ಹುನಗುಂದ: ವಿಡಿಯೋ ಕಾಲ್‌ನಲ್ಲಿ ಗಂಡ ಬ್ಯುಸಿ: ಬೈಕ್ ಮೇಲಿಂದ ಬಿದ್ದು ಹಂಡತಿ ಸಾವು

Suvarna News   | Asianet News
Published : Nov 23, 2020, 02:47 PM IST
ಹುನಗುಂದ: ವಿಡಿಯೋ ಕಾಲ್‌ನಲ್ಲಿ ಗಂಡ ಬ್ಯುಸಿ: ಬೈಕ್ ಮೇಲಿಂದ ಬಿದ್ದು ಹಂಡತಿ ಸಾವು

ಸಾರಾಂಶ

ಬೈಕ್‌ನಲ್ಲಿ ತೆರಳುವ ವೇಳೆ ಮಗನೊಂದಿಗೆ ವಿಡಿಯೋ ಕಾಲ್‌ನಲ್ಲಿದ್ದ ಬ್ಯುಸಿಯಿದ್ದ ಯೋಧ| ಬೈಕ್ ಹಿಂಬದಿಯಿದ್ದ ಬಿದ್ದು ಮಹಿಳೆ ಸಾವು| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ನಡೆದ ಘಟನೆ| ಪತ್ನಿಯನ್ನ ತವರು ಮನೆಗೆ ಬಿಟ್ಟು ಕಾಶ್ಮೀರಕ್ಮೆ ತೆರಳಬೇಕಿದ್ದ ಯೋಧ|

ಬಾಗಲಕೋಟೆ(ನ.23): ಬೈಕ್ ಹಿಂಬದಿಯಿದ್ದ ಮಹಿಳೆಯೊಬ್ಬಳು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ಇಂದು(ಸೋಮವಾರ) ನಡೆದಿದೆ. ಮೃತ ಮಹಿಳೆಯನ್ನ ಪುಷ್ಪಾವತಿ (35) ಎಂದು ಗುರುತಿಸಲಾಗಿದೆ.  

ಹೆಂಡತಿ ಪುಷ್ಪಾವತಿಯ ಜೊತೆ ಬೈಕ್‌ನಲ್ಲಿ ಹೋಗುವ ಸಂದರ್ಭದಲ್ಲಿ ಪತಿ ಯೋಧ ಶೇಖರಯ್ಯ ಮಗನ ಜೊತೆ ವಿಡಿಯೋ ಕಾಲ್‌ ಮಾಡಿದ್ದರು. ಮೊಬೈಲ್‌ನಲ್ಲಿ ಗಮನವಿದ್ದ ಕಾರಣ ರಸ್ತೆಯಲ್ಲಿದ್ದ ಹಂಪ್ ಇದ್ದಿದ್ದನ್ನ ಗಮನಿಸದೆ ಬೈಕ್‌ ಜಿಗಿದಿದೆ. ಹೀಗಾಗಿ ಬೈಕ್ ಹಿಂಬದಿಯಿದ್ದ ಯೋಧನ ಪತ್ನಿ ಪುಷ್ಪಾವತಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಾಗಲಕೋಟೆ: ಪೊಲೀಸ್‌ ಪರೀಕ್ಷೆಯಲ್ಲಿ ಹೈಟೆಕ್‌ ನಕಲು, ಯುವಕನ ಬಂಧನ

ಮೃತಪಟ್ಟ ಪತ್ನಿಯ ಶವವನ್ನ ಅಪ್ಪಿ ಯೋಧ ಶೇಖರಯ್ಯ ಕಣ್ಣೀರಿಡುತ್ತಿರುವ ದೃಶ್ಯ ಕರುಳು ಹಿಂಡುವಂತಿತ್ತು. ಪತ್ನಿಯನ್ನ ತವರು ಮನೆ ಹಿರೇಮಳಗಾವಿ ಗ್ರಾಮಕ್ಕೆ ಬಿಡಲು ಯೋಧ ಶೇಖರಯ್ಯ ತೆರಳುತ್ತಿದ್ದರು. ಪತ್ನಿಯನ್ನ ಬಿಟ್ಟು ಕಾಶ್ಮೀರಕ್ಮೆ ಯೋಧ ಶೇಖರಯ್ಯ ತೆರಳಬೇಕಿತ್ತು ಎಂದು ತಿಳಿದು ಬಂದಿದೆ. ಹುನಗುಂದ ತಾಲೂಕಿನ ಅಮೀನಗಡ ಪೋಲಿಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 
 

PREV
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ