ಬೆಂಗಳೂರಿನ ಈ ಪ್ರದೇಶಗಳಲ್ಲಿ 2 ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

By Web DeskFirst Published Sep 27, 2018, 10:20 PM IST
Highlights

ಕಾವೇರಿ ನೀರು ಸರಬರಾಜು ಹಂತ 1, 2, ಹಾಗೂ 3 ರಲ್ಲಿನ  ಕೊಳವೆ ಕೇಂದ್ರಗಳಲ್ಲಿ ಉಲ್ಬಣ ರಕ್ಷಣ ವ್ಯವಸ್ಥೆಯ ನಿರ್ವಹಣೆಯ ಕಾರಣದಿಂದ  ಸೆ.28 ಹಾಗೂ ಸೆ.29 ರಂದು ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು[ಸೆ.27]: ಕಾವೇರಿ ನೀರು ಸರಬರಾಜು ಹಂತ 1, 2 ಹಾಗೂ 3ರಲ್ಲಿನ ನಿರ್ವಹಣಾ ಕಾರ್ಯದ ಕಾರಣದಿಂದ  ಸೆ.28 ಹಾಗೂ ಸೆ.29 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಾವೇರಿ ನೀರು ಸರಬರಾಜು ಹಂತ 1, 2, ಹಾಗೂ 3 ರಲ್ಲಿನ  ಕೊಳವೆ ಕೇಂದ್ರಗಳಲ್ಲಿ ಉಲ್ಬಣ ರಕ್ಷಣ ವ್ಯವಸ್ಥೆಯ ನಿರ್ವಹಣೆಯ ಕಾರಣದಿಂದ  ಸೆ.28 ಹಾಗೂ ಸೆ.29 ರಂದು ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿಯ ಪ್ರಕಟಣೆ ತಿಳಿಸಿದೆ.

ವ್ಯತ್ಯಯವಾಗುವ ಪ್ರದೇಶಗಳು
ಯಶವಂತಪುರ, ಮಲ್ಲೇಶ್ವರಂ, ಮತ್ತೀಕೆರೆ, ಗೋಕುಲ್ ಎಕ್ಸ್'ಟೆನ್ಶನ್, ಜಯಮಹಲ್, ವಸಂತ್ ನಗರ, ಮುತ್ಯಾಲ ನಗರ, ಆರ್ ಟಿ. ನಗರ, ಸಂಜಯ್ ನಗರ, ಸದಾಶಿವ ನಗರ, ಹೆಬ್ಬಾಳ, ಭಾರತಿ ನಗರ, ಸುಧಾಮ್ ನಗರ, ಪ್ಯಾಲೇಸ್ ಗುಟ್ಟ ಹಳ್ಳಿ, ಮಚಲಿ ಬೆಟ್ಟ, ಫ್ರೇಜರ್ ಟೌನ್, ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರ, ಪಿಳ್ಳಣ್ಣ ಗಾರ್ಡನ್, ಬನ್ನಪ್ಪ ಪಾರ್ಕ್, ಶಿವಾಜಿ ನಗರ, ಜೀವನ್ ಭೀಮ್ ನಗರ್, ಚಿಕ್ಕ ಲಾಲ್ ಬಾಗ್, ಗವಿಪುರಂ, ಬ್ಯಾಟರಾಯನಪುರ, ಮೆಜೆಸ್ಟಿಕ್, ಕಸ್ತೂರ್ ಬಾ ರಸ್ತೆ, ಮಡಿವಾಳ, ಯಲಚೇನಹಳ್ಳಿ, ಇಸ್ರೊ ಲೇಔಟ್, ಪೂರ್ಣಿಪ್ರಜ್ಞಾ ಲೇಔಟ್, ನೀಲಸಂದ್ರ, ಕೆ ಆರ್ ಮಾರುಕಟ್ಟೆ, ಸಂಪಂಗಿರಾಮನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ಬನಶಂಕರಿ 2 ಮತ್ತು 3ನೇ ಹಂತ, ಜಯನಗರ,ಜೆಪಿ ನಗರ,  ಬನಗಿರಿನಗರ, ಬಸವನಗುಡಿ, ಓಕಳಿಪುರಂ, ಚಾಮರಾಜ ಪೇಟೆ, ಪದ್ಮನಾಭ ನಗರ,ಜಾನ್ ಸನ್ ಮಾರ್ಕೆಟ್,  ಹೊಸಕೆರೆ ಹಳ್ಳಿ, ಬೈರಸಂದ್ರ,ದೊಮ್ಮಲೂರು, ಬಿಟಿಎಂ ಲೇ ಔಟ್, ಸಿ ಎಲ್ ಆರ್, ಬಾಪೂಜಿನಗರ, ಮೈಸೂರು ರಸ್ತೆ, ಶ್ರೀರಾಮ್ ಪುರ, ಇಂದಿರಾನಗರ 1ನೇ ಹಂತ, ಶ್ರೀನಗರ, ಹಲಸೂರು, ಶಾಂತಿನಗರ, ಕೋರಮಂಗಲ, ವಿಜಯನಗರ, ಚೋಳೂರುಪಾಳ್ಯ, ಮುನೇಶ್ವರನಗರ, ವಿವಿ ಪುರಂ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
 

 

click me!