
ಬೆಂಗಳೂರು[ಸೆ.26] ಬಾಲಿವುಡ್ ನಟಿ ಮತ್ತು ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಖಾಸಗಿ ಸಂಸ್ಥೆಯೊಂದು ಆಯೋಜಿಸುತ್ತಿರುವ ಫ್ಯೂಷನ್ ನೈಟ್ ಕಾರ್ಯಕ್ರಮಕ್ಕಾಗಿ ಸನ್ನಿಲಿಯೋನ್ ಬೆಂಗಳೂರಿಗೆ ಆಗಮಿಸುತ್ತಿದ್ದು. ಇದೇ ನವೆಂಬರ್ 3 ರಂದು ಸನ್ನಿ ಲಿಯೋನ್ ಕಾರ್ಯಕ್ರಮ ನೀಡಲಿದ್ದಾರೆ.
ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಅವರ ತಂಡ ಕೂಡ ಪಾಲ್ಗೊಳ್ಳುತ್ತಿದ್ದು, ಕಾರ್ಯಕ್ರಮಕ್ಕಾಗಿ ಈಗಾಗಲೇ ಭರದ ಸಿದ್ಧತೆ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ಸನ್ನಿ ಒಟ್ಟು 3 ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ.
ಸನ್ನಿ ಲಿಯೋನ್ ಆಗಮನದ ಬಗ್ಗೆ ಕನ್ನಡ ಪರ ಸಂಘಟನೆಗಳಿಂದ ಪರ ವಿರೋಧದ ಮಾತುಗಳು ಎದುರಾರಿದೆ. ಕನ್ನಡಕ್ಕೆ ಯಾವ ರೀತಿಯಿಂದಲೂ ಅಪಚಾರ ಆಗಬಾರದು ಎಂದು ಸಂಘಟನೆಗಳು ಹೇಳಿವೆ. ಹೊಸ ವರ್ಷಾಚರಣೆಗೆ ಸನ್ನಿ ಬೆಂಗಳೂರಿನಲ್ಲಿ ಹೆಜ್ಜೆ ಹಾಕಬೇಕಿತ್ತು. ಆದರೆ ಭದ್ರತೆ ದೃಷ್ಟಿಯಿಂದ ಅವಕಾಶ ನೀಡಿರಲಿಲ್ಲ.