'ಸಿಡಿ ಪ್ರಕರಣದ ಮಹಾನ್ ನಾಯಕ ಯಾರು : ಡಿಕೆಶಿ ಯಾಕ್ ಹೀಗಂದ್ರು..?'

By Suvarna News  |  First Published Mar 15, 2021, 11:43 AM IST

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿನವೂ ಪ್ರಕರಣ ಹೊಸ ಹೊಸ ಟ್ವಿಸ್ಟ್ ತೆಗೆದುಕೊಳ್ಳುತ್ತಿದೆ. ಇದೀಗ ಇದರ ಹಿಂದಿನ ಮಹಾನ್ ನಾಯಕ ಯಾರು ಎನ್ನುವ ಕುತೂಹಲದ ಬಗ್ಗೆ ಎಚ್‌ಡಿಕೆ ಮಾತನಾಡಿದ್ದಾರೆ. 


ಚಿಕ್ಕಮಗಳೂರು (ಮಾ.15):  ಸಿಡಿ ಪ್ರಕರಣ ಮಹಾನ್ ನಾಯಕ ಯಾರು ಎಂದು ನಾನು ಕುತೂಹಲದಿಂದ ಕಾಯ್ತಿದ್ದೀನಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

"

Tap to resize

Latest Videos

ರಾಮನಗರದಲ್ಲಿಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಪ್ರಕರಣ ಸಾರ್ವಜನಿಕರಿಗೆ ನಗಪಾಟಲಿಗೆ ಪರಿವರ್ತನೆಯಾಗುತ್ತಿದೆ.  ಯಾವುದೋ ಲಿಂಕ್ ತಗೆದುಕೊಂಡು ಧಾರಾವಾಹಿ ರೀತಿ ಇದೆ.  ಅಂತಿಮವಾಗಿ ಯಾರಿಗೆ ಸುತ್ತಾಕಿ ಕೊಳ್ಳಲಿದೆ ಎಂದು ಕಾಯುತ್ತಿದ್ದೇನೆ ಎಂದರು. 

ರಾಜಕೀಯವಾಗಿ ನಮ್ಮ ಕುಟುಂಬದಲ್ಲಿ ಇಂತಹ ವಿಷಯಗಳ ಬಗ್ಗೆ ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡಿಲ್ಲ. ಇದು ಅವರ ವೈಯಕ್ತಿಕ ವಿಚಾರಗಳು, ಜನರ ಸಮಸ್ಯೆಗಳ ಬಗ್ಗೆ ದೊಡ್ಡ ಸಾವಲುಗಳಿದೆ.  ಅದರ ಬಗ್ಗೆ ಗಮನ ಕೊಡಬೇಕು ಹೊರತು ಈ ರೀತಿಯ ಘಟನೆಗಳಿಂದ ನಮಗೆ ವೈಯಕ್ತಿಕ ಲಾಭ ಪಡೆಯಬೇಕು ಎಂಬ ಸಣ್ಣತನಕ್ಕೆ ನಾವು ಇಳಿಯುವುದಿಲ್ಲ ಎಂದರು.

ರಾಸಲೀಲೆ ಸಿಡಿ : ನಾನೇ ಕೇಸ್ ಕೊಡಿಸ್ತೀನಿ ಎಂದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ ಹಿನ್ನೆಲೆ. ಯಾಕೆ ಅವರ ಹೆಸರು ತಂದುಕೊಂಡರು ಎಂಬುದು ಗೊತ್ತಿಲ್ಲ. ಯಾರದರೂ ಹೇಳಿದ್ದಾರಾ ಅವರೇ ಮಾಡಿದ್ದಾರೆ ಎಂದು.  ಜಾರಕಿಹೊಳಿ ಹೇಳಿದ್ರಾ ಅಥವಾ ಮಾಧ್ಯಮದವರು ಏನಾದ್ರು ಹೇಳಿದ್ರಾ...? ಯಾಕೆ ಅವರೇ ಊಹೆ ಮಾಡಿಕೊಂಡರೋ ಗೊತ್ತಿಲ್ಲ ಎಂದು ರಾಮನಗರದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಹೇಳಿದರು. 

click me!