗೆ ಮಂಗಳವಾರ ರಾತ್ರಿ ಹಾವು ಕಚ್ಚಿದೆ.
ಗ್ರಾಮದ ನಿರ್ಮಲಾ ಪರಶುರಾಮ ಮಡಿಕೇರಿ (26) ಮೃತಪಟ್ಟ ದುರ್ದೈವಿ. ಸೋಮವಾರ ರಾತ್ರಿ ಮನೆಯಲ್ಲಿ ನಿರ್ಮಲಾಗೆ ಹಾವು ಕಚ್ಚಿತ್ತು. ಅವರು ಮೃತಪಟ್ಟಿದ್ದರು. ಕಚ್ಚಿದ ಹಾವನ್ನು ಕುಟುಂಬ ಸದಸ್ಯರು ಹುಡುಕಿ ಕೊಂದಿದ್ದರು. ಆದರೆ, ಅದೇ ಮನೆಯ ಇಬ್ಬರಿಗೆ ಮಂಗಳವಾರ ರಾತ್ರಿ ಹಾವಿನ ಮರಿಗಳು ಕಚ್ಚಿವೆ.
ಕೊಪ್ಪಳ: ಬೆಡ್ ಸಿಗದೆ ಸರ್ಕಾರಿ ಆಸ್ಪತ್ರೆ ಎದುರೇ ಮಹಿಳೆ ಸಾವು
ಮೃತಳ ಮೈದುನ ಬಸವರಾಜ ಬೀರಪ್ಪ ಮಡಿಕ್ಕೇರಿ, ಕಲಾಲಬಂಡಿ ಗ್ರಾಮದಿಂದ ಬಂದಿದ್ದ ಮೃತಳ ಸಂಬಂಧಿ ಮುತ್ತು ಶರಣಪ್ಪ ಮೇಟಿ ಅವರಿಗೆ ಹಾವಿನ ಮರಿಗಳು ಕಚ್ಚಿವೆ. ಹಾವಿನ ಮರಿಗಳು ಕಚ್ಚಿ ಅಸ್ವಸ್ಥಗೊಂಡ ಮುತ್ತು ಮತ್ತು ಬೀರಪ್ಪ ಅವರಿಗೆ ನಾಟಿ ವೈದ್ಯರಿಂದ ಔಷಧಿ ಕೊಡಿಸಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.