ಜಾತಿ, ಧರ್ಮದ ಹೆಸರಲ್ಲಿ ಆಗೋಚರ ಯುದ್ಧ ನಡೆಯುತ್ತಿದೆ: ಸೊಗಡು ಶಿವಣ್ಣ

By Kannadaprabha News  |  First Published Jul 29, 2022, 1:20 PM IST

ಹತ್ಯೆಯಾದ ಪ್ರವೀಣ್‌ ನೆಟ್ಟಾರ್‌ರನ್ನು ನೆನೆದು ಗದ್ಗತಿತರಾದ ಮಾಜಿ ಸಚಿವ ಸೊಗಡು ಶಿವಣ್ಣ 


ತುಮಕೂರು(ಜು.29): ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದೇಶದಲ್ಲಿ ಅಗೋಚರ ಯುದ್ಧ ನಡೆಯುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆತಂಕ ವ್ಯಕ್ತಪಡಿಸಿದರು. ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ವಾತಂತ್ರ್ಯ ಬಳಿಕ ದೇಶ ವಿಭಜನೆಗೊಂಡು ಅಂದಿನಿಂದ ಇಂದಿನವರೆಗೆ ಹಿಂದೂಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಹಿಂದೂ, ಮುಸ್ಲಿಮರು ಪರಸ್ಪರ ಹೊಂದಾಣಿಕೆಯಿಂದ ಬಾಳಲು ಕೆಲವು ಪಾಪಿಗಳು ಬಿಡುತ್ತಿಲ್ಲ. ಇಂದು ಸಹ ದೇಶ ವಿಭಜನೆ ಕೃತ್ಯಗಳು ನಡೆಯುತ್ತಿದ್ದು, ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜನೆ ಮಾಡಿ ಕೆಲವು ಪಕ್ಷಗಳ ನಾಯಕರು, ಜಾತಿ ದೇವರುಗಳ ರೂಪ ಪಡೆದು ಟೆರರಿಸ್ಟ್‌ಗಳ ಕೈಗೆ ಅಧಿಕಾರವನ್ನು ಒಪ್ಪಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜಕಾರಣಿಗಳು ಅಧಿಕಾರಿಗಳನ್ನ ಏಜೆಂಟರಂತೆ ಬಳಸಿಕೊಳ್ಳುತ್ತಿದ್ದು, ಅವರು ಮುಕ್ತವಾಗಿ ಅಧಿಕಾರ ನಡೆಸಲು ಬಿಡುತ್ತಿಲ್ಲ. ಈ ಕಾರಣದಿಂದಾಗಿ ಸಮಾಜ ಇಂದು ಕೊಲೆ, ಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ದೇಶ ಮತ್ತು ರಾಜ್ಯದಲ್ಲಿ ಅನೇಕ ಹಿಂದೂಗಳ ಹತ್ಯೆ ನಡೆಯುತ್ತಿದ್ದು, ಇದರಿಂದ ಬೇಸರಗೊಂಡ ಬಿಜೆಪಿಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ. ಇದರ ಅಗತ್ಯವಿಲ್ಲ. ನ್ಯಾಯಕ್ಕಾಗಿ ಎಲ್ಲರೂ ಬೀದಿಗಿಳಿದು ಹೋರಾಟ ಮಾಡುವಂತೆ ಸಲಹೆ ನೀಡಿದರು.

Tap to resize

Latest Videos

Praveen Nettaru Murder Case :ಕೊಲೆಗಡುಕರಿಗೆ ಕಂಡಲ್ಲಿ ಗುಂಡಿಕ್ಕಿ: ಉಮೇಶ

ಗಾಂಧಿ ಮತ್ತು ಸುಭಾಶ್‌ ಚಂದ್ರಬೋಸ್‌ ಅವರ ಎರಡೂ ರೀತಿಯ ಹೋರಾಟಗಳನ್ನು ನಾವು ನೋಡಿದ್ದು, ಪರಿಸ್ಥಿತಿ ಸರಿಯಾಗದಿದ್ದರೆ ಈಗ ಮತ್ತೆ ಅಂತಹ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಎಲ್ಲಾ ಮುಸ್ಲಿಂರ ವೀಸಾಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಸೊಗಡು ಶಿವಣ್ಣ ಆಗ್ರಹಿಸಿದರು.

ಕಣ್ಣೀರಿಟ್ಟ ಸೊಗಡು:

ಪತ್ರಿಕಾಗೋಷ್ಠಿ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಹತ್ಯೆಯಾದ ಪ್ರವೀಣ್‌ ನೆಟ್ಟಾರ್‌ರನ್ನು ನೆನೆದು ಗದ್ಗತಿತರಾದರು. ಬಾಳಿ ದೇಶವನ್ನು ಬೆಳಗಬೇಕಾದ ಯುವಕರು ಈ ರೀತಿ ಹತ್ಯೆಯಾಗುತ್ತಿರುವುದು ನೋವಾಗುತ್ತಿದೆ ಎಂದು ಕಣ್ಣೀರಾದರು.
 

click me!