Mysuru : ನಿರುಪಯುಕ್ತ ಹೆಲ್ಮೆಟ್‌ಗಳ ಮೂಲಕ ಪಕ್ಷಿಗಳಿಗೆ ನೀರು!

By Kannadaprabha News  |  First Published Mar 12, 2023, 5:29 AM IST

ಬೇಸಿಗೆ ಬಂತೆಂದರೆ ಪ್ರಾಣಿ ಪಕ್ಷಿಗಳು ನಿರಿಗಾಗಿ ಹುಡುಕಾಡಿ ಚಡಪಡಿಸುತ್ತವೆ. ಇದಕ್ಕಾಗಿ ನಗರದ ಶೇಷಾದ್ರಿಪುರಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಡಾ.ಆರ್‌. ರಾಘವೇಂದ್ರ ಅವರು ಬೇಸಿಗೆಯಲ್ಲಿ ಪಕ್ಷಿಗಳಿಗೆ ನಿರುಪಯುಕ್ತ ಹೆಲ್ಮೆಟ್‌ಗಳ ಮೂಲಕ ನೀರುಣಿಸುತ್ತಿದ್ದಾರೆ.


  ಮೈಸೂರು :  ಬೇಸಿಗೆ ಬಂತೆಂದರೆ ಪ್ರಾಣಿ ಪಕ್ಷಿಗಳು ನಿರಿಗಾಗಿ ಹುಡುಕಾಡಿ ಚಡಪಡಿಸುತ್ತವೆ. ಇದಕ್ಕಾಗಿ ನಗರದ ಶೇಷಾದ್ರಿಪುರಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಡಾ.ಆರ್‌. ರಾಘವೇಂದ್ರ ಅವರು ಬೇಸಿಗೆಯಲ್ಲಿ ಪಕ್ಷಿಗಳಿಗೆ ನಿರುಪಯುಕ್ತ ಹೆಲ್ಮೆಟ್‌ಗಳ ಮೂಲಕ ನೀರುಣಿಸುತ್ತಿದ್ದಾರೆ.

ಹಾಳಾದ, ಕಿತ್ತು ಹೋಗಿರುವ, ಉಪಯೋಗಕ್ಕೆ ಬಾರದೆ ಇರುವ ಹಳೆಯ ಹೆಲ್ಮೆಟ್‌ಗಳನ್ನು ಸಾರ್ವಜನಿಕರ ಬಳಿಗೆ ಹೋಗಿ ಕೇಳಿ ಪಡೆದು, ಮಾರ್ಗದ ಬದಿಯಲ್ಲಿ ಎಸೆದ ಹೆಲ್ಮೆಟ್‌ಗಳನ್ನು ಸಹೋದ್ಯೋಗಿಗಳು ಮತ್ತು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳೊಂದಿಗೆ ಹೆಕ್ಕಿ ಸಂಗ್ರಹಿಸಿ ತಂದು ಸ್ವಚ್ಛಗೊಳಿಸಿ, ಅದರ ಒಳಗಿನ ಕುಶನ್‌, ಥರ್ಮಕೋಲ್‌ ಅನ್ನು ತೆಗೆದು, ಪಕ್ಷಿಗಳು ಕುಳಿತು ನೀರನ್ನು ಕುಡಿಯಲು ಅನುಕೂಲವಾಗುವಂತೆ ತಯಾರು ಮಾಡಿಸಿದ್ದಾರೆ.

Latest Videos

undefined

ಇದನ್ನು ಹೆಬ್ಬಾಳಿನಲ್ಲಿರುವ ಲಕ್ಷಿ ್ಮೕಕಾಂತನಗರದ ಉದ್ಯಾನವನಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಮರಗಳಲ್ಲಿ ಅವುಗಳನ್ನು ತೂಗಿ ಹಾಕಿ ಅದರಲ್ಲಿ ಕಾಳುಕಡ್ಡಿಗಳು ಮತ್ತು ನೀರನ್ನು ಹಾಕಿ ಪಕ್ಷಿಗಳಿಗೆ ಉಣಬಡಿಸುತ್ತಿದ್ದಾರೆ. ಪ್ರತಿ ಮೂರು ದಿನಗಳಿಗೊಮ್ಮೆ ಅವುಗಳಿಗೆ ಧಾನ್ಯ ಮತ್ತು ನೀರನ್ನು ಪೂರೈಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪಕ್ಷಿ ಹಬ್ಬ

ಉಡುಪಿ ಮತ್ತು ಶಿವಮೊಗ್ಗ ಗಡಿ ಭಾಗದಲ್ಲಿರುವ ಕೊಡಚಾದ್ರಿ ಯಾರಿಗೆ ಇಷ್ಟ ಇಲ್ಲ ಹೇಳಿ. ಚಾರಣ ಪ್ರಿಯರಿಗೆ, ಕೊಲ್ಲೂರು ಶ್ರೀ ಮೂಕಾಂಬಿಕೆಯ ಭಕ್ತರಿಗೆ ಇಷ್ಟವಾಗುವ ಸ್ಥಳ ಸದ್ಯ ಪಕ್ಷಿ ಪ್ರಿಯರಿಗೂ ಇಷ್ಟವಾಗುತ್ತಿದೆ. ಇಲ್ಲಿರುವ 300 ಬಗೆಯ ವಿವಿಧ ಪ್ರಭೇದ ಪಕ್ಷಿಗಳ ವಿಕ್ಷಣೆಗಂತಲೇ ಮೂರು ದಿನಗಳ ಕಾಲ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ.

ಉಡುಪಿ ಜಿಲ್ಲೆಗೆ ಭೇಟಿ ನೀಡುವ ಬಹುತೇಕ ಪ್ರವಾಸಿಗರೂ ಉಡುಪಿ ಶ್ರೀಕೃಷ್ಣ ಮಠ, ಮಲ್ಪೆ ಬೀಚ್ ಬಿಟ್ಟರೆ ಅತೀ ಹೆಚ್ಚುವ ಸಂದರ್ಶಿಸುವ ಸ್ಥಳ ಕೊಲ್ಲೂರು ಕೊಡಚಾದ್ರಿ. ಪ್ರಕೃತಿ ಸೌಂದರ್ಯದ ರಾಶಿ ಮಧ್ಯೆ ಕುಳಿತ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕೆಯನ್ನು ನೋಡುವುದೆ ಒಂದು ಸೊಗಸು. ಟೆಂಪಲ್ ವಿಸಿಟ್ ಜೊತೆಗೆ ವರ್ಷದಲ್ಲಿ ಲಕ್ಷಾಂತರ ಜನ ಪ್ರವಾಸಿಗರು, ಚಾರಣದ ಮಜ ಅನುಭವಿಸಲು ಇಲ್ಲಿನ ಕೊಡಚಾದ್ರಿ ಗೆ ಭೇಟಿ ನೀಡುತ್ತಾರೆ. ಸದ್ಯ ಇದೇ ಪ್ರಕೃತಿ ಮತ್ತು ದೇವರ ಸಮಾಗಮವಾಗಿರುವ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮೂರು ದಿನಗಳ ಹಕ್ಕಿ ಹಬ್ಬ ಆಯೋಜನೆಯಾಗಿದೆ. ದೇಶ ವಿದೇಶದಿಂದ ಹಕ್ಕಿಗಳ ವೀಕ್ಷಣೆಗೆ ಸದ್ಯ ಕೊಲ್ಲೂರು ಗೆ ಆಗಮಿಸುತ್ತಿದ್ದು, ಇಂದು ಕೊಲ್ಲೂರು ಸಮೀಪದ ಹಾಲ್ಕಲ್ ಬಳಿ ಈ ವಿನೂತನ ಹಕ್ಕಿ ಹಬ್ಬ ಉದ್ಘಾಟನೆ ನಡೆಯಿತು.

Madikeri: ಪಕ್ಷಿಪ್ರೇಮಿಗಳ ಮನಸ್ಸಲ್ಲಿ ಕಲರವ ತಂದ ಹಕ್ಕಿ ಹಬ್ಬ

300 ಕ್ಕೂ ಅಧಿಕ ಹಕ್ಕಿ ವೀಕ್ಷಣೆ: ಕೊಲ್ಲೂರು ಅಭಯಾರಣ್ಯ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಹಲವು ಬಗೆಯ ಅಪರೂಪದ ಹಕ್ಕಿಗಳ ಬಗ್ಗೆ ಹಕ್ಕಿ ಹಬ್ಬದ ಮೂಲಕ ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕೋ ಟೂರಿಸಂ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಹಲವು ಭಾಗಗಳಲ್ಲಿ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ. ಪಶ್ಚಿಮ‌ ಘಟ್ಟದ ತಪ್ಪಲು ಪ್ರದೇಶದಲ್ಲಿ ವಲಸೆ ಮತ್ತು ಸ್ಥಳೀಯ ಸುಮಾರು 300 ಕ್ಕೂ ಹೆಚ್ಚು ಹಕ್ಕಿಗಳಿದ್ದು ಈ ಬಗ್ಗೆ ಸಾರ್ವಜನಿಕ ರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮುದಾಯದ ಬೆಂಬಲವಿಲ್ಲದೆ ಪಕ್ಷಿಗಳ ರಕ್ಷಣೆ ಸಾಧ್ಯವಿಲ್ಲ ಎನ್ನುವುದನ್ನು ಮನಗಂಡ ಇಲಾಖೆ, ಸಮುದಾಯದ ಜೊತೆಗೂಡಿ ಕಾರ್ಯಕ್ರಮ ವಿಶೇಷವಾಗಿ ರೂಪಿಸಿದೆ. 

ಮಲಬಾರ್ ಟ್ರೋಗನ್ ರಾಯಭಾರಿ ಹಕ್ಕಿ: ಈ ಬಾರಿಯ ಹಕ್ಕಿಹಬ್ಬ ದಲ್ಲಿ ಮಲಬಾರ್ ಟ್ರೋಗನ್ ರಾಯಭಾರಿ ಹಕ್ಕಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಕಾಡಿನ ಮಧ್ಯೆ ಹಕ್ಕಿಗಳ ಚಲನವಲನ ಗಮನಿಸಿ ಆಸಕ್ತಿಗೆ ಬರ್ಡ್ ವಾಚ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆಯಾಗಿ ಹಕ್ಕಿ ಹಬ್ಬದ ನೆಪದಲ್ಲಿ ರಾಷ್ಟ್ರೀಯ ಮಟ್ಟದ ವನ್ಯ ಜೀವಿ ಛಾಯಾಗ್ರಾಹಕರು ಕೊಲ್ಲೂರಿಗೆ ಬೇಟಿ ನೀಡುತ್ತಿದ್ದಾರೆ. ಸದ್ಯ ಪಕ್ಷಿ ಪ್ರೇಮಿಗಳಿಗೆ ಅಪರೂಪದ ಪಕ್ಷಿಗಳನ್ನು ವೀಕ್ಷಿಸಿ ಆನಂದಿಸುವ ಸದಾವಕಾಶ ಇಲಾಖೆ ಈ ಮೂಲಕ ನೀಡಿದೆ ಎಂದರೆ ತಪ್ಪಾಗಲಾರದು.

ಕೊಡಚಾದ್ರಿ ಸೇರಿ ದೇಶದ 18 ಕಡೆ ಶೀಘ್ರ ರೋಪ್‌ವೇ: ಕೇಂದ್ರದಿಂದ ಟೆಂಡರ್‌

click me!