ಕೊರಗಜ್ಜನ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹ : ಓರ್ವ ಸಾವು- ಮತ್ತಿಬ್ಬರು ಶರಣು

By Suvarna News  |  First Published Apr 1, 2021, 1:41 PM IST

ಮಂಗಳೂರಿನ ಎಮ್ಮೆಕೆರೆಯ  ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹದ ಚೀಟಿ ಹಾಕಿದ್ದ ದುಷ್ಕರ್ಮಿಗಳು ಸಂಕಷ್ಟ ತಡೆಯಲಾರದೆ ದೈವದ ಮೊರೆ ಹೋಗಿ ಶರಣಾಗಿದ್ದಾರೆ. 


ಮಂಗಳೂರು (ಏ.01)    ಕರಾವಳಿಯ ದೈವಗಳು  ಮತ್ತೆ ತಮ್ಮ ಕಾರಣಿಕ ಶಕ್ತಿಯನ್ನು ತೋರಿಸಿವೆ.  ದೈವಸ್ಥಾನದ ಕಾಣಿಕೆ ಹುಂಡಿಗೆ ಅಪಚಾರ ಎಸಗಿದವರು ಕೋಲಾದಲ್ಲಿ ಶರಣಾಗಿದ್ದಾರೆ.

ಮಂಗಳೂರಿನ ಎಮ್ಮೆಕೆರೆಯ  ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹದ ಚೀಟಿ ಹಾಕಿ  ದುಷ್ಕರ್ಮಿಗಳು  ಅಪಚಾರ ಎಸಗಿದ್ದರು. 

Tap to resize

Latest Videos

undefined

ಈ ಕೃತ್ಯದ ಬಳಿಕ ಅಪಚಾರ ಎಸಗಿದವರು ಹಲವು ಸಂಕಷ್ಟಕ್ಕೆ ಒಳಗಾಗಿದ್ದರು. ಅದರಲ್ಲಿ ಓರ್ವ  ಆರೋಪಿ ಕೆಲ ದಿನಗಳ ಹಿಂದೆ ಹುಚ್ಚು ಹಿಡಿದು ತಲೆ ಗೋಡೆಗೆ ಗುದ್ದಿ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.  ಇದರಿಂದ ಭಯಗೊಂಡ ಇಬ್ಬರು ಆರೋಪಿಗಳು  ಬುಧವಾರ ರಾತ್ರಿ ಎಮ್ಮೆಕೆರೆಯಲ್ಲಿ ನಡೆದ ಕೊರಗಜ್ಜ ಕೋಲದಲ್ಲಿ ದೈವಕ್ಕೆ ಶರಣಾಗಿದ್ದಾರೆ.

ಕೊರಗಜ್ಜನ ನಂಬ್ರಿ ಕಷ್ಟವೆಲ್ಲ ದೂರು ಆಗುತೈತಿ; ಸ್ವಾಮಿ ಶಕ್ತಿಯಲ್ಲಿ ನಡೆದ ಪವಾಡಗಳಿವು! ..

ಪರಿಹಾರಕ್ಕಾಗಿ ಮತ್ತೆ ದೈವಸ್ಥಾನಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸುವಾಗ ಕೃತ್ಯ ಬೆಳಕಿಗೆ ಬಂದಿದೆ. ಇಲ್ಲಿ ನಡೆದ ಕೊರಗಜ್ಜ ದೈವದ ದರ್ಶನದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. 

ಪೊಲೀಸರ ವಶಕ್ಕೆ :  ಸದ್ಯ ದೇವರ ಮುಂದೆ ತಪ್ಪೊಪ್ಪಿಕೊಂಡ ಇಬ್ಬರನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದು , ವಿಚಾರಣೆ ನಡೆಸುತ್ತಿದ್ದಾರೆ. 

ಕೃತ್ಯ ಎಸಗಿದ್ದವರಲ್ಲಿ ಓರ್ವ ಈಗಾಗಲೇ ಸಾವಿಗೀಡಾಗಿದ್ದು, ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದು ಅವರಲ್ಲಿ ಅವರಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಸಿವೆ. ಈ ನಿಟ್ಟಿನಲ್ಲಿ ಇಬ್ಬರು ಬಂದು  ಶರಣಾಗಿದ್ದಾರೆ. 

ಇದಾದ ಬಳಿಕ ಇಲ್ಲಿನ ಜನತೆ  ಕೋಟೆದ ಬಬ್ಬುಸ್ವಾಮಿ, ಕೊರಗಜ್ಜ, ಗುಳಿಗ, ಪರಿವಾರ ದೈವಗಳ ಕಾರಣಿಕ ಶಕ್ತಿಗಳ ಬಗ್ಗೆ ಕೊಂಡಾಡುತ್ತಿದ್ದಾರೆ. 

click me!