ರಾಯಚೂರು: ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ನಿಂದ ನೀರು!

By Kannadaprabha NewsFirst Published Nov 3, 2023, 9:46 PM IST
Highlights

ಮುಂಗಾರು ಹಂಗಾಮಿನಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗದೇ ಬೆಳೆಗಳು ಈಗಾಗಲೇ ಒಣಗಿ ಹೋಗಿದ್ದು, ರೈತರು ಮಹಾನಗರಗಳಿಗೆ ಗೂಳೇ ಹೋಗಲು ಮುಂದಾಗಿದ್ದಾರೆ, ಇನ್ನು ಕೆಲವು ರೈತರು ಉಳಿದ ಬೆಳೆ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಟ್ಯಾಂಕರ್‌ಗಳಿಂದ ನೀರು ತಂದು ಹಾಕುತ್ತಿದ್ದಾರೆ.

ಮಸ್ಕಿ(ನ.03):  ತಾಲೂಕಿನ ಬುದ್ದಿನ್ನಿ (ಎಸ್) ಗ್ರಾಮದ ರೈತ ಸಾಲ ಮಾಡಿಬೆಳೆದ ಮೆಣಸಿನ ಕಾಯಿ ಬೆಳೆ ಮಳೆ ಇಲ್ಲದೆ ಒಣಗುತ್ತಿದ್ದು, ಟ್ಯಾಂಕರ್‌ ಮೂಲಕ ನೀರನ್ನು ಹಾಕಿ ಬೆಳೆ ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗದೇ ಬೆಳೆಗಳು ಈಗಾಗಲೇ ಒಣಗಿ ಹೋಗಿದ್ದು, ರೈತರು ಮಹಾನಗರಗಳಿಗೆ ಗೂಳೇ ಹೋಗಲು ಮುಂದಾಗಿದ್ದಾರೆ, ಇನ್ನು ಕೆಲವು ರೈತರು ಉಳಿದ ಬೆಳೆ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಟ್ಯಾಂಕರ್‌ಗಳಿಂದ ನೀರು ತಂದು ಹಾಕುತ್ತಿದ್ದಾರೆ.

ಕೈಕೊಟ್ಟ ಮಳೆ: ದಿನೇ ದಿನ ಬಿಗಡಾಯಿಸುತ್ತಿರುವ ಬರ..!

ಮಸ್ಕಿ ತಾಲೂಕನ್ನು 2ನೇ ಹಂತದಲ್ಲಿ ತೀವ್ರ ಬರಪೀಡಿತ ತಾಲೂಕು ಎಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ. ರೈತರು ಲಕ್ಷಾಂತರ ರುಪಾಯಿ ಸಾಲ ತಂದು ಬೆಳೆ ಮಾಡಿದ್ದು, ಮಳೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಮ್ಮ ಹೋಲದಲ್ಲಿ 5 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಮಳೆಯಾಗದೇ ಬೆಳೆಗಳು ಒಣಗುತ್ತಿವೆ. ಆದ್ದರಿಂದ 5 ಟ್ಯಾಂಕರ್‌ಗಳಿಂದ ಮೆಣಸಿನ ಗಿಡಗಳಿಗೆ ನೀರು ಹಾಕುತ್ತಿದ್ದೇವೆ ಎಂದು  ನಾಗಲಾಪೂರ ರೈತ ಮಲ್ಲಪ್ಪ ತಿಳಿಸಿದ್ದಾರೆ.  

click me!