
ದಾವಣಗೆರೆ (ಮಾ.26): ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವನ್ನಪ್ಪಿದ ಘಟನೆ ಗುರುವಾರ ದಾವಣಗರೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೂವಿನಮಡು ಗ್ರಾಮದ ಎಚ್.ಜಿ.ಚಂದ್ರಪ್ಪ(62), ಪತ್ನಿ ವಸಂತಮ್ಮ(56) ಸಾವಿನಲ್ಲೂ ಒಂದಾದ ದಂಪತಿ. ಕಳೆದೊಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಚಂದ್ರಪ್ಪ ಅವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಚದಡಿ ಕುಳಿತು ಪತ್ನಿಯ ಪ್ರಿಯಕರನ ಹತ್ಯೆ..! ...
ಆರೋಗ್ಯದಲ್ಲಿ ಚೇತರಿಕೆ ಕಂಡು ಬರದೆ ಬುಧವಾರ ಸಂಜೆ ಅಸುನೀಗಿದರು. ಆಸ್ಪತ್ರೆಗೆ ದಾಖಲಿಸಿದ್ದ ಪತಿಯ ಸಾವಿನ ವಿಚಾರ ಕೇಳುತ್ತಿದ್ದಂತೆ ಊರಿನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವಸಂತಮ್ಮನ ಆರೋಗ್ಯದಲ್ಲೂ ಏರುಪೇರಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಪತಿ, ಪತ್ನಿ ಇಬ್ಬರು ಒಂದೇ ದಿನ ಅಗಲಿದ್ದರಿಂದ ಕುಟುಂಬದವರು ಇಬ್ಬರನ್ನು ಒಂದೇ ಕಡೆ ಅಂತ್ಯಕ್ರಿಯೆ ಮಾಡಿದರು.