ವಿಜಯಪುರ ಜಿಲ್ಲೆಯ ನಿಡಗುಂದಿಯ ಮಹಿಳೆ ಸಾವು| ಯಾವ ಆಸ್ಪತ್ರೆಯಲ್ಲಿಯೂ ಬೆಡ್ ಸಿಗದೆ ಮೃತಪಟ್ಟ ಮಹಿಳೆ| ಚಿಕಿತ್ಸೆ ಕೊಡಿಸಬೇಕೆಂದು ಬಾಗಲಕೋಟೆಯ ಎಲ್ಲ ಆಸ್ಪತ್ರೆಗಳಿಗೂ ಅಲೆದಾಡಿದ ಪುತ್ರ|
ಬಾಗಲಕೋಟೆ(ಏ.30): ಕೋವಿಡ್ ಲಕ್ಷಣ ಹೊಂದಿರುವ ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಸಾವನ್ನಪ್ಪಿರುವ ದುರ್ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ವಿಜಯಪುರ ಜಿಲ್ಲೆಯ ನಿಡಗುಂದಿಯ ಮಹಿಳೆಗೆ ಕೋವಿಡ್ ಲಕ್ಷಣ ಕಾಣಿಸಿಕೊಂಡಿತ್ತು. ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿ ಬಂದಿರಲಿಲ್ಲ. ಆಕೆಯ ಮಗ ಬಾಗಲಕೋಟೆಗೆ ಕರೆದುಕೊಂಡು ಬಂದಿದ್ದ. ಆದರೆ, ಯಾವ ಆಸ್ಪತ್ರೆಯಲ್ಲಿಯೂ ಬೆಡ್ ಸಿಗದೇ ಸಾವನ್ನಪ್ಪಿದ್ದಾಳೆ.
ಕೊರೊನಾ ಪಾಸಿಟಿವ್‌ಯಿದ್ರೂ ಮುಚ್ಚಿಟ್ಟು 2 ದಿನ ಕರ್ತವ್ಯಕ್ಕೆ ಹಾಜರ್; ಫಾರ್ಮಾಸಿಸ್ಟ್ ಸಸ್ಪೆಂಡ್
ಈ ಬಗ್ಗೆ ಪ್ರತಿಕ್ರಿಯಿಸಿದ ಮೃತ ಮಹಿಳೆಯ ಮಗ ಮಹಾದೇವ, ತಾಯಿಯ ಕೋವಿಡ್‌ವರದಿ ಇನ್ನೂ ಬಂದಿರಲಿಲ್ಲ. ಆದರೂ, ಚಿಕಿತ್ಸೆ ಕೊಡಿಸಬೇಕೆಂದು ಬಾಗಲಕೋಟೆಯ ಎಲ್ಲ ಆಸ್ಪತ್ರೆಗಳಿಗೂ ಅಲೆದಾಡಿದರೂ ಬೆಡ್ ಸಿಗಲಿಲ್ಲ. ಹೀಗಾಗಿ ಅಸ್ವಸ್ಥ ತಾಯಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona