ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಚಿಂತನೆ ಮಾಡುವವರ ಸಂಖ್ಯೆ ತೀರ ಕಡಿಮೆಯಿದ್ದು, ಈ ನಿಟ್ಟಿನಲ್ಲಿ ಅವರ ವೈಯಕ್ತಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ನನ್ನ ಸ್ವಂತ ಖರ್ಚಿನಿಂದ ಆರೋಗ್ಯ ಕೇಂದ್ರಗಳನ್ನು ಹೋಬಳಿವಾರು ಪ್ರಾರಂಭಿಸಿ ಮಹಿಳೆಯರ ಬಗ್ಗೆ ಇಷ್ಟುಕಾಳಜಿ ವಹಿಸುತ್ತಿರುವ ನನಗೆ ಒಮ್ಮೆ ಈ ಕ್ಷೇತ್ರದ ಶಾಸಕನಾಗಲು ಅವಕಾಶ ಕೊಟ್ಟರೆ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಜನಸ್ಪಂದÜನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ ತಿಳಿಸಿದರು.
ತಿಪಟೂರು : ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಚಿಂತನೆ ಮಾಡುವವರ ಸಂಖ್ಯೆ ತೀರ ಕಡಿಮೆಯಿದ್ದು, ಈ ನಿಟ್ಟಿನಲ್ಲಿ ಅವರ ವೈಯಕ್ತಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ನನ್ನ ಸ್ವಂತ ಖರ್ಚಿನಿಂದ ಆರೋಗ್ಯ ಕೇಂದ್ರಗಳನ್ನು ಹೋಬಳಿವಾರು ಪ್ರಾರಂಭಿಸಿ ಮಹಿಳೆಯರ ಬಗ್ಗೆ ಇಷ್ಟುಕಾಳಜಿ ವಹಿಸುತ್ತಿರುವ ನನಗೆ ಒಮ್ಮೆ ಈ ಕ್ಷೇತ್ರದ ಶಾಸಕನಾಗಲು ಅವಕಾಶ ಕೊಟ್ಟರೆ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಜನಸ್ಪಂದÜನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ ತಿಳಿಸಿದರು.
ತಾಲೂಕಿನ ಕೆ.ಬಿ.ಕ್ರಾಸ್‌ನಲ್ಲಿ ಜನಸ್ಪಂದನ ಟ್ರಸ್ಟ್ ಹಾಗೂ ಆರ್ಟಿಸ್ಟ್ ಫಾರ್ ಹರ್ ಸಹಯೋಗದೊಂದಿಗೆ 2ನೆಯ ನಮ್ಮ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಿ ನಂತರ ಮಾತನಾಡಿದರು. ಉದ್ಯೋಗ ಕ್ರಾಂತಿಗಾಗಿ ತಿಪಟೂರಿನಲ್ಲಿ ಫೆ.5ರಂದು ಯುವಜನ ಮೇಳವನ್ನು ಆಯೋಜಿಸಲಾಗುತ್ತಿದೆ. ಯುವಜನರು ಸ್ವಾವಲಂಬಿಗಳಾಗಬೇಕು ತಮ್ಮ ಕುಟುಂಬವನ್ನು ಧೈರ್ಯದಿಂದ ಮುನ್ನೆಡೆಸಿಕೊಂಡು ಹೋಗಬೇಕೆಂಬ ಉದ್ದೇಶ ಇದಾಗಿದೆ ಎಂದರು.
ಚಿ.ನಾ.ಹಳ್ಳಿ ಗೋಡೆಕೆರೆ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಪ್ರಕೃತಿ ಹೇಗೆ ನಿಸ್ವಾರ್ಥ ಸೇವೆ ಮಾಡುತ್ತಿದೆಯೋ ಹಾಗೆæ ಮನುಷ್ಯನು ನಿಸ್ವಾರ್ಥ ಸೇವೆ ಮಾಡಿ ಕೈಲಾದ ಸಹಾಯ ಮಾಡಬೇಕು. ಅದರಂತೆ ಸಿ.ಬಿ. ಶಶಿಧರ್ ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಮ್ಮ ಆರೋಗ್ಯ ಕೇಂದ್ರಗಳನ್ನು ತೆರೆದಿರುವುದು ನಿಜಕ್ಕೂ ಶ್ಲಾಘನೀಯ. ಶಶಿಧರ್ ಅಧಿಕಾರವಿಲ್ಲದಿದ್ದರೆ ತಮ್ಮ ಸ್ವಂತ ಖರ್ಚಿನಲ್ಲಿ ಇಷ್ಟೆಲ್ಲಾ ಸೇವೆ ಮಾಡುತ್ತಿರುವ ಇವರಿಗೆ ಅಧಿಕಾರದ ಶಕ್ತಿ ತುಂಬುವ ಕೆಲಸವನ್ನು ನೀವು ಮಾಡಬೇಕು ಎಂದರು.
ಜಿಲ್ಲಾ ಯೂತ್ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿ ಮಾತನಾಡಿದರು.
ತುಮಕೂರಿನ ಶ್ರಿಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ದ್ವಾರಕನಾಥ್, ಅರವಳಿಕೆ ತಜ್ಞೆ ಡಾ. ರೇಖಾ, ಜಿ.ಪಂ ಮಾಜಿ ಸದಸ್ಯ ತ್ರಿಯಂಬಕ, ಹಾಲ್ಕುರಿಕೆ ಗ್ರಾಪಂ ಅಧ್ಯಕ್ಷ ಉಮಾಮಹೇಶ್, ಜಿ.ಪಂ ಮಾಜಿ ಸದಸ್ಯ ಮಮತಾ, ದಲಿತ ಮುಖಂಡ ಕುಂದೂರು ತಿಮ್ಮಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಳುವನೇರಲು ಗ್ರಾ.ಪಂ ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷೆ ಪುಷ್ಪಜಗದೀಶ್, ಗ್ರಾ.ಪಂ. ಸದಸ್ಯರಾದ ರಾಜೇಶ್ವರಿ, ಗೀತಾ, ಭವ್ಯ ನವೀನ್, ರೇಖಾ, ಜಯಶೀಲ, ರೇಣುಕಮ್ಮ, ಸುಧಾ, ಶೋಭಾ, ಗಾಯತ್ರಮ್ಮ ಮತ್ತಿತರರಿದ್ದರು. ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧ ಹಳ್ಳಿಗಳಿಂದ 4ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಅವಶ್ಯಕತೆಯುಳ್ಳವರು ಬಿಪಿ, ಶುಗರ್‌ನಂತಹ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಆರೋಗ್ಯ ಶಿಬಿರಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಿರುತ್ತವೆ. ಆದರೆ ಆರೋಗ್ಯ ಕೇಂದ್ರಗಳು ಜೀವನವಿಡಿ ಕಾರ್ಯನಿರ್ವಹಿಸುತ್ತವೆ. ತಾಲೂಕಿನ ಹಾಲ್ಕುರಿಕೆ ಹಾಗೂ ಕಿಬ್ಬನಹಳ್ಳಿಯಲ್ಲಿ ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಸಮಾಜದ ಪ್ರತಿ ಮನೆಗೂ ತಲುಪಿಸುವ ಗುರಿ ಹೊಂದಿದೆ. ಡಿಜಿಟಲ್ ತಂತ್ರಜ್ಞಾನವನ್ನು ಆರೋಗ್ಯ ಸಖಿಯರಿಗೆ ತರಬೇತಿ ನೀಡಿ ಸಮಾಲೋಚನೆಗಾಗಿ ವಿಡೀಯೊ ಕರೆಯಲ್ಲಿ ತಜ್ಞರನ್ನು ಸಂಪರ್ಕಿಸಿ ಬಳಸಲಾಗುವುದು.
ಡಾ. ಹೇಮಾದಿವಾಕರ್ ಅಧ್ಯಕ್ಷರು ಹಾಗೂ ಸಿಇಓ ಆರ್ಟಿಸ್ಟ್ ಫಾರ್ ಹರ್