ಚುನಾವಣೆಗೆ ಸ್ಪರ್ಧಿಸಿದಾಗ್ಲೇ ಪವಿತ್ರರಾದೆವು: ವಿಶ್ವನಾಥ್

By Suvarna NewsFirst Published Feb 2, 2020, 2:42 PM IST
Highlights

ಚುನಾವಣೆಗೆ ನಾಮಪತ್ರ ಸಲ್ಲಿಸಿದಾಗಲೇ ನಾವು ಪವಿತ್ರರಾದೆವು. ಸಚಿವ ಸ್ಥಾನ ನೀಡಲು ಕಾನೂನು ಅಡ್ಡಿ ಅನ್ನೋದನ್ನ ಸೋತವರು ಒಪ್ಪಲ್ಲ, ಕಾನೂನೂ ಒಪ್ಪಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

ಮೈಸೂರು(ಫೆ.02): ಚುನಾವಣೆಗೆ ನಾಮಪತ್ರ ಸಲ್ಲಿಸಿದಾಗಲೇ ನಾವು ಪವಿತ್ರರಾದೆವು. ಸಚಿವ ಸ್ಥಾನ ನೀಡಲು ಕಾನೂನು ಅಡ್ಡಿ ಅನ್ನೋದನ್ನ ಸೋತವರು ಒಪ್ಪಲ್ಲ, ಕಾನೂನೂ ಒಪ್ಪಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಸೋತವರಿಗೆ ಸಚಿವ ಸ್ಥಾನ ನೀಡಲು ಸುಪ್ರೀಂ ತೀರ್ಪು ಅಡ್ಡಿ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

'ಮೋದಿ ದೇಶದ ಪ್ರಧಾನಿ, RSS ಪ್ರಧಾನಿಯಲ್ಲ, ಇದು ನೆನಪಿರಲಿ'..!

ಸುಪ್ರಿಂ ಚುನಾವಣೆಗೆ ನಿಂತು ಪವಿತ್ರರಾಗಿ ಎಂದಿತ್ತು. ನಾವು ಚುನಾವಣೆಗೆ ಅರ್ಜಿ ಹಾಕುತ್ತಿದ್ದಂತೆ ಪವಿತ್ರರಾದೆವು. ತೀರ್ಪಿನಲ್ಲಿ ಸೋಲು ಗೆಲುವಿನ ಉಲ್ಲೇಖವಿಲ್ಲ. ಅದನ್ನು ಯಡಿಯೂರಪ್ಪ ಅವರು ಕಾನೂನು ತಜ್ಞರನ್ನು ಕರೆಸಿ ಕೇಳಿಕೊಳ್ಳಲಿ ಎಂದು ಹೇಳಿದ್ದಾರೆ.

ನಮಗೆ ಸಚಿವ ಸ್ಥಾನ ಕೊಡೊದು ಬಿಡೋದು ಬೇರೆ. ಆದರೆ ಕಾನೂನು ಅಡ್ಡಿ ಅನ್ನೋದನ್ನ ಸೋತವರು ಒಪ್ಪಲ್ಲ, ಕಾನೂನೂ ಒಪ್ಪಲ್ಲ. ಸಾರ್ವಜನಿಕರ ಮನಸ್ಸಿನಲ್ಲಿ ಇದು ಬರಬಾರದು ಎಂದಿದ್ದಾರೆ.

"

click me!