ಗಂಡ ಮನೆಗೆ ಬರಲಿಲ್ಲ. ಆದರೆ ಮನೆಯಲ್ಲಿ ಸುಂದರಿ ಹೆಂಡತಿ ಪ್ರಾಣವೇ ಹಾರಿಹೋಗಿತ್ತು. ತನ್ನ ಪುಟ್ಟ ಕಂದನನ್ನು ಬಿಟ್ಟು ಆಕೆ ಜೀವನ ಕೊನೆಗೊಳಿಸಿಕೊಂಡಿದ್ದಾಳೆ
ಶಿರಸಿ (ಜ.28): ಆಲೆಮನೆ ಹಬ್ಬಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ ಪತಿ ಮನೆಗೆ ಬಾರದ ಹಿನ್ನೆಲೆ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗಿಡಮಾವಿನಕಟ್ಟೆಯಲ್ಲಿ ನಡೆದಿದೆ.
ಮಂಗಳವಾರ ಸಂಜೆ ವೇಳೆಗೆ ಪಲ್ಲವಿ ವಿಜಯ ದೇವಾಡಿಗ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪಲ್ಲವಿ, ಕಳೆದ ಎರಡು ವರ್ಷಗಳಿಂದ ಗಂಡನ ಜತೆ ನಗರದ ಇಂದಿರಾನಗರದಲ್ಲಿ ವಾಸವಾಗಿದ್ದಳು. ಇದೀಗ ತಮ್ಮ ಪುಟ್ಟ ಮಗುವನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಣ್ಣನ ಸ್ನೇಹಿತನಿಂದಲೇ ರೇಪ್: ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ ..
ಆದರೆ, ಇತ್ತೀಚಿನ ದಿನಗಳಲ್ಲಿ ಗಂಡ ವಿಜಯ ದೇವಾಡಿಗ ತನ್ನ ಜತೆ ಇರುವುದಕ್ಕಿಂತ ವ್ಯವಹಾರದ ಬಗ್ಗೆ ಜಾಸ್ತಿ ಒಲವು ತೋರುತ್ತಿದ್ದಾನೆ ಎಂದು ಆಕ್ಷೇಪಿಸುತ್ತಿದ್ದಳು.
ಆಲೆಮನೆ ಹಬ್ಬಕ್ಕೆ ಕರೆದುಕೊಂಡು ಹೋಗದಿರುವುದನ್ನೇ ನೆಪವಾಗಿಟ್ಟುಕೊಂಡು ಮಗುವಿಗಾಗಿ ಕಟ್ಟಿದ ಸೀರೆಯ ಜೋಕಾಲಿಗೇ ನೇಣು ಬಿಗಿದುಕೊಂಡಿದ್ದಾಳೆ.
ಇದೀಗ ಈ ಸಂಬಂಧ ಶಿರಸಿ ಪೊಲೀಸ್ ಮಾರುಕಟ್ಟೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ