ಜಾತಿಗಣತಿಗೆ ನಮ್ಮ ವಿರೋಧವಿಲ್ಲ, ಕಾಂತರಾಜು ವರದಿಯ ಮೇಲೆ ಅನುಮಾನಗಳಿವೆ: ಕೂಡಲ ಶ್ರೀ

By Girish GoudarFirst Published Oct 5, 2024, 7:01 PM IST
Highlights

ಅ. 15 ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ವಕೀಲರ ಸಭೆಗೆ ತೀರ್ಮಾನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಭೆಗೆ ತೀರ್ಮಾನ ಮಾಡಿದ್ದು ಆಶಾದಾಯಕವಾಗಿದೆ. ಸಭೆ ಯಶಸ್ವಿ ಆಗಬೇಕು. ಆ ನಿಟ್ಟಿನಲ್ಲಿ ಸಂಬಂಧ ಪಟ್ಟ ಕಾನೂನು ಸಚಿವ ಎಚ್.ಕೆ. ಪಾಟೀಲರು ಹಿಂದುಳಿದ ವರ್ಗಗಳ ಆಯೋಗ ಪೂರಕ ದಾಖಲೆ ಕೊಡಬೇಕು. ಸಭೆಯಲ್ಲಿ ಸಿಎಂ ಪಂಚಮಸಾಲಿ ಸಮಾಜದ ನ್ಯಾಯಯುತ ಹೋರಾಟಕ್ಕೆ ಸ್ಪಷ್ಟವಾದ ಸಂದೇಶ ಕೊಡಬೇಕು: ಕೂಡಲಸಂಗಮದ ಪಂಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ 

ಗದಗ(ಅ.05):  ಜಾತಿಗಣತಿ ವಿಚಾರಕ್ಕೆ ನಮ್ಮ ವಿರೋಧವಿಲ್ಲ. ಕಾಂತರಾಜು ವರದಿಯ ಮೇಲೆ ಹಲವಾರು ಅನುಮಾನಗಳಿವೆ. ನಾಡಿನ ಮಠಾಧೀಶರು, ಲಿಂಗಾಯತ ಮಹಾಸಭಾ, ಅನೇಕ ಲಿಂಗಾಯತ ಸಂಘಟನೆ ವಿರೋಧ ಮಾಡಿವೆ. ಕಾಂತರಾಜು ವರದಿ ಒಪ್ಪಲ್ಲ ಅಂತ ವೀರಶೈವ ಮಹಾಸಭೆಯಲ್ಲಿ ನಿರ್ಣಯ ಮಾಡಿದ್ದಾರೆ. ಕೆಲವು ಸಮುದಾಯದಲ್ಲಿ ಜಾತಿ ಗಣತಿ ಬಗ್ಗೆ ಸಂಶಯಗಳಿವೆ. ಸಂಶಯಗಳ ನಿವಾರಿಸುವ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಇಡಬೇಕು. ಕಾಂತರಾಜು ಜಾತಿಗಣತಿ ವರದಿ ಅವೈಜ್ಞಾನಿಕ ಅಂತ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ವೈಜ್ಞಾನಿಕ, ಕಾನೂನಾತ್ಮಕ, ಸಂವಿಧಾನಾತ್ಮಕ, ದತ್ತಾಂಶ ಮೂಲಕ ಮತ್ತೊಮ್ಮೆ ಜಾತಿಗಣತಿ ಮಾಡಬೇಕೆಂದು ಕೂಡಲಸಂಗಮದ ಪಂಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ಅಕ್ಟೋಬರ್ 15 ರ ಸಭೆ ಮೊಟಕುಗೊಳಿಸಿದ್ರೆ ಹೋರಾಟ ಮಾಡಲಾಗುವುದು. ನಾವು ವಕೀಲರು ಅವತ್ತೇ ವಿಧಾನಸಭೆ ಮುಂಭಾಗದಲ್ಲಿ ಹೋರಾಟ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.

Latest Videos

ಜಾತಿ ಗಣತಿ ವರದಿ ಶೀಘ್ರ ಸಂಪುಟಕ್ಕೆ: ಸಿಎಂ ಸಿದ್ದರಾಮಯ್ಯ 

ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಶಾಸಕರೊಂದಿಗೆ ತೆರಳಿ ಮನಿವಿ ಸಲ್ಲಿಸಿದೇವೆ. ಸಿದ್ದರಾಮಯ್ಯ ಸಭೆಯ ನಿಗಧಿ ಮಾಡಿರಲಿಲ್ಲ. 22 ರಂದು ಕರ್ನಾಟಕ ರಾಜ್ಯ ಪಂಚಮಸಾಲಿ ವಕೀಲರ ಬೃಹತ್ ಸಮಾವೇಶದ ಮಾಡಿದ್ವಿ. ಪಂಚಮಸಾಲಿ ವಕೀಲರ ಸಮಾವೇಶಕ್ಕೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. 

ಅ. 15 ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ವಕೀಲರ ಸಭೆಗೆ ತೀರ್ಮಾನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಭೆಗೆ ತೀರ್ಮಾನ ಮಾಡಿದ್ದು ಆಶಾದಾಯಕವಾಗಿದೆ. ಸಭೆ ಯಶಸ್ವಿ ಆಗಬೇಕು. ಆ ನಿಟ್ಟಿನಲ್ಲಿ ಸಂಬಂಧ ಪಟ್ಟ ಕಾನೂನು ಸಚಿವ ಎಚ್.ಕೆ. ಪಾಟೀಲರು ಹಿಂದುಳಿದ ವರ್ಗಗಳ ಆಯೋಗ ಪೂರಕ ದಾಖಲೆ ಕೊಡಬೇಕು. ಸಭೆಯಲ್ಲಿ ಸಿಎಂ ಪಂಚಮಸಾಲಿ ಸಮಾಜದ ನ್ಯಾಯಯುತ ಹೋರಾಟಕ್ಕೆ ಸ್ಪಷ್ಟವಾದ ಸಂದೇಶ ಕೊಡಬೇಕು. ಸಿಎಂ ನಿಗಧಿ ಮಾಡಿರುವ ದಿನ ಮುಂದೂಡಬಾರದು ಎಂದು ತಿಳಿಸಿದ್ದಾರೆ. 

click me!