ಮೈಸೂರು ಜಿಲ್ಲೆಯಲ್ಲೂ ವೋಟರ್‌ಗೇಟ್‌ ಹಗರಣ

By Kannadaprabha NewsFirst Published Nov 30, 2022, 6:12 AM IST
Highlights

ಮತದಾರರ ಪಟ್ಟಿಪರಿಷ್ಕರಣೆ ಹೆಸರಿನಲ್ಲಿ ಜಿಲ್ಲೆಯಲ್ಲಿಯೂ ಮತಪಟ್ಟಿಗೆ ಕನ್ನ ಹಾಕಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌ ಆರೋಪಿಸಿದರು.

ಮೈಸೂರು (ನ.3):  ಮತದಾರರ ಪಟ್ಟಿಪರಿಷ್ಕರಣೆ ಹೆಸರಿನಲ್ಲಿ ಜಿಲ್ಲೆಯಲ್ಲಿಯೂ ಮತಪಟ್ಟಿಗೆ ಕನ್ನ ಹಾಕಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌ ಆರೋಪಿಸಿದರು.

(Benga;uru)  ಮಾದರಿಯಲ್ಲಿ ಮೈಸೂರಿನಲ್ಲಿಯೂ ಗೆ (Voter List)  ಕನ್ನ ಹಾಕಲಾಗಿದೆ. ಜಿಲ್ಲೆಯ 1,45,908 ಮತದಾರರನ್ನು ಕಾರಣವಿಲ್ಲದೆ ಕೈಬಿಡಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ವರ್ಗಾವಣೆ, ನಿಧನ, ಎರಡು ಬಾರಿ ನಮೂದಾಗಿದ್ದರೆ ಮಾತ್ರ ತೆಗೆಯಬೇಕು. ಆದರೆ ಕಾರಣವನ್ನೇ ನೀಡದೆ ಹೆಸರು ಕೈಬಿಡಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮತದಾರರ ಪಟ್ಟಿಗೆ ಕನ್ನ ಪ್ರಕರಣದ ಕುರಿತು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರು. ಅಧಿಕಾರಕ್ಕಾಗಿ ಬಿಜೆಪಿ ಅನೈತಿಕ ಮಾರ್ಗ ಹಿಡಿದಿದೆ. ಜನ ಜಾಗೃತರಾಗಬೇಕು. ಪ್ರಜಾಪ್ರಭುತ್ವ ಬುಡಮೇಲು ಮಾಡುವ ಈ ಪ್ರಯತ್ನದ ವಿರುದ್ಧ ಪ್ರಗತಿಪರರು, ಬುದ್ಧಿಜೀವಿಗಳು, ಸಾಹಿತಿಗಳು ದನಿ ಎತ್ತಬೇಕು ಎಂದು ಅವರು ಕೋರಿದರು.

ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿಸಿ ಮತದಾರರ ಹಕ್ಕನ್ನು ಕಸಿಯುತ್ತಿರುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ವಿಧಾನಸೌಧದಿಂದ ಕಾಣೆಯಾಗಿರುವ ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಅವರು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌ ಮಾತನಾಡಿ, ಬೆಂಗಳೂರು ಬಳಿಕ ಮೈಸೂರಿನಲ್ಲಿಯೂ ಮತದಾರರ ಪಟ್ಟಿಪರಿಷ್ಕರಣೆ ವೇಳೆ ಮತದಾರರನ್ನು ಕೈ ಬಿಡಲಾಗಿದೆ. ರಾಜ್ಯವ್ಯಾಪಿ ದೊಡ್ಡ ಜಾಲ ಹರಡಿರುವಂತಿದೆ. ಕೂಡಲೇ ರಾಜ್ಯ ಚುನಾವಣೆ ಆಯೋಗ ಮತದಾರರ ಪಟ್ಟಿಪರಿಷ್ಕರಣೆ ಕೆಲಸ ಸ್ಥಗಿತಗೊಳಿಸಬೇಕು. ಚುನಾವಣಾ ಕೆಲಸದಲ್ಲಿ ನಿಯೋಜಿತ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಹಲವು ದಿನಗಳಿಂದ ಮತದಾರರ ಪಟ್ಟಿಯ ವಿವಾದ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಜೆಡಿಎಸ್‌ ನಾಯಕರ ನಡೆಯನ್ನು ಟೀಕಿಸಿದ ಬಿ.ಜೆ. ವಿಜಯಕುಮಾರ್‌ ಅವರು, ಚುನಾವಣೆಗೂ ಮುನ್ನವೇ ಬಿಜೆಪಿಯೊಂದಿಗೆ ಶಾಮೀಲಾಗಿ ಒಳಸಂಚು ನಡೆಸಿರುವಂತಿದೆ ಎಂದು ಅವರು ಹೇಳಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ ಮಾತನಾಡಿ, ನಗರದ ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡುವರು. ಜನರ ಹಕ್ಕಿಗೆ ಚ್ಯುತಿ ತರುತ್ತಿರುವುದರ ವಿರುದ್ಧ ಆಂದೋಲನ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಭಾಸ್ಕರ್‌ ಎಲ್‌.ಗೌಡ, ಎನ್‌.ಎಸ್‌. ಗೋಪಿನಾಥ್‌, ಮಾಧ್ಯಮ ವಕ್ತಾರ ಮಹೇಶ್‌, ಗಿರೀಶ್‌ ಇದ್ದರು.

ಸಿದ್ದರಾಮಯ್ಯ ಅವರನ್ನು ಟೀಕಿಸುವ ಯೋಗ್ಯತೆ ಸಿ.ಟಿ. ರವಿಗೆ ಇಲ್ಲ. ಉನ್ನತ ಶಿಕ್ಷಣ ಸಚಿವರಾಗಿ ಕುಲಪತಿ ಹುದ್ದೆಗಳಿಗೆ ಹರಾಜಿನಲ್ಲಿ ಆಯ್ಕೆ ಮಾಡಿದವರು ಸಿದ್ದರಾಮಯ್ಯ ಬಗ್ಗೆ ಮಾತಾಡುತ್ತಾರೆ. ಲೂಟಿ ರವಿ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿ ಇದೆ.

- ಎಚ್‌.ಎ. ವೆಂಕಟೇಶ್‌, ಕೆಪಿಸಿಸಿ ವಕ್ತಾರರು.

--- ಹೆಸರಿದೆಯೇ ಪರೀಕ್ಷಿಸಿಕೊಳ್ಳಿ--

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿವೆ. ಚಾಮರಾಜ 16,242, ನರಸಿಂಹರಾಜ 18,007, ವರುಣ 11,987, ನರಸಿಂಹರಾಜ 12,367, ಚಾಮರಾಜ 17,847, ಕೆ.ಆರ್‌. ನಗರ 10,604, ಹುಣಸೂರು 10,220, ಪಿರಿಯಾಪಟ್ಟಣ 8,570, ನಂಜನಗೂಡು 11,724 ಮತದಾರರನ್ನು ಪಟ್ಟಿಯಿಂದ ತೆಗೆದಿದ್ದಾರೆ. ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿಯವರು ಏನನ್ನು ಮಾಡಲಿಕ್ಕೂ ಸಿದ್ಧರಿದ್ದಾರೆ. ದಯಮಾಡಿ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಪರೀಕ್ಷಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮತದಾರರ ಪಟ್ಟಿಪರಿಷ್ಕರಣೆ ಹೆಸರಿನಲ್ಲಿ ಜಿಲ್ಲೆಯಲ್ಲಿಯೂ ಮತಪಟ್ಟಿಗೆ ಕನ್ನ ಹಾಕಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌ ಆರೋಪಿಸಿದರು.

ಬೆಂಗಳೂರು ಮಾದರಿಯಲ್ಲಿ ಮೈಸೂರಿನಲ್ಲಿಯೂ ಮತಪಟ್ಟಿಗೆ ಕನ್ನ ಹಾಕಲಾಗಿದೆ. ಜಿಲ್ಲೆಯ 1,45,908 ಮತದಾರರನ್ನು ಕಾರಣವಿಲ್ಲದೆ ಕೈಬಿಡಲಾಗಿದೆ.

click me!