₹ 70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ : ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!

Kannadaprabha News   | Kannada Prabha
Published : Jan 30, 2026, 01:34 PM IST
siddaganga mutt

ಸಾರಾಂಶ

ಬಾಕಿ ಇದ್ದ 70 ಲಕ್ಷ ರು. ವಿದ್ಯುತ್ ಬಿಲ್ ಅನ್ನು ಪಾವತಿಸುವಾದಾಗಿ ಭರವಸೆ ನೀಡಿದ್ದ ಸರ್ಕಾರ ಒಂದು ವರ್ಷವಾದರೂ ಕಟ್ಟದ ಹಿನ್ನೆಲೆಯಲ್ಲಿ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸುವ ಪ್ರಕ್ರಿಯೆ ಸಂಪೂರ್ಣ ಬಂದ್ ಆಗಿದೆ.

ತುಮಕೂರು : ಬಾಕಿ ಇದ್ದ 70 ಲಕ್ಷ ರು. ವಿದ್ಯುತ್ ಬಿಲ್ ಅನ್ನು ಪಾವತಿಸುವಾದಾಗಿ ಭರವಸೆ ನೀಡಿದ್ದ ಸರ್ಕಾರ ಒಂದು ವರ್ಷವಾದರೂ ಕಟ್ಟದ ಹಿನ್ನೆಲೆಯಲ್ಲಿ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸುವ ಪ್ರಕ್ರಿಯೆ ಸಂಪೂರ್ಣ ಬಂದ್ ಆಗಿದ್ದು, ಈ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಕ್ಕೆ ಮತ್ತೆ ನೀರಿನ ಹಾಹಾಕಾರ ತಲೆದೋರುವಂತಾಗಿದೆ.

ಕೆಐಎಡಿಬಿ ವಿದ್ಯುತ್ ಬಿಲ್‌ ಪಾವತಿಸದ ಹಿನ್ನೆಲೆ

ಕೆಐಎಡಿಬಿ ವಿದ್ಯುತ್ ಬಿಲ್‌ ಪಾವತಿಸದ ಹಿನ್ನೆಲೆಯಲ್ಲಿ ಬೆಸ್ಕಾಂನವರು ವಿದ್ಯುತ್ ಸಂಪೂರ್ಣ ಕಡಿತಗೊಳಿಸಿದ ಪರಿಣಾಮ ಹೊನ್ನೇನಹಳ್ಳಿ ಪಂಪ್ ಹೌಸ್‌ನಲ್ಲಿ ನೀರು ಪೂರೈಕೆ ಬಂದ್ ಆಗಿದೆ. ಹೊನ್ನೆನಹಳ್ಳಿಯಿಂದ ದೇವರಾಯಪಟ್ಟಣ ಕೆರೆಗೆ ಬರುತ್ತಿದ್ದ ನೀರನ್ನು ಸಿದ್ದಗಂಗಾ ಮಠಕ್ಕೆ ಪಂಪ್ ಮಾಡಲಾಗುತ್ತದೆ. ಕಳೆದ 6 ತಿಂಗಳಿಂದ ಹೊನ್ನೇನಳ್ಳಿಯಿಂದ ನೀರು ಬಾರದ ಕಾರಣ ದೇವರಾಯಪಟ್ಟಣ ಕೆರೆ ಬರಿದಾಗಿದೆ. ಹೀಗಾಗಿ ಮುಂಬರುವ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಮಠಕ್ಕೆ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ. ಅಲ್ಲದೇ ಫೆ.6 ರಿಂದ 20 ರವರೆಗೂ ಮಠದಲ್ಲಿ ನಡೆಯುವ ಜಾತ್ರೆಗೂ ನೀರಿನ ಅಭಾವ ತಲೆದೋರಲಿದೆ ಎನ್ನಲಾಗಿದೆ.

70 ಲಕ್ಷ ವಿದ್ಯುತ್ ಬಿಲ್ ಅನ್ನು ಕೆಐಎಡಿಬಿ ಅಧಿಕಾರಿಗಳು ಮಠಕ್ಕೆ ಕೊಟ್ಟು ಎಡವಟ್ಟು

ಕಳೆದ ವರ್ಷ ನೀರು ಪಂಪ್ ಮಾಡಿದ 70 ಲಕ್ಷ ವಿದ್ಯುತ್ ಬಿಲ್ ಅನ್ನು ಕೆಐಎಡಿಬಿ ಅಧಿಕಾರಿಗಳು ಮಠಕ್ಕೆ ಕೊಟ್ಟು ಎಡವಟ್ಟು ಮಾಡಿದ್ದರು. ಆ ವೇಳೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು 70 ಲಕ್ಷ ಬಿಲ್ ಅನ್ನು ನಾವೇ ಕಟ್ಟಿ ಮಠಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.

PREV
Read more Articles on
click me!

Recommended Stories

ಕಾಸರಗೋಡು: ಕುಂಬಳೆ ಟೋಲ್ ವಿವಾದ ಭದ್ರತೆಯಲ್ಲಿ ಹಣ ಸಂಗ್ರಹ, ಪ್ರತಿಭಟಿಸಿದ ಚಾಲಕನನ್ನು ಹೊತ್ತೊಯ್ದ ಪೊಲೀಸ್!
ಬಿಗ್‌ಬಾಸ್‌ ಮಾಳು 'ನಾ ಡ್ರೈವರಾ..' ಹಾಡಿಗೆ ಸೊಂಟ ಕುಣಿಸಿದ RCB ಟಗರುಪುಟ್ಟಿ ಶ್ರೇಯಾಂಕಾ, ಬಿದ್ದುಬಿದ್ದು ನಕ್ಕ ಸ್ಮೃತಿ ಮಂಧನಾ!