ಸಚಿವರಿಗಾಗಿ ನೀರು ಹರಿಯುವುದು ಒಂದು ದಿನ ತಡ

Kannadaprabha News   | Asianet News
Published : Apr 22, 2020, 10:19 AM IST
ಸಚಿವರಿಗಾಗಿ ನೀರು ಹರಿಯುವುದು ಒಂದು ದಿನ ತಡ

ಸಾರಾಂಶ

ಚಳ್ಳಕೆರೆ ತಾಲೂಕಿನ ವೇದಾವತಿ ನದಿ ಪಾತ್ರದ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿಗೆ ನೀರು ಹರಿಸುವ ಕಾರ್ಯಕ್ರಮ ಒಂದು ದಿನ ಮುಂದಕ್ಕೆ ಹೋಗಿದೆ.

ಚಿತ್ರದುರ್ಗ(ಏ.22): ಚಳ್ಳಕೆರೆ ತಾಲೂಕಿನ ವೇದಾವತಿ ನದಿ ಪಾತ್ರದ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿಗೆ ನೀರು ಹರಿಸುವ ಕಾರ್ಯಕ್ರಮ ಒಂದು ದಿನ ಮುಂದಕ್ಕೆ ಹೋಗಿದೆ.

ಈ ಮೊದಲು ಏಪ್ರಿಲ್‌ 22 ರಂದು ಕಾರ್ಯಕ್ರಮ ನಿಗದಿಯಾಗಿತ್ತು. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಖುದ್ದು ಆಗಮಿಸಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡುವುದರಿಂದ ದಿನಾಂಕ ಒಂದು ದಿನ ಮುಂದಕ್ಕೆ ಹೋಗಿದೆ. ಏ. 22 ರ ಬದಲಿಗೆ ಏ. 23 ರಿಂದ ನೀರು ಹರಿಸಲಾಗುವುದು.

ಸರ್ಕಾರಿ ಆ್ಯಂಬುಲೆನ್ಸ್‌ನಲ್ಲಿ ಅಕ್ರಮ ಮದ್ಯ ಸಾಗಣೆ

ವಿವಿ ಸಾಗರ ಜಲಾಶಯದಿಂದ 0.25 ಟಿಎಂಸಿ ನೀರು ಹಾಯಿಸುವುದರಿಂದ ವೇದಾವತಿ ನದಿ ಪಾತ್ರದ ಹಳ್ಳಿಗಳ ಜನರು ಎಚ್ಚರ ವಹಿಸುವಂತೆ ಜಲಸಂಪನ್ಮೂಲ ಅಧಿಕಾರಿಗಳು ಮರು ಮನವಿ ಮಾಡಿದ್ದಾರೆ.

ಹಿರಿಯೂರು ವ್ಯಾಪ್ತಿಯ ಕತ್ರಿಕೆನಹಳ್ಳಿ, ಲಕ್ಕವನಹಳ್ಳಿ, ಪಟ್ರೆಹಳ್ಳಿ, ಗುಡ್ಲು, ಆಲೂರು, ಪಿಟ್ಲಾಲಿ, ಕಸವನಹಳ್ಳಿ, ರಂಗನಾಥಪುರ, ಉಪ್ಪಳಗೆರೆ, ದೊಡ್ಡಕಟ್ಟೆ, ಹೊಸಯಳನಾಡು, ಟಿ-ನಾಗೆನಹಳ್ಳಿ, ಕೊಡ್ಲಹಳ್ಳಿ. ಮಸ್ಕಲ್‌, ಬ್ಯಾಡ್‌ರಹಳ್ಳಿ, ದೇವರುಕೊಟ್ಟ, ತೊರೆಬಿರನಹಳ್ಳಿ, ಒಬೇನಹಳ್ಳಿ, ಕಂಬದಹಳ್ಳಿ, ಬಿದರಿಕೆರೆ, ಶಂಕರನಹಳ್ಳಿ ಹಾಗೂ ಶಿಡ್ಲಯ್ಯನಕೋಟೆ ಮೂಲಕ ನೀರು ಹರಿದು ಚಳ್ಳಕೆರೆ ತಾಲೂಕು ಪ್ರವೇಶಿಸಲಿದೆ. ನಂತರ ಚಳ್ಳಕೆರೆ ತಾಲೂಕಿನ ಬೊಂಬೇರನಹಳ್ಳಿ, ಚೌಳೂರು, ಪರಶುರಾಂಪುರ, ಬಳಿ ನಿರ್ಮಿಸಿರುವ ಬ್ಯಾರೇಜು ಸೇರಲಿದೆ.

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!