ರಾಜ್ಯ ಸರ್ಕಾರದ ವಿರುದ್ಧ ಗಾಳಿಯಲ್ಲಿ ಗುಂಡು ಹೊಡೆದು ಶಾಸಕ ರಮೇಶ್ಜಾರಕಿಹೊಳಿ ಅಸ್ತಿತ್ವ ಉಳಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
ಮೈಸೂರು : ರಾಜ್ಯ ಸರ್ಕಾರದ ವಿರುದ್ಧ ಗಾಳಿಯಲ್ಲಿ ಗುಂಡು ಹೊಡೆದು ಶಾಸಕ ರಮೇಶ್ಜಾರಕಿಹೊಳಿ ಅಸ್ತಿತ್ವ ಉಳಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
ನಗರದ ಕಾಂಗ್ರೆಸ್ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಅವರು ಅಸಂವಿಧಾನಿಕ ಪದ ಬಳಕೆಯ ಮೂಲಕ ನಿಂದಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
undefined
ಪತನವಾಗುತ್ತೇ, ಸಿಎಂ, ಡಿಸಿಎಂ ಮಾಜಿಗಳಾಗುತ್ತಾರೆ ಎಂದು ಹೇಳ್ತಿದಾರೆ. ನಿಮ್ಮಸ್ಥಾನವನ್ನು ಯಾರು ಕಿತ್ತುಕೊಂಡರು ಎಂಬುದನ್ನು ಹೇಳಿ. ಎಲ್ಲರಿಗೂ ಗೊತ್ತಾಗಲಿ ಎಂದು ಅವರು ಆಗ್ರಹಿಸಿದರು.
ಕೇಂದ್ರ ಹಣ ನೀಡಿಲ್ಲ
ರಾಜ್ಯದ 31 ಜಿಲ್ಲೆಗಳ 221 ತಾಲೂಕುಗಳನ್ನು ರಾಜ್ಯ ಸರ್ಕಾರ ಬರ ಪೀಡಿತವೆಂದು ಘೋಷಣೆ ಮಾಡಿ ಕೇಂದ್ರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಕ್ಟೋಬರ್ಮೊದಲ ವಾರದಲ್ಲಿ ಕೇಂದ್ರದ ತಂಡವು ರಾಜ್ಯಕ್ಕೆ ಆಗಮಿಸಿ 30373 ಕೋಟಿ ರು.ಬರ ಪರಿಹಾರದ ವರದಿ ನೀಡಿದೆ. ತಕ್ಷಣಕ್ಕೆ 17534 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಬೇಕು. ಆದರೆ, ಒಂದು ರೂಪಾಯಿನೂ ಕೊಟ್ಟಿಲ್ಲ ಎಂದು ಅವರು ದೂರಿದರು.
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ನದಿಗಳ ವಾಸ್ತವ ಸ್ಥಿತಿ ಅಧ್ಯಯನ ನಡೆಸಲು ಕೇಂದ್ರದಿಂದ ತಂಡ ಬರಲಿಲ್ಲ. ಜೊತೆಗೆ ನೀರು ಹರಿಸುವ ವಿಚಾರದಲ್ಲಿಯೂ ಬಿಜೆಪಿ ಸಂಸದರು ಕೇಂದ್ರದ ಬಳಿ ಮಾತನಾಡಲಿಲ್ಲ. ಆದರೀಗ ಬರ ಪೀಡಿತ ಪ್ರದೇಶಗಳಿಗೆ ಬಿಜೆಪಿ ಬರ ಅಧ್ಯಯನ ಸಮಿತಿ ರಚಿಸಲು ಮುಂದಾಗಿದೆ. ಬಿಜೆಪಿ ಸಂಸದರು, ನಾಯಕರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ಶಾ ಅವರಿಗೆ ಮನವಿ ಮಾಡಿ, ರಾಜ್ಯಕ್ಕೆ ಹಣ ತರುವ ಕೆಲಸ ಮಾಡಿ ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ವಿರೋಧ ಪಕ್ಷ ನಾಯಕ ಸ್ಥಾನ ಖಾಲಿಯಿದೆ. ಈ ಸ್ಥಾನವನ್ನು ತುಂಬುವಂತೆ ಆಡಳಿತ ಪಕ್ಷದ ನಾಯಕರೇ ಕೇಳುತ್ತಿದ್ದಾರೆ. ವಿದ್ಯುತ್ವಿಚಾರದಲ್ಲಿ ಬಿಜೆಪಿ- ಜೆಡಿಎಸ್ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿವೆ. ಮಳೆ ಕೊರತೆ ಮತ್ತು ಹಿಂದಿನ ಬಿಜೆಪಿ ಸರ್ಕಾರದ ತಪ್ಪಿನಿಂದ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಆದರೆ, ರಾಜ್ಯ ಸರ್ಕಾರ ಖಾಸಗಿ ಅವರಿಂದ ವಿದ್ಯುತ್ಖರೀದಿಸಿಲ್ಲ. ಕೇಂದ್ರದಿಂದಲೇ ವಿದ್ಯುತ್ ಖರೀಸಲಾಗುತ್ತಿದೆ. ಕೇಂದ್ರದಿಂದ ಕಮಿಷನ್ ತೆಗೆದುಕೊಳ್ಳಲು ಸಾಧ್ಯವೇ? ಸುಳ್ಳು ಹೇಳಬೇಕು, ಈ ಮಟ್ಟದಲ್ಲಿ ಅಲ್ಲ ಎಂದು ಅವರು ಕಿಡಿಕಾರಿದರು.
ಜೀವ ಬೆದರಿಕೆ ಪ್ರಕರಣದ ಆರೋಪಿಯನ್ನು ಬಂಧಿಸಿ ಜಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ನಮ್ಮ ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿರುದ್ಧ ಆಧಾರ ರಹಿತ ಆರೋಪ ಮಾಡಿದರೇ ನಾನು ಸುಮ್ಮನೇ ಇರುವುದಿಲ್ಲ. ಯಾವ ಬೆದರಿಕೆಗೂ ನಾನು ಬಗ್ಗುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಎಂ. ಶಿವಣ್ಣ, ಗಿರೀಶ್, ಕೆ. ಮಹೇಶ್ ಇದ್ದರು.