ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ಸಚಿವ

By Kannadaprabha NewsFirst Published Dec 1, 2023, 10:21 AM IST
Highlights

ನಾನು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

  ನಂಜನಗೂಡು :  ನಾನು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ತಾಲೂಕಿನ ಮಲ್ಲನಮೂಲೆಯ ಗುರುಕಂಬಳೀಶ್ವರ ಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಚೆನ್ನಬಸವ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Latest Videos

ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಶುದ್ದ ಸುಳ್ಳು. ನಾನು ಕ್ಷೇತ್ರದ ಅಭ್ಯರ್ಥಿಯ ಆಕಾಂಕ್ಷಿಯಲ್ಲ, ಕ್ಷೇತ್ರದಿಂದ ಬಹಳಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಸುನಿಲ್‌ ಬೋಸ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ವರಿಷ್ಠರು ಶಾಸಕರ, ಕಾರ್ಯಕರ್ತರ, ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಗೆಲ್ಲುವ ಅಭ್ಯರ್ಥಿ ಯಾರು, ಯಾರಿಗೆ ಜನಬಲವಿದೆ, ಗೆಲ್ಲುವ ಸಾಮರ್ಥ್ಯ ಅಧಿಕವಾಗಿದೆ. ಕಾರ್ಯಕರ್ತರ ಒಲುವು ಹೆಚ್ಚಿದೆ ಎಂಬುದರ ಬಗ್ಗೆ ಸರ್ವೆ ನಡೆಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದರು.

ನಂಜನಗೂಡು ಉಪ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ಸಂಘಟಿಸಿದ್ದ ಕಾರಣ ಸುನಿಲ್‌ ಬೋಸ್ ಅವರನ್ನೇ ಸ್ಪರ್ಧಿಸುವಂತೆ ಇಲ್ಲಿನ ಕಾರ್ಯಕರ್ತರು ಒತ್ತಡ ಹೇರಿಸಿದ್ದರು. ಮುಖ್ಯಮಂತ್ರಿಗಳೂ ಕೂಡ ಸಮ್ಮತಿ ಸೂಚಿಸಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರಿಗೆ ಟಿಕೆಟ್ ನೀಡದೆ ವಂಚಿಸಲಾಗಿತ್ತು. ಆದರೂ ಕೂಡ ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ ಪಕ್ಷವನ್ನು ಸಂಘಟಿಸಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದಾರೆ. ನಂತರ ಸಾರ್ವತ್ರಿಕ ಚುನಾವಣೆಯಲ್ಲೂ ಕೂಡ ಅವರನ್ನೇ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು, ಆಗಲೂ ಕೂಡ ಟಿಕೆಟ್ ದೊರೆಯಲಿಲ್ಲ, ಆದರೂ ಕೂಡ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿ, ದುಡಿಯುವ ಮೂಲಕ ಪಕ್ಷ ನಿಷ್ಠೆ ತೋರಿದ್ದಾರೆ ಈ ಬಾರಿ ಅವರೂ ಕೂಡ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿ ಅವರಿಗೆ ವರಿಷ್ಠರು ಗ್ರೀನ್ ಸಿಗ್ನಲ್ ಕೊಡುವ ಸೂಚನೆ ಇದ್ದು, ಟಿಕೆಟ್ ದೊರಕುವ ವಿಶ್ವಾಸವಿದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ದೇವನೂರು, ಮಹದೇವಪ್ಪ, ಲಕ್ಷ್ಮಣ್, ಮುಖಂಡರಾದ ಮಾಧು, ನಂಜುಂಡಸ್ವಾಮಿ, ಪ್ರಕಾಶ್, ನಟರಾಜು, ಮಂಜುನಾಥ್, ಶಿವಬಸಪ್ಪ, ಎಚ್.ಎಸ್.ಮೂಗಶೆಟ್ಟಿ, ಶ್ರಿವಾಸ್, ಶ್ರೀನಿವಾಸ್ ಪರಶಿವಮೂರ್ತಿ, ನಂಜಪ್ಪ, ಶಿವಕುಮಾರ್, ಕೆಂಪಣ್ಣ, ಸುನಿ, ತ್ರಿಣೇಶ್, ಗುರುಸಿದ್ದಪ್ಪ, ನಂಜಪ್ಪ, ಹೆಜ್ಜಿಗೆಕೃಷ್ಣ, ಮಹದೇವಮೂರ್ತಿ, ನಾಗೇಂದ್ರ, ಬಸವರಾಜು, ವೀರಭದ್ರ, ಅಜ್ಗರ್, ನಾಸೀರ್, ರವಿ, ಆನಂದ್ ಇದ್ದರು.

click me!