DGP Ramachandra Rao ರಂಗಿನಾಟಕ್ಕೆ ನಗುನಗುತ್ತಾ ಸಹಕರಿಸಿದ ಮಹಿಳಾ ಮಣಿಗಳು ಯಾರವರು?

Published : Jan 20, 2026, 02:51 PM IST
DGP Ramachandra Raos case

ಸಾರಾಂಶ

ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆಯ ವಿಡಿಯೋವೊಂದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ತಮ್ಮ ಕಚೇರಿಯಲ್ಲಿಯೇ ಮೂವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳು ವಿಡಿಯೋದಲ್ಲಿದ್ದು, ಇದು ಹನಿಟ್ರ್ಯಾಪೋ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಚರ್ಚೆ ಶುರುವಾಗಿದೆ. ಯಾರಿವರು?

ಸದ್ಯ ರಾಜ್ಯಾದ್ಯಂತ ಸಂಚಲನ ಸೃಷ್ಟಿಸ್ತಿರೋದು ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆಯ ವಿಡಿಯೋಗಳು. ಕಳೆದ ವರ್ಷ, ಚಿನ್ನದ ಬೇಟೆಯಾಡಿ ದೇಶವನ್ನೇ ತಲ್ಲಣಗೊಳಿಸಿದ್ದ, ನಟಿ ರನ್ಯಾ ರಾವ್ ತಂದೆಯಾಗಿರೋ ರಾಮಚಂದ್ರ ರಾವ್​, ಇದೀಗ ತಮ್ಮ ಕಚೇರಿಯಲ್ಲಿಯೇ ಕಾಮದಾಟ ಶುರುವಿಟ್ಟುಕೊಂಡು​ ಸಿಕ್ಕಿಬಿದ್ದಿದ್ದಾರೆ. 47 ಸೆಕೆಂಡ್‌ಗಳ ಸ್ಫೋಟಕ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಒಟ್ಟು ಮೂವರು ಮಹಿಳೆಯರೊಂದಿಗೆ ಅಧಿಕಾರಿ ಅಸಭ್ಯವಾಗಿ ವರ್ತಿಸಿರುವುದು ಕಂಡುಬಂದಿದೆ. ಇದರಲ್ಲಿ ಒಬ್ಬಾಕೆ ಮಾಡೆಲ್​ ಎಂದೂ ಗುರುತಿಸಲಾಗಿದೆ. ಆದರೆ ಇದು ತಮ್ಮ ವಿಡಿಯೋ ಅಲ್ಲ ಎಂದಿದ್ದಾರೆ ಡಿಜಿಪಿ.

ಏನಿದರ ಅಸಲಿಯತ್ತು?

ಇದು ಹನಿಟ್ರ್ಯಾಪೋ ಅಥವಾ ಯಾರೋ ಈ ರಂಗಿನಾಟವನ್ನು ನೋಡಿ ನೋಡಿ ಸಾಕಾಗಿ ವಿಡಿಯೋ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಪೊಲೀಸ್​ ಹುದ್ದೆಯಂಥ ಸಮವಸ್ತ್ರಕ್ಕೂ ಮರ್ಯಾದೆ ಕೊಡದೇ, ತಮ್ಮ ಕರ್ತವ್ಯದ ಅವಧಿಯಲ್ಲಿಯೇ, ಅದೂ ತಮ್ಮ ಕಚೇರಿಯನ್ನೇ ಕಾಮಕ್ಕೆ ಬಳಸಿಕೊಂಡಿರುವುದರಿಂದ ಇದೀಗ ಅವರು ಅಮಾನತು ಆಗಿಲಿದ್ದಾರೆ. ಬರುವ ಮೇಲೆ ತಿಂಗಳಿನಲ್ಲಿ ನಿವೃತ್ತರಾಗಬೇಕಿದ್ದ ಅವರು, ಕೊನೆಯ ಗಳಿಗೆಯಲ್ಲಿ ಹೀಗೆ ಸಿಕ್ಕಿಬಿದ್ದಿದ್ದಾರೆ.

ಸರಸದಲ್ಲಿರುವವರು ಯಾರು?

'ಕಾಮಾತುರಾಣಾಂ ನ ಭಯಂ ನ ಲಜ್ಜಾ' (ಕಾಮಕ್ಕೆ ಬಿದ್ದವರಿಗೆ ನಾಚಿಕೆಯೂ ಇಲ್ಲ, ಭಯವೂ ಇಲ್ಲ) ಎನ್ನುವಂತೆ, ಇದೀಗ ಲಭ್ಯ ಇರುವ ವಿಡಿಯೋದಲ್ಲಿ ಮೂವರ ಜೊತೆ ಸರಸದಲ್ಲಿ ತೊಡಗಿರುವುದನ್ನು ನೋಡಬಹುದು. ಆ ಮಹಿಳೆಯರನ್ನು ಸದ್ಯ 'ಸಂತ್ರಸ್ತೆಯರು' ಎಂದು ಹೇಳಲಾಗುತ್ತಿದೆ. ಆದರೆ ಈ ವಿಡಿಯೋದಲ್ಲಿ, ಎಲ್ಲರೂ ಕೂಡ ನಗುನಗುತ್ತಾ ಡಿಜಿಪಿ ಅವರೊಂದಿಗೆ ಸಹಕರಿಸುತ್ತಿರುವುದನ್ನು ನೋಡಬಹುದು. ಆದ್ದರಿಂದ ಈ ವಿಡಿಯೋ ಮೇಲ್ನೋಟಕ್ಕೆ ನೋಡಿದರೆ, ಈ ಮಹಿಳೆಯರು ಖುಷಿಯಿಂದ ಇರುವುದು ಕಂಡುಬರುತ್ತದೆ. ಇದರಲ್ಲಿ ಡಿಜಿಪಿ ಖುರ್ಚಿಯ ಮೇಲಿನಿಂದ ಏಳಲಿಲ್ಲ. ಆದರೆ ಅವರ ಬಳಿಯೇ ಈ ಮಹಿಳೆಯರು ಹೋಗಿದ್ದನ್ನು ನೋಡಬಹುದು.

ಅದ್ಯಾವ ಅನಿವಾರ್ಯತೆ?

ಅವರಿಗೆ ಅದ್ಯಾವ ಅನಿವಾರ್ಯ ಇತ್ತೋ, ಕೆಲಸದ ಆಮಿಷದಲ್ಲಿ ಅವರನ್ನು ಬಲೆಗೆ ಬೀಳಿಸಲಾಯಿತೊ ಅಥವಾ ಅವರೇ ಇವರನ್ನು ಬಲೆಗೆ ಬೀಳಿಸಿದರೋ ಎನ್ನುವ ಚರ್ಚೆ ಬಲು ಜೋರಾಗಿ ಕೇಳಿಬರುತ್ತಿದೆ. ಅಸಹಾಯಕ ಯುವತಿಯನ್ನು ಹೀಗೆ ಕೆಲವು ಉನ್ನತ ಸ್ಥಾನದಲ್ಲಿ ಇರುವವರು ಬಳಸಿಕೊಳ್ಳುವುದು ಇದೆ. ಹಾಗಿದ್ದರೆ ಈ ಯುವತಿಯರು ಅಂಥದ್ದೊಂದು ಮೋಸದ ಜಾಲಕ್ಕೆ ಬಿದ್ದ ಸಂತ್ರಸ್ತೆಯರಾ ಅಥವಾ ಇವರು  ನಿಜಕ್ಕೂ ಯಾರು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಕೆರಳಿದೆ. ಇವರು ಯಾರು ಇರಬಹುದು ಎಂದು ಗೂಗಲ್​ನಲ್ಲಿ ಹುಡುಕಾಟವೂ ನಡೆದಿದೆ. ಸದ್ಯದ ಮಟ್ಟಿಗೆ ಇವರು ಸಂತ್ರಸ್ತೆಯರು. ಆದರೆ ನಿಜವಾಗಿಯೂ ಇವರು ಯಾರು, ನಡೆದದ್ದು ಏನು ಎನ್ನುವ ಬಗ್ಗೆ ಇನ್ನಷ್ಟೇ ತನಿಖೆಯಿಂದ ಬಯಲಾಗಬೇಕಿದೆ.

PREV
Read more Articles on
click me!

Recommended Stories

ಬಿಎಂಟಿಸಿ ಟಿಕೆಟ್ ಹಣ ಗುಳುಂ: ಸ್ವಂತ UPI ಸ್ಕ್ಯಾನರ್ ಬಳಸಿ ಹಣ ಲೂಟಿ ಮಾಡುತ್ತಿದ್ದ 3 ಕಂಡಕ್ಟರ್‌ಗಳ ಅಮಾನತು!
ಬೆಂಗಳೂರು ಆರ್‌ಟಿಒ ಬ್ರಹ್ಮಾಂಡ ಭ್ರಷ್ಟಾಚಾರ, ಕೂತಲ್ಲೇ ಗುಜರಾತ್, ಮಹಾರಾಷ್ಟ್ರ ವಾಹನಗಳಿಗೆ ಎಫ್‌ಸಿ!