ಗೊದ್ರೇಜ್ ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳು ಒಳಗಾಗಿ ಮೊದಲು ಕೊಟ್ಟಿರುವ ಏರ್ ಕಂಡಿಷನ್ ಮಶೀನ್ ವಾಪಸ್ಸು ಪಡೆದು ಅದರ ಕಿಮ್ಮತ್ತು 38,200 ಮತ್ತು ಅದರ ಮೇಲೆ ಶೇ.10%ರಷ್ಟು ವಾರ್ಷಿಕ ಬಡ್ಡಿಯನ್ನು ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ತೀರ್ಪಿನಲ್ಲಿ ತಿಳಿಸಿದ ಗ್ರಾಹಕರ ಆಯೋಗ
ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಅ.05): ಹುಬ್ಬಳ್ಳಿಯ ತೋಳನಕೆರಿಯ ಅಮಿತ್ ಅಕ್ಕಿ ಎಂಬುವವರು ಹುಬ್ಬಳ್ಳಿಯ ಗಿರಿಯಾಸ್ ಶೋರೂಂನಲ್ಲಿ ರೂ.33,200 ಕೊಟ್ಟು ಗೊದ್ರೇಜ್ ಏರ್ ಕಂಡಿಷನ್ ಯುನಿಟ್‍ನ್ನು ಖರೀದಿಸಿದ್ದರು. ಅದರ ಅಳವಡಿಕೆಗೆ ಹೆಚ್ಚಿನ ಮೊತ್ತ ರೂ.5,000 ಸೇರಿ ದೂರುದಾರ ಒಟ್ಟು 38,200 ಎದುರುದಾರರಿಗೆ ಪಾವತಿಸಿದ್ದರು. ಎದುರುದಾರರು ಗೊದ್ರೇಜ್‍ರವರು ಸದರಿ ಏರ್ ಕಂಡಿಷನ್‍ನ ಉತ್ಪಾದಕರಾಗಿರುತ್ತಾರೆ. ಖರೀದಿಸಿದ 20 ದಿವಸದೊಳಗಾಗಿ ಅದರ ಕಾರ್ಯವು ಸ್ತಗಿತಗೊಂಡಿತ್ತು. ಇದರ ಬಗ್ಗೆ ದೂರುದಾರರು ಹುಬ್ಬಳ್ಳಿಯ ಗಿರಿಯಾಸ್ ಮತ್ತು ಉತ್ಪಾದಕರಿಗೆ ತಿಳಿಸಿದರು. ಅವರು ಏರ್ ಕಂಡಿಷ್‍ನ್ನಿನ ದೋಷವನ್ನು ಸರಿಪಡಿಸಿರಲಿಲ್ಲ ಈ ರೀತಿಯ ತೊಂದರೆ ಉತ್ಪಾದನಾದೋಷವಾಗಿದ್ದರೂ ಅದನ್ನು ಎದುರುದಾರರು ಸರಿಪಡಿಸದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ.
ಮನನೊಂದ ದೂರುದಾರ ಗ್ರಾಹಕ ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ 21.06.2024 ರಂದು ಅವರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ. ವಿಶಾಲಾಕ್ಷಿ. ಬೋಳಶೆಟ್ಟಿ ಮಹಿಳಾ ಸದಸ್ಯರು ಮತ್ತು ಪ್ರಭು. ಹಿರೇಮಠ ಸದಸ್ಯರು ದೂರುದಾರರು ಹಾಜರುಪಡಿಸಿದ ಏರ್ ಕಂಡಿಷನ್ ಖರೀದಿಸಿರುವುದು ರಶೀದಿಯ ಮುಖಾಂತರ ಕಂಡುಬರುತ್ತದೆ.
ಧಾರವಾಡ: ಗಾಂಧಿ ಜಯಂತಿಯಂದು ರಾಷ್ಟ್ರಧ್ವಜ ಕೆಳಗೆ ಹಾಕಿ ಟಿಪ್ಪು ಸುಲ್ತಾನ್ ಫ್ಲ್ಯಾಗ್ ಹಾರಿಸಿದ ಕಿಡಿಗೇಡಿಗಳು
ಆಯೋಗ ಕೊಟ್ಟಂತಹ ನೋಟಿಸಿಗೂ ಸಹ ಎದುರುದಾರರು ಹಾಜರಾಗಿರುವುದಿಲ್ಲ ಖರೀದಿಸಿದ 20 ದಿವಸಗಳಲ್ಲಿಯೇ ಏರ್ ಕಂಡಿಷನ್ನಲ್ಲಿ ದೋಷ ಕಂಡುಬಂದಿರುವುದರಿಂದ ಅದು ಉತ್ಪಾದನಾ ದೋಷವಾಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ ಇದಕ್ಕೆ ಉತ್ಪಾದಕರಾದ ಗೊದ್ರೇಜ್ ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳು ಒಳಗಾಗಿ ಮೊದಲು ಕೊಟ್ಟಿರುವ ಏರ್ ಕಂಡಿಷನ್ ಮಶೀನ್ ವಾಪಸ್ಸು ಪಡೆದು ಅದರ ಕಿಮ್ಮತ್ತು 38,200 ಮತ್ತು ಅದರ ಮೇಲೆ ಶೇ.10%ರಷ್ಟು ವಾರ್ಷಿಕ ಬಡ್ಡಿಯನ್ನು ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ ರೂ.25,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚುವೆಚ್ಚ ಅಂತಾ ರೂ.10,000 ನಿಡುವಂತೆ ಎದುರುದಾರರಾದ ಗೊದ್ರೇಜ್ ಕಂಪನಿಗೆ ಆಯೋಗ ನಿರ್ದೇಶಿಸಿದೆ.