ಕಳೆದ ಸುಮಾರು 12 ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಆಗಿಲ್ಲ. ಆದರೆ, ಪ್ರತಿ ವರ್ಷ ವಿದ್ಯುತ್ ದರ ಪರಿಷ್ಕರಣೆ ಆಗುತ್ತಿದೆ. ಇದರಿಂದ ಜಲಮಂಡಳಿಯ ವಿದ್ಯುತ್ ಬಿಲ್ ಹೆಚ್ಚುತ್ತಿದೆ. ಆದರೆ, ಬಿಲ್ ಕಟ್ಟಲು, ನೌಕರರ ಸಂಬಳ ಪಾವತಿಸಲು ಆಗುತ್ತಿಲ್ಲ. ಹೀಗಾಗಿ, ದರ ಹೆಚ್ಚಿಸದೇ ಬೇರೆ ಆಯ್ಕೆ ಇಲ್ಲ. ಇದೇ ರೀತಿ ಮುಂದುವರೆದರೆ ಜಲಮಂಡಳಿ ಉಳಿಯುವುದಿಲ್ಲ ಎಂದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್
ಬೆಂಗಳೂರು(ಆ.23): ಜನರು, ವಿರೋಧ ಪಕ್ಷದವರು, ಮೀಡಿಯಾದವರು ಸೇರಿದಂತೆ ಯಾರೇ ಬೈದ್ರು, ವಿರೋಧಿಸಿದ್ರು ನೀರಿನ ದರ ಏರಿಸುತ್ತೇವೆ. ಚರ್ಚೆ, ಧರಣಿ ಮಾಡಿದ್ರೂ ಬಿಡಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ವಿಧಾನಸೌಧ ಆವರಣದಲ್ಲಿ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಸುಮಾರು 12 ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಆಗಿಲ್ಲ. ಆದರೆ, ಪ್ರತಿ ವರ್ಷ ವಿದ್ಯುತ್ ದರ ಪರಿಷ್ಕರಣೆ ಆಗುತ್ತಿದೆ. ಇದರಿಂದ ಜಲಮಂಡಳಿಯ ವಿದ್ಯುತ್ ಬಿಲ್ ಹೆಚ್ಚುತ್ತಿದೆ. ಆದರೆ, ಬಿಲ್ ಕಟ್ಟಲು, ನೌಕರರ ಸಂಬಳ ಪಾವತಿಸಲು ಆಗುತ್ತಿಲ್ಲ. ಹೀಗಾಗಿ, ದರ ಹೆಚ್ಚಿಸದೇ ಬೇರೆ ಆಯ್ಕೆ ಇಲ್ಲ. ಇದೇ ರೀತಿ ಮುಂದುವರೆದರೆ ಜಲಮಂಡಳಿ ಉಳಿಯುವುದಿಲ್ಲ ಎಂದರು. ಜನಸಂಖ್ಯೆ ಹೆಚ್ಚುತ್ತಿರುವ ರಾಜಧಾನಿಯಲ್ಲಿ ಈಗಲೇ 1.40 ಕೋಟಿ ಜನರಿದ್ದಾರೆ. ಎಲ್ಲರಿಗೂ ನೀರು ಒದಗಿಸಲೇಬೇಕು. ಭವಿಷ್ಯದ ದೃಷ್ಟಿಯಿಂದ ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಕೊಡಲು ಕಷ್ಟವಾಗುತ್ತದೆ ಎಂದರು.
undefined
ಜಲಮಂಡಳಿ ಟೆಂಡರ್ ರದ್ದು ಅಧಿಕಾರ ಸಿಎಂಗೂ ಇಲ್ಲ: ಸಚಿವ ಬೈರತಿ ಸುರೇಶ್
ಇನ್ನೂ ಜನರಿಗೆ ಎಷ್ಟು ಮಾಡಿದರೂ, ಏನು ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಅವರಿಗೆ ನೀರು ಬಂದರೆ ಸರಿ. ಇಲ್ಲದಿದ್ದರೆ ಬೈತಾರೆ, ಉಗಿತಾರೆ. ಅವರಿಗೆ ಜಲಮಂಡಳಿಯವರ ಕಷ್ಟದ ಅರಿವಿಲ್ಲ. ಬಿಲ್ ಕಟ್ಟುವವರು ಕಟ್ಟುತ್ತಾರೆ, ಕಟ್ಟದವರು ಇದ್ದಾರೆ. ಹೀಗಾಗಿ, ಏನೇ ಆದರೂ, ದರ ಹೆಚ್ಚಳಕ್ಕೆ ಬದ್ಧನಾಗಿದ್ದೇನೆ. ಚರ್ಚೆ, ಧರಣಿ ಮಾಡಿದರೂ ಬಿಡಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.