ಶಿರೂರು ಮಠದ ಆಸ್ತಿ ಎಷ್ಟು? ಯಾರು ಮುಂದಿನ ಉತ್ತರಾಧಿಕಾರಿ?

Published : Jul 27, 2018, 08:16 PM IST
ಶಿರೂರು ಮಠದ ಆಸ್ತಿ ಎಷ್ಟು? ಯಾರು ಮುಂದಿನ ಉತ್ತರಾಧಿಕಾರಿ?

ಸಾರಾಂಶ

ಶಿರೂರು ಸ್ವಾಮೀಜಿ ನಿಧನದ ನಂತರ ಮಠದ ಆಸ್ತಿ ಸನ್ಯಾಸಿ ನೇಮಕ ವಿಚಾರದಲ್ಲಿ ಹಲವಾರು ಅನುಮಾನಗಳು ಎದ್ದಿವೆ. ಮಠಕ್ಕೆ ಹೊಸ ವಟು ನೇಮಕದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಉಡುಪಿ(ಜು.27]  ಶಿರೂರು ಮಠಕ್ಕೆ ಯೋಗ್ಯ ವಟುವನ್ನು ನೇಮಕ ಮಾಡಲಾಗುವುದು ಎಂದು ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಯೋಗ್ಯ ವಟು ಸಿಕ್ಕ ಕೂಡಲೇ ಶಿಷ್ಯ ಸ್ವೀಕಾರ ಮಾಡಲಾಗುವುದು. ಶಿಷ್ಯ ಸ್ವೀಕಾರಕ್ಕೆ ನಿಗದಿತ ಸಮಯ ಇಲ್ಲ. 18 ವರ್ಷ ಮೇಲ್ಪಟ್ಟ ವಟುವಿಗೆ ದೀಕ್ಷೆ ಕೊಡಲಾಗುವುದು. ಸಂಸ್ಕೃತ ಪಾಂಡಿತ್ಯ, ಶಿಕ್ಷಣ ಇದ್ದ ವಟುವನ್ನೇ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸದ್ಯ ಶಿರೂರು ಮಠ ಪೊಲೀಸ್ ಸುಪರ್ದಿಯಲ್ಲಿದೆ. ಪೊಲೀಸರು ಅವಕಾಶ ಕೊಟ್ಟರೆ ಜುಲೈ 31 ಕ್ಕೆ ಆರಾಧನೆ ನಡೆಸುತ್ತೇವೆ. ಶಿರೂರು ಮಠಕ್ಕೆ ಬಾಲ ಸನ್ಯಾಸಿಯ ನೇಮಕವಿಲ್ಲ. ಸೂಕ್ತ ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಶಿರೂರು ಮಠದ ಆಸ್ತಿ ವಿವರ ನನಗೆ ತಿಳಿದಿಲ್ಲ. ಮಠವನ್ನು ಪೋಲಿಸರು ಬಿಟ್ಟುಕೊಟ್ಟ ನಂತರ ಲೆಕ್ಕಾಚಾರ ಮಾಡಲಾಗುವುದು. 5 ಜನರ ಸಮಿತಿಯನ್ನು ಒಂದೆರಡು ದಿನದಲ್ಲಿ ರಚಿಸಲಾಗುವುದು. ಶೀರೂರು ಮಠ ಅನಾಥವಲ್ಲ. ನಮಗೆ ಏಳೂ ಮಠಾಧೀಶರ ಸಹಕಾರವಿದೆ. ಶೀರೂರು ಮಠದಲ್ಲಿ ಎಷ್ಟು ಚಿನ್ನ ಇದೆ ಗೊತ್ತಿಲ್ಲ. ಚರ, ಸ್ಥಿರಾಸ್ತಿ ಎಷ್ಟಿದೆ ಎಂಬ ಮಾಹಿತಿಯೂ ನನಗಿಲ್ಲ.  ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪರಾಮರ್ಶೆ ಮಾಡುತ್ತೇನೆ ಎಂದು ತಿಳಿಸಿದರು.

ಶಿರೂರು ಸ್ವಾಮೀಜಿ ನಿಧನದ ನಂತರ ಮಠದ ಆಸ್ತಿ ಸನ್ಯಾಸಿ ನೇಮಕ ವಿಚಾರದಲ್ಲಿ ಹಲವಾರು ಅನುಮಾನಗಳು ಎದ್ದಿವೆ. ಮಠಕ್ಕೆ ಹೊಸ ವಟು ನೇಮಕದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

PREV
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ