ಬಾಬು ಅಬ್ಬಾಸರಿ ಚೌದರಿ ಗ್ಯಾರಂಟಿ ಹಣದಲ್ಲಿ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿ ಪ್ರೀತಿಗೆ ಪಾತ್ರರಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ತಿಂಗಳು ಸರ್ಕಾರ ನೀಡುವ ₹ ೨ ಸಾವಿರ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಈ ಕೆಲಸ ಮಾಡಿ ಮಾದರಿಯಾಗಿದ್ದಾರೆ.
ತಾಂಬಾ(ಜ.09): ಗೃಹಲಕ್ಷ್ಮೀ ಯೋಜನೆ ಗ್ಯಾರಂಟಿ ಹಣದಲ್ಲಿ ಗೋಗಿಹಾಳ ಗ್ರಾಮದ ಮಹಿಳೆಯೊಬ್ಬರು ಹೋಳಿಗೆ ಊಟ ತಯಾರಿಸಿ ಊರಿನ ಜನರು ಹಾಗೂ ಶಾಸಕರಿಗೆ ಬಡಿಸಿದ್ದಾರೆ.
ಬಾಬು ಅಬ್ಬಾಸರಿ ಚೌದರಿ ಗ್ಯಾರಂಟಿ ಹಣದಲ್ಲಿ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿ ಪ್ರೀತಿಗೆ ಪಾತ್ರರಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ತಿಂಗಳು ಸರ್ಕಾರ ನೀಡುವ ₹ ೨ ಸಾವಿರ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಈ ಕೆಲಸ ಮಾಡಿ ಮಾದರಿಯಾಗಿದ್ದಾರೆ. ಹೋಳಿಗೆ, ತುಪ್ಪ, ಹಾಲು, ಬದನೆಕಾಯಿ ಪಲ್ಯ, ಕಡಲೆ ಕಾಳು, ಚಪಾತಿ, ಅನ್ನ, ಸಾಂಬಾರು ಸಿದ್ದುಪಡಿಸಿದ್ದ ಗ್ರಾಮದ ಮೂರು ನೂರು ಜನರು ಸೇರಿ ಜನಪ್ರತಿನಿಧಿಗಳಿಗೆ ಸಿಹಿ ಊಟ ನೀಡಲಾಗಿದೆ.
ಹೋಳಿಗೆ ಊಟ ಸ್ವೀಕರಿಸಿ ಮಾತನಾಡಿದ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಜನಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ವಿಪಕ್ಷದವರ ಹೇಳಿಕೆಗಳಿಗೆ ಸೂಕ್ತ ಉತ್ತರ ನೀಡಿ ಸ್ವಾವಲಂಬಿ ಕರ್ನಾಟಕ ರೂಪಿಸುವತ್ತ ಸರ್ಕಾರ ಹೊರಟಿದೆ. ಹಳಸದ ಅನ್ನವಿಲ್ಲ ಅದು ಹಳಸುವ ಮುನ್ನ ಊಟ ಮಾಡಬೇಕು, ಬಾಡದ ಹೂವಿಲ್ಲ ಅದು ಬಾಡುವ ಮುನ್ನ ಮುಡಿಯಬೇಕು, ಕೆಡಲಾರದ ಹಣ್ಣುಗಳಿಲ್ಲ ಅವು ಕೆಡುವ ಮುನ್ನ ಸೇವಿಸಬೇಕು, ಸಾಯದ ಮನುಷ್ಯನಿಲ್ಲ ಸಾಯುವ ಮುನ್ನ ಸತ್ಯದ ಕೀರ್ತಿ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಂದಗಿ ತಾಲೂಕ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶ್ರೀಶೈಲ ಕವಲಗಿ, ಜಿಲ್ಲಾ ಕೆಡಿಪಿ ಸದಸ್ಯರಾದ ನೂರಹಮ್ಮದ ಅತ್ತಾರ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಜಯಶ್ರೀ ಹಂದನೂರ, ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ಕಾಂತನಗೌಡ ಪಾಟೀಲ್, ಪರಸು ಬಿಸನಾಳ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಸಲೀಂ ಚೌಧರಿ, ಸಿದ್ದು ಹತ್ತಳ್ಳಿ, ಮಲ್ಲನಗೌಡ ಬಿರಾದಾರ್, ರಾಯಗೊಂಡ ನಾಟಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪುತ್ತೂರು: ಗೃಹಲಕ್ಷ್ಮಿ ಹಣದಿಂದ ಗಂಡನಿಗೆ ಸ್ಕೂಟರ್ ಕೊಡಿಸಿದ ಮಹಿಳೆ!
ಪುತ್ತೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ತಮ್ಮ ಗಂಡನಿಗೆ ಸ್ಕೂಟರ್‌ಕೊಡಿಸಿರುವ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೋಡಿಂಬಾಡಿಯಲ್ಲಿ ಕಳೆದ ವರ್ಷದ ನ.11 ರಂದು ನಡೆದಿತ್ತು.
ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಕ್ರಿಯಾ ಎನ್ನುವ ಮಹಿಳೆ ಹೋಂಡಾ ಡಿಯೋ 125 ಎಂಬ ಸ್ಕೂಟರ್ ಖರೀದಿಸಿದ್ದು, ಪೇಂಟರ್ ಕೆಲಸ ಮಾಡುವ ತಮ್ಮ ಗಂಡ ಸಲೀಂ ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಬಾಬು ಅಬ್ಬಾಸರಿ ಚೌದರಿ ಗ್ಯಾರಂಟಿ ಹಣದಲ್ಲಿ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿ ಪ್ರೀತಿಗೆ ಪಾತ್ರರಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ತಿಂಗಳು ಸರ್ಕಾರ ನೀಡುವ ₹ ೨ ಸಾವಿರ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಈ ಕೆಲಸ ಮಾಡಿ ಮಾದರಿಯಾಗಿದ್ದರು.
ಸುಮಾರು 83 ಸಾವಿರಕ್ಕಿಂತ ಅಧಿಕ ಬೆಲೆ ಬಾಳುವ ಹೋಂಡಾ ಡಿಯೋ 125 ಖರೀದಿಸುವ ಉದ್ದೇಶದಿಂದ ಮಿಶ್ರಿಯಾ ಅವರು ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುವ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟಿದ್ದರು. ಈ ಗೃಹಲಕ್ಷ್ಮಿ ಹಣದ ಜತೆಗೆ ತಮ್ಮ ಬಳಿ ಇದ್ದ ಹಣ ಸೇರಿಸಿ ಸ್ಕೂಟರ್ ಖರೀದಿಸಿದ್ದರು.
ಸ್ಕೂಟರ್ ಮೇಲೆ 'ಆರ್ಥಿಕ ನೆರವು ಗೃಹಲಕ್ಷ್ಮಿ' ಎಂಬ ನಾಮಫಲಕ ಹಾಕಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳರ್ ಹಾಗೂ ಶಾಸಕ ಅಶೋಕ್ ರೈ ಫೋಟೋ ಹಾಕಿದ್ದರು.