ಜುಲೈ ತಿಂಗಳಿನಲ್ಲಿ ಸುರಿದ ಉತ್ತಮ ಮಳೆಯಿಂದ ಹುಟ್ಟಿಕೊಂಡಿದ್ದ ನೀರಿನ ಸೆಲೆಗಳು, ಝರಿಗಳು, ಹಳ್ಳಕೊಳ್ಳಗಳು ಆಗಸ್ಟ್ ತಿಂಗಳಿನಲ್ಲಿ ಉಂಟಾದ ಮಳೆಯ ತೀವ್ರ ಅಭಾವದಿಂದ ಬತ್ತುತ್ತಿವೆ. ಇದರಿಂದ ಕೆಲವೆಡೆ ನೀರಿಗಾಗಿ ನಾಡಿನತ್ತ ಕಾಡುಪ್ರಾಣಿಗಳು ಬರುತ್ತಿವೆ. ಮುಂಬರುವ ದಿನಗಳಲ್ಲಿ ಮಳೆಯಾಗದೆ ಇದ್ದಲ್ಲಿ ಅರಣ್ಯದಲ್ಲಿ ನೀರಿಗೆ ತೀವ್ರ ಅಭಾವ ಉಂಟಾಗಲಿದೆ. ಇದರಿಂದ ವನ್ಯಪ್ರಾಣಿಗಳ ಬದುಕು ದಾರುಣವಾಗುವ ಸಾಧ್ಯತೆ ಇದೆ.
ವಸಂತಕುಮಾರ್ ಕತಗಾಲ
ಕಾರವಾರ(ಸೆ.07): ಮಾಯವಾದ ಮಳೆಯಿಂದ ದಟ್ಟ ಅರಣ್ಯದಲ್ಲೂ ನೀರಿನ ಸೆಲೆ ಕಡಿಮೆಯಾಗುತ್ತಿದೆ. ಕಾಡು ಪ್ರಾಣಿಗಳು ನೀರನ್ನು ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಮಳೆಯಾಗದಿದ್ದಲ್ಲಿ ವನ್ಯಜೀವಿಗಳ ಪರಿಸ್ಥಿತಿ ಗಂಭೀರವಾಗಲಿದೆ.
undefined
ಜುಲೈ ತಿಂಗಳಿನಲ್ಲಿ ಸುರಿದ ಉತ್ತಮ ಮಳೆಯಿಂದ ಹುಟ್ಟಿಕೊಂಡಿದ್ದ ನೀರಿನ ಸೆಲೆಗಳು, ಝರಿಗಳು, ಹಳ್ಳಕೊಳ್ಳಗಳು ಆಗಸ್ಟ್ ತಿಂಗಳಿನಲ್ಲಿ ಉಂಟಾದ ಮಳೆಯ ತೀವ್ರ ಅಭಾವದಿಂದ ಬತ್ತುತ್ತಿವೆ. ಇದರಿಂದ ಕೆಲವೆಡೆ ನೀರಿಗಾಗಿ ನಾಡಿನತ್ತ ಕಾಡುಪ್ರಾಣಿಗಳು ಬರುತ್ತಿವೆ. ಮುಂಬರುವ ದಿನಗಳಲ್ಲಿ ಮಳೆಯಾಗದೆ ಇದ್ದಲ್ಲಿ ಅರಣ್ಯದಲ್ಲಿ ನೀರಿಗೆ ತೀವ್ರ ಅಭಾವ ಉಂಟಾಗಲಿದೆ. ಇದರಿಂದ ವನ್ಯಪ್ರಾಣಿಗಳ ಬದುಕು ದಾರುಣವಾಗುವ ಸಾಧ್ಯತೆ ಇದೆ.
ಮಾಜಿ ಸಂಸದ ಪತ್ನಿಯನ್ನೂ ಬಿಡದ ಕಳ್ಳರು! ನೀರು ಕೇಳೋ ನೆಪದಲ್ಲಿ ಸರ ಕಿತ್ತು ಪರಾರಿ!
ಮುಂಡಗೋಡದ ಸನವಳ್ಳಿ, ಧರ್ಮಾ, ಬಾಚಣಕಿ ಮತ್ತಿತರ ಜಲಾಶಯಗಳಿಗೆ ನೀರಿಗಾಗಿ ಹರಿಣಗಳು ಲಗ್ಗೆ ಇಡುತ್ತಿವೆ. ಬಾಯಾರಿ ಬರುವ ಕಾಡುಪ್ರಾಣಿಗಳಿಗಾಗಿಯೇ ಕಾದಿರುವ ಬೀದಿನಾಯಿಗಳ ಹಿಂಡು ಇವುಗಳ ಮೇಲೆ ದಾಳಿ ನಡೆಸುತ್ತಿವೆ. ಗುಣವಂತೆ ಬಳಿ ಇಡಗುಂಜಿ ಕ್ರಾಸ್ ಸಮೀಪ ಜಿಂಕೆಗಳ ಹಿಂಡು ಕಂಡುಬಂದಿದೆ. ಕಾಡು ಪ್ರಾಣಿಗಳು ನೀರು ಆಹಾರ ಹುಡುಕುತ್ತ ನಾಡಿನತ್ತ ಹೆಜ್ಜೆ ಹಾಕುತ್ತಿವೆ.
ಕಾಳಿ ಹುಲಿ ಯೋಜನಾ ಪ್ರದೇಶದಲ್ಲಿ ಈ ಹಿಂದೆ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಕೃತಕ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು ತುಂಬಿಡಲಾಗುತ್ತಿತ್ತು. ಈಗ ಮುಂಡಗೋಡ, ಹಳಿಯಾಳ, ಬನವಾಸಿ ಮತ್ತಿತರ ಕಡೆಗಳಲ್ಲಿ ಅರಣ್ಯದಲ್ಲಿ ಕುಡಿಯುವ ನೀರಿನ ಮೂಲ ಕ್ಷೀಣಿಸುತ್ತಿದೆ. ಮಳೆಯಾಗದಿದ್ದಲ್ಲಿ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲೂ ಅರಣ್ಯ ಪ್ರದೇಶದಲ್ಲಿ ಕೃತಕ ನೀರಿನ ತೊಟ್ಟಿಗಳ ನಿರ್ಮಾಣ, ಜಲಮೂಲಗಳಲ್ಲಿ ತುಂಬಿದ ಹೂಳೆತ್ತುವುದು ಇಂತಹ ಕಾಮಗಾರಿಗಳ ಮೂಲಕ ಕಾಡುಪ್ರಾಣಿಗಳಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕಾಗಿದೆ.
ಸದ್ಯ ನೀರಿಗೆ ತೀವ್ರ ಬರ ಎದುರಾಗಿಲ್ಲ. ಮಳೆ ಆಗದೆ ಇದ್ದರೆ ಬನವಾಸಿ, ಮುಂಡಗೋಡ, ಹಳಿಯಾಳ ಮತ್ತಿತರ ಕಡೆಗಳಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಆಗ ಅರಣ್ಯದ ನೀರಿನ ಮೂಲದಲ್ಲಿ ಹೂಳೆತ್ತುವುದು ಸೇರಿದಂತೆ ಪ್ರಾಣಿಗಳಿಗೆ ನೀರುಣಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಲಿದೆ ಎಂದು ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದ್ದಾರೆ.