ಮದುವೆಯಾಗಿ ಒಂದೇ ವರ್ಷಕ್ಕೆ ಗೃಹಿಣಿ ಸಾವು : ಗಂಡನ ಮನೆಯವರೇ ಕಾರಣವಾದ್ರಾ?

Suvarna News   | Asianet News
Published : Dec 13, 2019, 09:40 AM IST
ಮದುವೆಯಾಗಿ ಒಂದೇ ವರ್ಷಕ್ಕೆ ಗೃಹಿಣಿ ಸಾವು : ಗಂಡನ ಮನೆಯವರೇ ಕಾರಣವಾದ್ರಾ?

ಸಾರಾಂಶ

ಮಹಿಳೆಯೋರ್ವಳು ವಿವಾಹವಾಗಿ ಒಂದೇ ವರ್ಷಕ್ಕೆ ಸಾವಿಗೀಡಾಗಿದ್ದಾಳೆ. ಅವಳ ಸಾವಿಗೆ ಗಂಡನ ಮನೆಯವರೇ ಕಾರಣ ಎನ್ನಲಾಗಿದೆ. 

ಬೆಂಗಳೂರು[ಡಿ.12]: ಅನುಮಾನಾಸ್ಪದವಾಗಿ ಗೃಹಿಣಿಯೋರ್ವಳು ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರಿನ ಮಹದೇವಪುರದಲ್ಲಿ ಗೃಹಿಣಿ [27] ಶಿಲ್ಪಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಹೊಸಕೋಟೆ ತಾಲೂಕಿನ ಹಿಂಡಗನಾಳದ ರಾಮಪ್ಪ ಹಾಗೂ ದೇವಮ್ಮ ದಂಪತಿಯ ಪುತ್ರಿ ಶಿಲ್ಪಾಳನ್ನು ಒಂದು ವರ್ಷದ ಹಿಂದೆ ನಾಗೇಶ್ ಜೊತೆಗೆ ವಿವಾಹ ಮಾಡಿಕೊಡಲಾಗಿತ್ತು. 

ಬೆಂಗಳೂರು ಪೋಲಿಸರ ಭರ್ಜರಿ ಬೇಟೆ ರಾಜಸ್ಥಾನದ ಹಲ್ಲಿ ಮಾರಾಟಗಾರರ ಸೆರೆ..

ಹೂಡಿಯಲ್ಲಿ ತಂದೆ ತಾಯಿಯ ಜೊತೆಗೆ ವಾಸವಾಗಿದ್ದ ನಾಗೇಶ್ ಜೊತೆಗೆ ಶಿಲ್ಪಾ ವಾಸವಾಗಿದ್ದು, ಗಂಡನ ಮನೆಯವರ ಕಿರುಕುಳವೇ ಇದಕ್ಕೆ ಕಾರಣ ಎನ್ನಲಾಗಿದೆ. 

ಗಂಡ, ಅತ್ತ, ಮಾವ ಕಿರುಕುಳ ನೀಡಿದ್ದಾರೆ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಇದೀಗ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?