ಆಕ್ರೋಶಕ್ಕೆ ತುತ್ತಾದ ಕೃಷಿ ಸಚಿವರ ಪೋಸ್ಟ್‌

By Kannadaprabha News  |  First Published Dec 5, 2020, 10:32 AM IST

ರೈತರ ವ್ಯಾಪಕ ಆಕ್ರೋಶ| ಸಚಿವರು ಎಲ್ಲಿ ಖರೀದಿಸಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು| ಸಚಿವರು ನೀಡಿರುವ ಮಾಹಿತಿ ಎಲ್ಲಿಯದು ಎನ್ನುವುದನ್ನು ಸ್ಪಷ್ಟಪಡಿಸಬೇಕು|ಸಚಿವರ ಪೋಸ್ಟ್‌ಗೆ ಗಂಗಾವತಿ, ಸಿಂಧನೂರು ಭಾಗದ ರೈತರ ರಿಯಾಕ್ಟ್| 


ಕೊಪ್ಪಳ(ಡಿ.05): ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳುವ ಮೂಲಕ ಭಾರಿ ಟೀಕೆಗೆ ಗುರಿಯಾಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಈಗ ತಾವೇ ಹಾಕಿದ ಪೋಸ್ಟ್‌ಗೆ ರೈತರಿಂದ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಸರ್ಕಾರ 2020-21 ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆಯ ಮೂಲಕ 297.51 ಲಕ್ಷ ಮೆಟ್ರಿಕ್‌ ಟನ್‌ ಭತ್ತವನ್ನು ಖರೀದಿಸಿದೆ ಎನ್ನುವ ಪೋಸ್ಟ್‌ನ್ನು ಅವರು ತಮ್ಮ ಪೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾರೆ.

Tap to resize

Latest Videos

'ಒದಕಿ ಬಿದ್ದಾಗಲೇ ತೇಜಸ್ವಿ ಸೂರ್ಯನಿಗೆ ಸಂವಿಧಾನ ನೆನಪಾಗಿದ್ದು'

ಇದಕ್ಕೆ ರೈತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ಎಲ್ಲಿ ಖರೀದಿಸಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇದುವರೆಗೂ ಬೆಂಬಲ ಬೆಲೆಗೆ ಭತ್ತ ಖರೀದಿಸುವ ಪ್ರಕ್ರಿಯೆಯೇ ಪ್ರಾರಂಭವಾಗಿಲ್ಲ. ಬೆಂಬಲ ಬೆಲೆ ಕೇಂದ್ರವನ್ನು ಪ್ರಾರಂಭ ಮಾಡಿಲ್ಲ. ಕೇವಲ ನೋಂದಣಿ ಮಾಡಿಸಿಕೊಳ್ಳುತ್ತಿದ್ದು. ಸಚಿವರು ನೀಡಿರುವ ಮಾಹಿತಿ ಎಲ್ಲಿಯದು ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಅವರ ಪೋಸ್ಟ್‌ಗೆ ಗಂಗಾವತಿ, ಸಿಂಧನೂರು ಭಾಗದ ರೈತರು ರಿಯಾಕ್ಟ್ ಮಾಡಿದ್ದಾರೆ.
 

click me!