ಬಸ್ ನಿಲ್ದಾಣದಲ್ಲೇ ವಂಚಕನ ಚಳಿ ಬಿಡಿಸಿದ ಯುವತಿ!

By Web Desk  |  First Published Jul 16, 2019, 3:56 PM IST

ಬಸ್ ನಿಲ್ದಾಣದಲ್ಲೇ ವಂಚಕನಿಗೆ ಚಳಿ ಬಿಡಿಸಿದ ಯುವತಿ| ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ  ಯುವಕನಿಗೆ ಬಸ್ ನಿಲ್ದಾಣದಲ್ಲಿ  ಚಪ್ಪಲಿ ಏಟು| ನಿಲ್ದಾಣದಲ್ಲೆ  ಸಾರ್ವಜನಿಕರೆದುರು  ಹಿಗ್ಗಾಮುಗ್ಗಾ ಗೂಸಾ.


ದಾವಣಗೆರೆ[ಜು.16]: ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿ ವಂಚಿಸಿದ ಯುವಕನಿಗೆ ಬಸ್ ನಿಲ್ದಾಣದಲ್ಲೇ ಮಹಿಳೆಯೊಬ್ಬಳು ಧರ್ಮದೇಟು ನೀಡಿರುವ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ.

"

Tap to resize

Latest Videos

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 'ನನ್ನ ತಂಗಿ ಜೀವನ ಹಾಳು ಮಾಡಿದೆ  ನನ್ನ ಅಣ್ಣ ಕೊಲೆ ಮಾಡಿದೆ' ಎಂದು ಆರೋಪಿಸಿದ ಯುವತಿ ಚಪ್ಪಲಿಯಲ್ಲೇ ಯುವಕನೊಬ್ಬನಿಗೆ ಸಾರ್ವಜನಿಕರೆದುರು ಥಳಿಸಿದ್ದಾಳೆ. 

ಏಟು ನೀಡಿದ ಬಳಿಕ ಆಕ್ರೋಶಗೊಂಡ ಯುವತಿ ಪೊಲೀಸರಿಗೆ ದೂರು ನೀಡದೇ ತೆರಳಿದ್ದಾಳೆ. ಬಸ್ ನಿಲ್ದಾಣದಲ್ಲಿ ನಡೆದ ಈ ಪ್ರಹಸನದ 10  ನಿಮಿಷಗದ ವಿಡಿಯೋ ಸದ್ಯ ಸಾಮಾಝಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

click me!