ಕರಾವಳಿಯಲ್ಲಿ ಮುಂದಿನ ಒಂದು ವಾರ ಕಾಲ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜು.3ರ ವರೆಗೆ ಯೆಲ್ಲೋ ಅಲರ್ಚ್ ಹಾಗೂ ಜು.4 ಮತ್ತು 5ರಂದು ಆರೆಂಜ್ ಅಲರ್ಚ್ ಘೋಷಿಸಲಾಗಿದೆ.
ಉಡುಪಿ (ಜು.1): ಕರಾವಳಿಯಲ್ಲಿ ಮುಂದಿನ ಒಂದು ವಾರ ಕಾಲ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜು.3ರ ವರೆಗೆ ಯೆಲ್ಲೋ ಅಲರ್ಚ್ ಹಾಗೂ ಜು.4 ಮತ್ತು 5ರಂದು ಆರೆಂಜ್ ಅಲರ್ಚ್ ಘೋಷಿಸಲಾಗಿದೆ.
ಕಡಲಿನಲ್ಲಿ 3 ರಿಂದ 3.2 ಮೀ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುವ ಮತ್ತು ಗಂಟೆಗೆ 50- 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಸಮುದ್ರತೀರದ ನಿವಾಸಿಗಳು ಮತ್ತು ಮೀನುಗಾರರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
undefined
Karnataka rains update ಉಡುಪಿ ರಾತ್ರಿವೇಳೆ ಜೋರು ಮಳೆ, ಹಗಲೆಲ್ಲ ಬಿಸಿಲು!
ಗುರುವಾರ ಮತ್ತು ಶುಕ್ರವಾರ ಜಿಲ್ಲೆಯಲ್ಲಿ ಸಾಧಾರಣ ಮಲೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 38.60 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಉಡುಪಿ 23.80, ಬ್ರಹ್ಮಾವರ 26, ಕಾಪು 29, ಕುಂದಾಪುರ 46.10, ಬೈಂದೂರು 71.50, ಕಾರ್ಕಳ 27.70 ಮತ್ತು ಹೆಬ್ರಿ 26 ಮಿ.ಮೀ. ಮಳೆ ದಾಖಲಾಗಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಾಡಿ ಸರ್ಕಾರಿ ಶಾಲೆಗೆ ಹಾನಿಯಾಗಿದೆ. ಶಾಲೆಯ ಗ್ರಂಥಾಲಯದ ಮೇಲ್ಚಾವಣಿ ಕುಸಿದಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ರಾತ್ರಿ ಈ ಘಟನೆ ಸಂಭವಿಸಿದ್ದರಿಂದ ಯಾರಿಗೂ ಆಪಾಯವಾಗಿಲ್ಲ. ಗಾಳಿಮಳೆಯಿಂದ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಶಾಂತಾ ನಾಯ್ಕ ಮನೆಗೆ ಹಾನಿಯಾಗಿ 20000 ರು. ಮತ್ತು ಗಂಗಾ ಎಂಬವರ ಮನೆಗೆ 30 ಸಾವಿರ ರು. ನಷ್ಟಸಂಭವಿಸಿದೆ.