ಕೊಟ್ಟ ಮಾತು ಮರೆತ ಸಚಿವ ಪ್ರಿಯಾಂಕ್, ಶರಣಪ್ರಕಾಶ್ ಪಾಟೀಲ್: ಪ್ರಣವಾನಂದ ಶ್ರೀ

By Kannadaprabha News  |  First Published Jan 9, 2025, 12:31 PM IST

ಕಾರವಾರ ಸೇರಿದಂತೆ ಸುತ್ತಲಿನ 13 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಪಕ್ಷದ ಅಭ್ಯರ್ಥಿಯ ಸೋಲು-ಗೆಲುವು ನಿರ್ಧರಿಸುವ ಶಕ್ತಿ ಈಡಿಗ, ಬಿಲ್ಲವ ಮತ್ತು ನಾಮಧಾರಿ ಜನರಿಗಿದೆ. ಈ ಅಂಶ ಗಮನದಲ್ಲಿಟ್ಟುಕೊಂಡು ಒಂದು ಪ್ರತ್ಯೇಕ ಪಕ್ಷ ಸ್ಥಾಪನೆಗೆ ಪ್ರಯತ್ನ ನಡೆದಿದೆ ಎಂದ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಡಾ. ಪ್ರಣವಾನಂದ ಸ್ವಾಮೀಜಿ 


ಕಲಬುರಗಿ(ಜ.09):  ಈಡಿಗ ಸಮಾಜದ ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಆರ್ಥಿಕ ನೆರವು ಸೇರಿದಂತೆ ಸಮುದಾಯಕ್ಕೆ ಎಲ್ಲ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಈ ಹಿಂದೆ ವಿಪಕ್ಷ ಸ್ಥಾನದಲ್ಲಿದ್ದ ವೇಳೆ ಪ್ರಿಯಾಂಕ್ ಖರ್ಗೆ ಹಾಗೂ ಶರಣಪ್ರಕಾಶ್ ಪಾಟೀಲ್ ತಾವು ನೀಡಿದ್ದ ಭರವಸೆಯನ್ನು ಈಗ ಮರೆತಿದ್ದಾರೆ ಎಂದು ಚಿತ್ತಾಪುರ ತಾಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಮಾಜದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಿಂಚೋಳಿಯಿಂದ ಕಲಬುರಗಿಯ ವರೆಗೆ ಪಾದಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣ ಪ್ರಕಾಶ್ ಪಾಟೀಲ್ ಧರಣಿ ನಿರತರನ್ನು ಭೇಟಿ ಮಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂ ದರೆ ಈಡಿಗ, ಬಿಲ್ಲವ ಹಾಗೂ ನಾಮಧಾರಿ ಸೇರಿದಂತೆ ಎಲ್ಲ 26 ಪಂಗಡಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಈಗ ಇಬ್ಬರೂ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದರೂ ತಾವು ಕೊಟ್ಟಿದ್ದ ಮಾತು ಜ್ಞಾಪಿಸಿಕೊಳ್ಳಲು ಸಿದ್ದರಿಲ್ಲ ಎಂದು ವಿಷಾದಿಸಿದರು. 

Tap to resize

Latest Videos

ಶಿರೂರು ಗುಡ್ಡ ಕುಸಿತ ದುರ್ಘಟನೆ, ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಲು ಪ್ರಣವಾನಂದ ಶ್ರೀ ಆಗ್ರಹ

ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸ್ತಿತ್ವಕ್ಕೆ ತರಲಾದ ಈಡಿಗ ನಿಗಮಕ್ಕೆ ಮುಖ್ಯಮಂತ್ರಿ ಸಿಎಂಮುಂಗಡ ಪತ್ರ ಮಂಡಿಸಿದರೂ ನಯಾ ಪೈಸೆ ಅನುದಾನ ನೀಡದೆ ಸಮುದಾಯದ ಹಿತ ಕಡೆಗಣಿಸಿದ್ದಾರೆ ಎಂದು ಭಾರಿ ಆಸಮಾಧಾನ ಹೊರಹಾಕಿದರು. 

ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಈಡಿಗ ಸಮುದಾಯದ ಬೇಡಿಕೆಗಳಿಗೆ ಯಾವುದೇ ಸಂದನೆ ನೀಡದೆ ಇರುವುದು ಸಮಾಜ ಬಾಂಧವರಿಗೆ ನೋವು ತಂದಿದೆ. ಸಚಿವ ಪ್ರಿಯಾಂಕ್ ಅವರಿಗೆ ಈವರೆಗೆ 10 ಬಾರಿ ಫೋನ್ ಮೂಲಕ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸುವಷ್ಟು ಕನಿಷ್ಠ ಸೌಜನ್ಯ ತೋರುತ್ತಿಲ್ಲವೆಂದು ಸ್ವಾಮೀಜಿ ಟೀಕಿಸಿದರು. 

ಈಗಲೂ ಮಿಂಚಿಲ್ಲ. ಈಡಿಗ ಮುಖಂಡರನ್ನು ಒಳಗೊಂಡ ಒಂದು ನಿಯೋಗವನ್ನು ಕೊಂಡೊಯ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವ ಕೆಲಸವನ್ನು ಉಭಯ ಸಚಿವರೂ ಮಾಡಬೇಕೆಂದು ಅವರು ಆಗ್ರಹಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರು.500 ಕೋಟಿ ಅನುದಾನ ಒದಗಿಸುವುದರ ಜೊತೆಗೆ, ಈ ಹಿಂದಿನ ಸರಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಮೀಸಲಿರಿಸಿ ರು.25 ಲಕ್ಷ ಅನುದಾನವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ನೀಡಿದೆ. ಹಾಗಾಗಿ, ಕೂಡಲೆ ಅಧ್ಯಯನ ಆರಂಭಿಸುವಂತೆ ನಿರ್ದೇಶನ ನೀಡಬೇಕು. ಸೇಂದಿ ಇಳಿಸುವ ಕುಲಕಸುಬು ಕಳೆದುಕೊಂಡ ಸಮುದಾಯದ ಜನರಿಗೆ ನೀರಾ ಇಳಿಸುವ ವ್ಯವಸ್ಥೆ ಅಥವಾ ಸಮಾಜದ ನಿರ್ಗತಿಕರಿಗೆ ಪ್ರತ್ಯೇಕ ಪುನರ್ವಸತಿ ಪ್ಯಾಕೇಜ್ ಒದಗಿಸಬೇಕೆಂದರು. 

ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ. ಕಡೇ ಚೂರ್, ತಾಲೂಕು ಅಧ್ಯಕ್ಷ ಮಹೇಶ್ ಗುತ್ತೇದಾರ್, ಡಾ.ಸದಾನಂದ ಪೆಲ‌ರ್, ಅಂಬಯ್ಯ ಗುತ್ತೇದಾರ್, ಶಿವಯ್ಯ ಪೇಟಶಿರೂರು ಇದ್ದರು.

ಬೆಂಗಳೂರು ಜಿಟಿ ವರ್ಲ್ಡ್ ಮಾಲ್ ರೈತನಿಗೆ 1 ಕೋಟಿ ರೂ. ಮಾನನಷ್ಟ ಪರಿಹಾರ ಕೊಡಬೇಕು; ಪ್ರಣವಾನಂದ ಶ್ರೀ ಆಗ್ರಹ

ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪನೆಗೆ ಚಿಂತನೆ 

ಎಲ್ಲ ಪಕ್ಷಗಳು ಕರ್ನಾಟಕದ ಅತಿ ಹಿಂದುಳಿದ ಜನಾಂಗವನ್ನು ಎಲ್ಲ ಪಕ್ಷಗಳು ಕಡೆಗಣಿಸುತ್ತಿರು ವುದರಿಂದ ಈಡಿಗ, ಬಿಲ್ಲವ, ನಾಮಧಾರಿ ಸಮಾಜದ ಜನರು ಗಣನೀಯ ಸಂಖ್ಯೆಯಲ್ಲಿರುವ ಕರ್ನಾಟಕ ರಾಜ್ಯದ ದಕ್ಷಿಣದ ನಾಲ್ಕು ಜಿಲ್ಲೆಗಳನ್ನು ಪ್ರಧಾನವಾಗಿಟ್ಟುಕೊಂಡು ಸಮುದಾಯದಿಂದ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆ ಕೂಡ ಚಿಂತನೆ ನಡೆದಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಕೆಲವೊಂದು ಅಸೆಂಬ್ಲಿ ಕ್ಷೇತ್ರಗಳಲ್ಲಿ ಕನಿಷ್ಠ ಲಕ್ಷಕ್ಕಿಂತಲೂ ಅಧಿಕ ಸಮುದಾಯದ ಮತ ಬ್ಯಾಂಕ್ ಇದೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.

ಕಾರವಾರ ಸೇರಿದಂತೆ ಸುತ್ತಲಿನ 13 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಪಕ್ಷದ ಅಭ್ಯರ್ಥಿಯ ಸೋಲು-ಗೆಲುವು ನಿರ್ಧರಿಸುವ ಶಕ್ತಿ ಈಡಿಗ, ಬಿಲ್ಲವ ಮತ್ತು ನಾಮಧಾರಿ ಜನರಿಗಿದೆ. ಈ ಅಂಶ ಗಮನದಲ್ಲಿಟ್ಟುಕೊಂಡು ಒಂದು ಪ್ರತ್ಯೇಕ ಪಕ್ಷ ಸ್ಥಾಪನೆಗೆ ಪ್ರಯತ್ನ ನಡೆದಿದೆ ಎಂದರು. 

click me!