ಅಧಿಕಾರಿ ಗೈರಲ್ಲೆ ಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟ

By Web Desk  |  First Published Sep 2, 2019, 1:40 PM IST

ಚುನಾವಣೆ ಅಧಿಕಾರಿ ಗೈರಿನಲ್ಲೇ ಅಭ್ಯರ್ಥಿ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಪ್ರಕಟ ಮಾಡಲಾಗಿದೆ. ಈ ಮೂಲಕ ಕಾನೂನು ನಿಯಮ ಉಲ್ಲಂಘನೆ ಮಾಡಲಾಗಿದೆ. 


ದಾಬಸ್‌ಪೇಟೆ [ಸೆ.02]:  ಸೋಂಪುರ ಹೋಬಳಿಯ ಬರಗೇನಹಳ್ಳಿ ವಿಎಸ್‌ಎಸ್‌ಎನ್‌ ಸಂಘದ ನೂತನ ನಿರ್ದೇಶಕರ ಆಯ್ಕೆ ಸಂಬಂಧ ಚುನಾವಣೆ ಸೆ. 8ರಂದು ಘೋಷಣೆಯಾಗಿದ್ದು ಆಗಸ್ಟ್‌ 31ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸೂಚಿಸಲಾಗಿತ್ತು.

ಸೆ. 1ರಂದು ಚುನಾವಣೆ ರಿಟರ್ನಿಂಗ್‌ ಅದಿಕಾರಿ ರಾಮಾಂಜನೇಯ ಸಂಘದ ಕಚೇರಿಗೆ ಬಂದು ನಾಮಪತ್ರ ಪರಿಶೀಲನೆ ನಡೆಸಿ ಕ್ರಮಬದ್ದವಾದ ನಾಮಪತ್ರಗಳ ಅಭ್ಯರ್ಥಿಗಳ ಹೆಸರನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ದುರಂತ ಎಂದರೆ ಅಧಿಕಾರ ಇಲ್ಲಿಯವರೆಗೂ ಸಂಘದ ಕಚೇರಿಗೆ ಬಂದಿಲ್ಲ ಆದರೂ ಇಲ್ಲಿನ ಕಾಯಾನಿರ್ವಾಣಾಧಿಕಾರಿ ಹಾಗೂ ಲೆಕ್ಕಪರಿಶೋಧಕರು ಸೇರಿದಂತೆ ಸಿಬ್ಬಂದಿ ರಿಟರ್ನಿಂಗ್‌ ಅಧಿಕಾರಿ ಗೈರು ಹಾಜರಿಯಲ್ಲೇ ಅಭ್ಯರ್ಥಿಗಳ ಹೆಸರನ್ನು ಸೂಚನಾಫಲಕದಲ್ಲಿ ಪ್ರಕಟಿಸಿ, ಕಾನೂನು ಉಲ್ಲಂಘಿಸಿದ್ದು, ಚುನಾವಣೆ ಮುಂದೂಡಬೇಕೆಂದು ಸಂಘದ ಷೇರುದಾರ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಷೇರುದಾರರರ ಆರೋಪ : ಈ ಸಹಕಾರ ಸಂಘದಲ್ಲಿ ಹಲವಾರು ವರ್ಷಗಳಿಂದ ಷೇರುದಾರರಾಗಿದ್ದರೂ ನಮಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೆ ಮೋಸದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಎಷ್ಟುನಾಮಪತ್ರ ಸಲ್ಲಿಕೆಯಾಗಿವೆ, ಇವುಗಳ ಪೈಕಿ ಎಷ್ಟುಸಿಂಧು ಆಗಿದೆ ಎಂಬ ಮಾಹಿತಿಯನ್ನು ನೀಡುತ್ತಿಲ್ಲ.  ಇದಕ್ಕೆ ಕಾರಣವೇನು ಎಂದು ಸಿಇಒ ರೂಪ ಅವರನ್ನು ಪ್ರಶ್ನಿಸಿದರು.

ಕೆಲವರಿಗಷ್ಟೇ ಆದ್ಯತೆ: ಷೇರುದಾರ ಜಯಣ್ಣ ಮಾತನಾಡಿ, ಸಂಘದ 1800ಕ್ಕೂ ಹೆಚ್ಚು ಸದಸ್ಯರಲ್ಲಿ ಕೇವಲ 35 ಜನರನ್ನು ಮಾತ್ರ ಷೇರುದಾರರನ್ನಾಗಿಸಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಒ ರೂಪ ಹಾಗೂ ಲೆಕ್ಕಪರಿಶೋಧಕ ಶ್ರೀನಿವಾಸ್‌, ಈ ಬಗ್ಗೆ ರಿಟರ್ನಿಂಗ್‌ ಅಧಿಕಾರಿ ಬಂದು ಎಲ್ಲ ತಿಳಿಸುತ್ತಾರೆ ಎಂದು ಉತ್ತರ ನೀಡಿದರು.

click me!