ಪತಿಯನ್ನು ಮಚ್ಚಿನಿಂದ ಕೊಚ್ಚಿದ ಪತ್ನಿ : ಮಧ್ಯರಾತ್ರಿ ನಡೆಯಿತು ದುರ್ಘಟನೆ

Kannadaprabha News   | Asianet News
Published : Feb 25, 2021, 10:13 AM ISTUpdated : Feb 25, 2021, 10:56 AM IST
ಪತಿಯನ್ನು ಮಚ್ಚಿನಿಂದ ಕೊಚ್ಚಿದ ಪತ್ನಿ : ಮಧ್ಯರಾತ್ರಿ ನಡೆಯಿತು ದುರ್ಘಟನೆ

ಸಾರಾಂಶ

ಮಧ್ಯರಾತ್ರಿ ಸಮಯಪತ್ನಿಯೇ ಪತಿಯನ್ನು  ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿ ಕೊಚ್ಚಿ ಹಾಕಿದ ಘಟನೆ ನಡೆದಿದೆ. 

ಹಾಸನ (ಫೆ.25):  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಮೇಲೆ ಪತ್ನಿಯೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೇಲೂರು ತಾಲೂಕಿನ ತಗರೆ ಗ್ರಾಮದಲ್ಲಿ ನಡೆದಿದೆ. 

ಪತಿ ನಿಂಗರಾಜು ಹಾಗೂ ಪತ್ನಿ ಗಿರಿಜಾ ನಡುವೆ ಜಗಳ ನಡೆದು ತಾರಕಕ್ಕೇರಿದೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಪತಿ ನಿಂಗರಾಜು ಮಲಗಿದ್ದ ವೇಳೆ ಪತ್ನಿ ಗಿರಿಜಾ ಮಚ್ಚಿನಿಂದ ಕೈ, ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಮನಸ್ಸೋಇಚ್ಚೆ ಕೊಚ್ಚಿದ್ದಾಳೆ. 

ಮಂಡ್ಯ ಆಯ್ತು ಈಗ ರಾಯಚೂರು: ಬಸ್ ನಿಲ್ದಾಣದಲ್ಲಿ ಯುವ ಜೋಡಿ ಲಿಪ್ ಲಾಕ್ ...

ತೀವ್ರವಾಗಿ ಗಾಯಗೊಂಡಿದ್ದ ನಿಂಗರಾಜುವಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ನಿಂಗರಾಜು ಸಂಬಂಧಿಕರು ಅರೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಿರಿಜಾಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್