Wildlife: ಕುಶಾಲನಗರ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ದಾಳಿ: ಪಾರು

By Kannadaprabha News  |  First Published Jun 18, 2023, 6:05 AM IST

ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಏಕಾಏಕಿ ಕಾಫಿ ತೋಟದಿಂದ ಹೊರಬಂದು ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ್ದು, ಕೂದಳೆಲೆಯ ಅಂತರದಲ್ಲಿ ಪಾರಾದ ಘಟನೆ ಶುಕ್ರವಾರ ಕುಶಾಲನಗರ ವಲಯ ಅರಣ್ಯದ ವ್ಯಾಪ್ತಿಯಲ್ಲಿ ನಡೆದಿದೆ.


ಕುಶಾಲನಗರ (ಜೂ.18) ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಏಕಾಏಕಿ ಕಾಫಿ ತೋಟದಿಂದ ಹೊರಬಂದು ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ್ದು, ಕೂದಳೆಲೆಯ ಅಂತರದಲ್ಲಿ ಪಾರಾದ ಘಟನೆ ಶುಕ್ರವಾರ ಕುಶಾಲನಗರ ವಲಯ ಅರಣ್ಯದ ವ್ಯಾಪ್ತಿಯಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಕುಶಾಲನಗರ ವಲಯ ಅರಣ್ಯದ ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ಗದ್ದೆ ಹಳ್ಳ-ಚೆಟ್ಟಳ್ಳಿ ಬಳಿ ಗೇರುಬಾಣೆ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಆರ್‌ಆರ್‌ಟಿ ತಂಡದ ಯೋಗೀಶ್‌ ಕಾಡಾನೆ ದಾಳಿಯಿಂದ ಪಾರಾದವರು. ಆನೆಯಿಂದ ತಪ್ಪಿಸಿಕೊಳ್ಳುವ ಸಂದರ್ಭ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.

Tap to resize

Latest Videos

undefined

ಬೆಂಗಳೂರು ಪಕ್ಕದಲ್ಲಿ ಕಾಡಾನೆ ದಾಳಿಗೆ ಇಬ್ಬರು ರೈತರ ಬಲಿ: ಸಾಂತ್ವನ ಹೇಳಿದ ಸಚಿವ ಖಂಡ್ರೆ

ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆಕಾಡು ಅರಣ್ಯದ ಉಪ ಅರಣ್ಯ ವಲಯ ಅಧಿಕಾರಿ ದೇವಯ್ಯ ನೇತೃತ್ವದಲ್ಲಿ ಆರ್‌ಆರ್‌ಟಿ ಮತ್ತು ಎಲಿಫೆಂಟ್‌ ಟಾÓ್ಕ…ಫೋರ್ಸ್‌ನ ಸುಮಾರು 15ಕ್ಕೂ ಅಧಿಕ ಸದಸ್ಯರು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಎರಡು ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗೇರುಬಾಣೆ ಎಸ್ಟೇಟ್‌ನಿಂದ ಏಕಾಏಕಿ ಹೊರಬಂದ ಒಂಟಿ ಸಲಗ ಎದುರುಗಡೆ ಕಂಡು ಬಂದ ಸಿಬ್ಬಂದಿ ಯೋಗೀಶ್‌ ಅವರನ್ನು ಅಟ್ಟಿಸಿಕೊಂಡು ಹೋಗಿದೆ. ಯೋಗೀಶ್‌ ಇದನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಜೊತೆಗಿದ್ದ ಕಾರ್ಯಾಚರಣೆ ತಂಡದ ಸದಸ್ಯರು ಬೊಬ್ಬೆ ಹಾಕುವ ಮೂಲಕ ಆನೆಯನ್ನು ಎಸ್ಟೇಟ್‌ ಒಳಗೆ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಒಂಟಿ ಸಲಗದ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಯೋಗೀಶ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್‌ ತಿಳಿಸಿದ್ದಾರೆ.

ಜನವಸತಿ ಪ್ರವೇಶಕ್ಕೆ ನುಸುಳಿದ ಆನೆ: ಆತಂಕದಲ್ಲಿ ಜನತೆ

ಬೆಳಗಾವಿ: ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಆಝ್ರಾ ತಾಲೂಕಿನ ಮಸೋಲಿ ಗ್ರಾಮದ ಜನ ವಸತಿ ಪ್ರದೇಶಕ್ಕೆ ಕಾಡಾನೆ ನುಸುಳಿರುವುದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದ ಘಟನೆ ನಡೆದಿದೆ. ಮನೆ ಎದುರೇ ಆನೆ ಬರುತ್ತಿದ್ದಂತೆಯೇ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮನೆಯಲ್ಲಿ ಕುಳಿತು ಆನೆಯ ಚಲನವಲಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು. ಬಳಿಕ ಆಝ್ರಾದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದರು.

ಚನ್ನಪಟ್ಟಣದಲ್ಲಿ ಮತ್ತೊಬ್ಬ ತೋಟದ ಕಾವಲುಗಾರ ಆನೆಯ ದಾಳಿಗೆ ಬಲಿ

click me!