ಮಂಡ್ಯ: ನಿಖಿಲ್ ಸ್ಪರ್ಧೆ ಸುತರಾಂ ಇಷ್ಟವಿರಲಿಲ್ಲ ಎಂದ ಮಾಜಿ ಶಾಸಕ

By Kannadaprabha NewsFirst Published Sep 23, 2019, 3:53 PM IST
Highlights

ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರ ಪುತ್ರ ನಿಖೀಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸೋದು ಸುತರಾಂ ಇಷ್ಟವಿರಿಲ್ಲ ಎಂದು ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ. ಹಾಗೆಯೇ ನಾಯಕರು ನೀಡಿದ ಸಲಹೆಗಳನ್ನು ಪಕ್ಷದ ವರಿಷ್ಠರು ನಿರ್ಲಕ್ಷ್ಯ ಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ.

ಮಂಡ್ಯ(ಸೆ.23): ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ ನಂಗೆ ಸುತರಾಂ ಇಷ್ಟರಲಿಲ್ಲ. ಹೀಗಾಗಿ ನಾವೇ ಸುಮಲತಾ ಪಕ್ಷೇತರ ಅಭ್ಯರ್ಥಿ ಮಾಡಿ ಗೆಲ್ಲಿಸಿದೆವು ಎಂದು ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ನಡೆದ ಕೈ ಕಾರ್ಯಕರ್ತರ ಸಭೆಯ ನಂತರ ತಮ್ಮನ್ನು ಭೇಟಿಯಾದ ಸುದ್ದಿ ಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಥಳೀಯರೇ ಆಗಿರುವ ಜೆಡಿಎಸ್‌ನ ಹಾಲಿ ಸಂಸದ ಶಿವರಾಮೇ ಗೌಡರನ್ನು ಅಭ್ಯರ್ಥಿ ಮಾಡಿ. ಸಾಧ್ಯವಿಲ್ಲದಾದರೆ ಮಾಜಿ ಪ್ರಧಾನಿ ದೇವೇಗೌಡರನ್ನೇ ಅಭ್ಯರ್ಥಿ ಮಾಡಿ ಅಂದು ಸಾಕಷ್ಟು ಸಲಹೆಗಳನ್ನು ನೀಡಿದರೂ ದಳಪತಿಗಳು ಕೇಳಲಿಲ್ಲ. ನಾವು 8 ಜೆಡಿಎಸ್ ಶಾಸಕರು, ಮೂರು ಮಂತ್ರಿಗಳಿದ್ದೀವಿ ನಮ್ಮ ಗೆಲವು ಸುಲಭ ಎಂದು ಅತಿಯಾಗಿ ಆಡಿದರು. ಕೊನೆಗೆ ಸೋಲು ಅನುಭವಿಸಿದರು ಎಂದು ಹೇಳಿದ್ದಾರೆ.

ಅಧಿಕಾರಕ್ಕಾಗಿ JDS ಗೇಮ್ ಪ್ಲಾನ್ ಬದಲು

ಸುಮಲತಾ ಅವರನ್ನು ಕರೆತಂದಿದ್ದೇ ನಾವು, ಕಾಂಗ್ರೆಸ್ ಮುಖಂಡರು. ಅಭ್ಯರ್ಥಿ ಮಾಡಿದೆವು. ಸುಮಲತಾ ಗೆಲುವಿನ ಹಿಂದೆ ಕಾಂಗ್ರೆಸ್ ಮುಖಂಡರು ಇದ್ದರು. ಜಿಲ್ಲೆಯ ಏಳು ಕ್ಷೇತ್ರದಲ್ಲಿ ಜನ ಜೆಡಿಎಸ್ ಗೆಲ್ಲಿಸಿದರೂ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!