ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಾದರೆ ಇದರ ಹಿಂದಿರುವುದು ಯಾರು ಎನ್ನುವ ಸತ್ಯಾಸತ್ಯತೆ ಹೊರಬರಲಿದೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಹೇಳಿದರು.
ಚಿಕ್ಕಮಗಳೂರು (ಮಾ.15) : ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಡಿಕೆಶಿ ತಮ್ಮ ಹೆಸರನ್ನ ಯಾಕೆ ತಳುಕು ಹಾಕುತ್ತಿದ್ದಾರೆ ಗೊತ್ತಾಗ್ತಿಲ್ಲ. ತನಿಖೆಯಾಗಲಿ ಪ್ರೊಡ್ಯೂಸರ್, ಡೈರಕ್ಟರ್, ಆ್ಯಕ್ಟರ್ ಯಾರೆಂದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿಂದು ಮಾತನಾಡಿದ ಸಿ.ಟಿ.ರವಿ ಸಿಡಿ ಕೇಸ್ ಕರ್ನಾಟಕ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ. ಹಿಂದೆ ಮೌಲ್ಯಧಾರಿತ ರಾಜಕೀಯದ ಚರ್ಚೆ ನಡೆಯುತ್ತಿತ್ತು. ಈಗ ಸಿಡಿ ಆಧಾರಿತ ರಾಜಕಾಕೀಯದ ಚರ್ಚೆ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ರಾಸಲೀಲೆ ಸಿಡಿ : ನಾನೇ ಕೇಸ್ ಕೊಡಿಸ್ತೀನಿ ಎಂದ ಡಿಕೆಶಿ ...
ಮೌಲ್ಯಧಾರಿತವೋ... ಸಿಡಿ ಆಧಾರಿತ ರಾಜಕಾರಣ ಬೇಕೋ, ಎಲ್ಲರೂ ಯೋಚಿಸಬೇಕು. ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.
ಜಕಾರಣಿಗಳಿಗೆ ಜನ ಲಜ್ಜೆ-ಮನಲಜ್ಜೆ ಎರಡೂ ಇರಬೇಕು. ನಮಗೆ ನಾವೇ ಪರಿಮಿತ ಹಾಕಿಕೊಳ್ಳೋದು ಮನಲಜ್ಜೆ, ಜನರಿಗೆ ಹೆದರೋದು ಮನಲಜ್ಜೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.